ಬಿಜೆಪಿ ಎಸ್ಸಿ ಮೋರ್ಚಾ: ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಸೂಚನೆ ಮೇರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಹರಿಗೌಡ ನೇಮಕದ ಆದೇಶ ಹೊರಡಿಸಿ, ಪಕ್ಷದ ಸಂಘಟನೆಯಲ್ಲಿ ತೊಡಗಿ, ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸುವಂತೆ ನೂತನ ಪದಾಧಿಕಾರಿಗಳಿಗೆ ಸೂಚಿಸಿದ್ದಾರೆ. ಬಿಜೆಪಿ ಎಸ್ಸಿ ಮೋರ್ಚಾ ಘಟಕದ ಜಿಲ್ಲಾಧ್ಯಕ್ಷರಾಗಿ ಕೊಡ್ಲಿ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿಗಳಾಗಿ ಡಿ. ಗೋವಿಂದ, ಎಚ್.ಬಿ. ಧರ್ಮನಾಯ್ಕ ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೂವಿನಹಡಗಲಿ: ಸ್ಮರಣ ಸಂಚಿಕೆಗೆ ಲೇಖನ ಆಹ್ವಾನ
ಹೂವಿನಹಡಗಲಿ: ಅಭಿನವ ಸರ್ವ ಎಂದು ಖ್ಯಾತನಾಮರಾದ ಸರ್ವಜ್ಞನ ವಚನಗಳನ್ನು ಸಂಗ್ರಹಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ರೆವರೆಂಡ್ ಉತ್ತಂಗಿ ಚನ್ನಪ್ಪ ಇವರ ತವರೂರು ತಾಲೂಕಿನ ಉತ್ತಂಗಿ ಗ್ರಾಮದ ಗುಡೇಕೋಟಿ ಕರಿಬಸಪ್ಪ ಸಮಾಹಿಪ್ರಾ ಶಾಲೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊರ ತರಲು ಉದ್ದೇಶಿಸಿರುವ ಸ್ಮರಣ ಸಂಚಿಕೆಗೆ ಲೇಖನ ಮತ್ತು ಬರಹಗಳನ್ನು ಆಹ್ವಾನಿಸಲಾಗಿದೆ. ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಸಾಹಿತ್ಯಾಸಕ್ತರು ಶಿಕ್ಷಣಕ್ಕೆ ಸಂಬಂಧಿತ ಕಥೆ, ಕವನ, ಲೇಖನ ಇನ್ನಿತರೆ ಬರೆಹಗಳನ್ನು ಮುಖ್ಯ ಶಿಕ್ಷಕರು, ಗು.ಕ. ಸಮಾಹಿಪ್ರಾ ಶಾಲೆ, ಉತ್ತಂಗಿ ಈ ವಿಳಾಸಕ್ಕೆ ಈ ತಿಂಗಳಾಂತ್ಯದೊಳಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ-8105550627 ಸಂಪರ್ಕಿಸಬಹುದೆಂದು ಶಿಕ್ಷಕ ಚನ್ನಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೇವಣ್ಣ ಜನ್ಮದಿನಾಚರಣೆ: ಹಣ್ಣು, ಬ್ರೆಡ್ ವಿತರಣೆ
ಬಳ್ಳಾರಿ: ಮಾಜಿ ಸಚಿವ, ಸಮಾಜದ ಹಿರಿಯ ಮುಖಂಡ ಎಚ್.ಎಂ. ರೇವಣ್ಣ ಅವರ 64ನೇ ಜನ್ಮದಿನಾಚರಣೆ ನಿಮಿತ್ತ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದಿಂದ ನಗರದ ಮೂಕ ಮತ್ತು ಕಿವುಡರ ಶಾಲೆಯಲ್ಲಿ ಮಕ್ಕಳಿಗೆ ಹಣ್ಣು, ಬ್ರೆಡ್ಗಳನ್ನು ವಿತರಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್ ಮಕ್ಕಳಿಗೆ ಹಣ್ಣು-ಹಂಪಲು, ಬ್ರೆಡ್ ವಿತರಿಸಿದ ಬಳಿಕ ಮಾತನಾಡಿದರು. ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಕೆ. ಹೊನ್ನಪ್ಪ, ಭತ್ರಿ ರಾಘವೇಂದ್ರ, ಕರೂರು ವಿರೂಪಾಕ್ಷಿ, ಕೆ. ಮಂಜುನಾಥ, ಅಸುಂಡಿ ಪರಮೇಶ್, ಕೆಂಚಪ್ಪ, ಈರನಗೌಡ, ಶಿವಕುಮಾರ್, ಧನುಂಜಯ, ಶಿವರಾಂ, ಭತ್ರಿ ಪುರುಷೋತ್ತಮ, ಬನ್ನಿಹಟ್ಟಿ ಅನಂತ ಕುಮಾರ್, ಬೆಣಕಲ್ಲು ಬಸವರಾಜ, ಕಲ್ಲುಕಂಭ ಆಗಲೂರಪ್ಪ, ಬೆಣಕಲ್ಲು ಗಂಗಾಧರ, ಕೇಶವ, ಕೊಳಗಲ್ಲು ಗವಿಸಿದ್ದ, ಅಂದೇಶ್ ಕುರಿ, ಯುಗಂಧರ್, ಕೆ. ಅನಿಲ್ಕುಮಾರ್ ಸದಸ್ಯರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

