ಬಳ್ಳಾರಿ

ಕಲೆ, ಸಾಹಿತ್ಯ, ಸಂಗೀತ ಜೀವನದ ಅವಿಭಾಗ್ಯ ಅಂಗಗಳು

Published On :

ಕೂಡ್ಲಿಗಿ: ಕಲೆ, ಸಾಹಿತ್ಯ, ಸಂಗೀತ ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಮನುಷ್ಯ ಉತ್ತಮ ನಾಗರಿಕನಾಗಿ ಬಾಳಲು ಸಾಂಸ್ಕೃತಿಕ ಪರಂಪರೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀ ರೇಣುಕ ಪ್ರೌಢಶಾಲೆ ಮುಖ್ಯಗುರು ಬಿ.ಚಂದ್ರಶೇಖರ ಅಭಿಪ್ರಾಯಪಟ್ಟರು.
ಶನಿವಾರ ಪಟ್ಟಣದ ಶ್ರೀ ರೇಣುಕಾ ಪ್ರೌಢಶಾಲೆಯಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಸುಗಮ ಸಂಗೀತ ಹಾಗೂ ತತ್ವ ಪದಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.
ಭಜನಾ ಕಲಾವಿದ ಬಿ. ನರಸಿಂಹಪ್ಪ ಮಾತನಾಡಿ, ಕಲಾವಿದರ ಬದುಕು ಅತಂತ್ರವಾಗುತ್ತಿದ್ದು, ತೆರೆ ಮರೆಯಲ್ಲಿ ಬದುಕುತ್ತಿರುವ ಹಿರಿಯ ಕಲಾವಿದರಿಗೆ ಸರ್ಕಾರ, ಸಂಘಟನೆಗಳು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕೆಂದು ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ತಾಲೂಕಿನ ರಾಮಸಾಗರಹಟ್ಟಿಯ ಆರ್.ಬಿ. ಗುರುಶಂಕ್ರಪ್ಪ ತತ್ವಪದಗಳ ಗಾಯನ ವಿದ್ಯಾರ್ಥಿಗಳಿಗೆ ಮುದ ನೀಡಿತು. ಬಳಿಕ ಗಿರಿಜನ ಉಪ ಯೋಜನೆಯಡಿ ಕೂಡ್ಲಿಗಿಯ ಬಿ. ನರಸಿಂಹಪ್ಪ ಅವರ ಸುಗಮ ಸಂಗೀತ ಗಾಯನ ಶ್ರೋತೃಗಳಿಗೆ ಮೋಡಿ ಮಾಡಿತು. ಹಿಂದಿ ಶಿಕ್ಷಕ ಎಂ. ಶಫೀವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯೆ ಗಂಗಮ್ಮ, ಹಿರಿಯ ಕಲಾವಿದ ವಿಭೂತಿ ವೀರಣ್ಣ, ಮಂಜುಳಾ ದಳವಾಯಿ, ಕಂಡಕ್ಟರ್ ಸೋಮಣ್ಣ ಉಪಸ್ಥಿತರಿದ್ದರು.
--
ಹೂವಿನಹಡಗಲಿ: ಮಕ್ಕಳ ಸಮೀಕ್ಷಾ ಕಾರ್ಯ ಆರಂಭ

ಹೂವಿನಹಡಗಲಿ: ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯ ತಾಲೂಕಿನಲ್ಲಿ ಆರಂಭವಾಗಿದೆ ಎಂದು ಸಮೀಕ್ಷಾ ಕಾರ್ಯದ ನೋಡೆಲ್ ಅಧಿಕಾರಿ ಸಿ.ಜೆ. ಮಲ್ಲಪ್ಪ ತಿಳಿಸಿದ್ದಾರೆ.
ತಾಲೂಕಿನ ಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಲು 12 ವಲಯಗಳ ಮಾಡಲಾಗಿದೆ. ವಿಭಿನ್ನತೆ ಹಾಗೂ ವೈಪರೀತ್ಯ ಹೊಂದಿದ ವಲಯಗಳಲ್ಲಿ ಹೂವಿನಹಡಗಲಿ ಪಟ್ಟಣ, ಹಡಗಲಿ ಗ್ರಾಮೀಣ, ಹಗರನೂರು, ಹಿರೇಮಲ್ಲನಕೆರೆ, ಹಿರೇಹಡಗಲಿ, ಸೋವೇನಹಳ್ಳಿ, ಸೋಗಿ, ನಾಗತಿಬಸಾಪುರ, ಕಾಂತೇಬೆನ್ನೂರು ವಲಯಗಳನ್ನು ಗುರುತಿಸಲಾಗಿದೆ. 101 ತಂಡ ಈ ವಲಯಗಳಲ್ಲಿ ಸಮೀಕ್ಷೆ ನಡೆಸಲಿದೆ. ಸಾಮಾನ್ಯ ವಲಯಗಳಾಗಿ ಮೈಲಾರ, ಹೊಳಲು, ಇಟ್ಟಿಗಿ ವಲಯಗಳನ್ನು ಗುರುತಿಸಿದ್ದು, ಈ ವಲಯಗಳಲ್ಲಿ 25 ತಂಡಗಳು ಸಮೀಕ್ಷಾ ಕಾರ್ಯ ಕೈಗೊಳ್ಳಲಿವೆ.
 ಬಿಇಒ ಕೊಟ್ರೇಶ್, ಕಡ್ಡಾಯ ಶಿಕ್ಷಣ ಜಾರಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದೆಂಬ ಉದ್ದೇಶದಿಂದ ಮುಂಬರುವ ಶೈಕ್ಷಣಿಕ ವರ್ಷದಿಂದ ಮತ್ತೆ ಶಾಲೆಗೆ ಕರೆ ತರಲು ಈ ಸಮೀಕ್ಷಾ ಕಾರ್ಯ ನೆರವಾಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.