ಬಳ್ಳಾರಿ

ಕ್ಯಾಮೆರಾ ಅಳವಡಿಕೆ: ಅಕ್ರಮ ಸಾಗಾಣಿಕೆಗೆ ಬ್ರೇಕ್

Published On :

ಹೂವಿನಹಡಗಲಿ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ದಾಸ್ತಾನು ಮಾಡುವ ಮಳಿಗೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆಯಿಂದಾಗಿ ಅನಧಿಕೃತ ಅಕ್ಕಿ ಸಾಗಾಣಿಕೆಗೆ ಬ್ರೇಕ್ ಬಿದ್ದಂತಾಗಿದೆ.
ತಾಲೂಕಿನ ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ವಿತರಿಸಬೇಕಾಗಿದ್ದ ಅಕ್ಕಿ ಮತ್ತು ಇತರೆ ಆಹಾರ ಧಾನ್ಯ ಯಾವ ಕಾರಣಕ್ಕೂ ಕಳ್ಳ ಸಾಗಾಣಿಕೆ ಆಗಬಾರದೆಂಬ ಉದ್ದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಕ್ಕಿ ದಾಸ್ತಾನು ಮಳಿಗೆಗಳಿಗೆ ತಿಂಗಳಿನಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಕನ್ನಡಪ್ರಭ ವರದಿ ಮಾಡಿತ್ತು: ತಿಂಗಳ ಹಿಂದೆ ಪಟ್ಟಣದ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯಲ್ಲಿ 69 ಅರ್ಹ ಬಿಪಿಎಲ್ ಮತ್ತು ಅನ್ನ ಅಂತೋದ್ಯಯ ಪಡಿತರ ಫಲಾನುಭವಿಗಳಿಗೆ ಸಿಗಬೇಕಿದ್ದ 14 ಕ್ವಿಂಟಾಲ್ ಅಕ್ಕಿಯನ್ನು ದುರ್ಬಳಕೆ ಮಾಡಿಕೊಂಡ ಕುರಿತು 'ಕನ್ನಡಪ್ರಭ' ಸಚಿವರ ಕ್ಷೇತ್ರದಲ್ಲೇ ಅನ್ನಭಾಗ್ಯಕ್ಕೆ ಕನ್ನ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರ ಪರಿಣಾಮವಾಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ರಾಜ್ಯ ಸಚಿವರು ತನಿಖೆಗೆ ನಿರ್ದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂಬ ಉದ್ದೇಶದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಕ್ಕಿ ದಾಸ್ತಾನು ಮಳಿಗೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ.
3 ಕ್ಯಾಮೆರಾ ಅಳವಡಿಕೆ: ಮಳಿಗೆಯ ಆವರಣ ಹಾಗೂ ಒಳಗೆ 3 ಕ್ಯಾಮೆರಾ ಅಳವಡಿಸಲಾಗಿದೆ. ಪಟ್ಟಣದ ಮುಖ್ಯ ದಾಸ್ತಾನು ಮಳಿಗೆಗಳನ್ನು ಬಿಟ್ಟು ಸಣ್ಣ ಮಳಿಗೆಗೆ ಕ್ಯಾಮೆರಾ ಅಳವಡಿಸಿದ್ದಾರೆ. ಒಟ್ಟು 4 ಅಕ್ಕಿ ದಾಸ್ತಾನು ಮಳಿಗೆಗಳಿವೆ. ಒಂದು ಮಳಿಗೆಗೆ ಮಾತ್ರ ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ. ಉಳಿದ 3 ಮಳಿಗೆಗಳಿಗೂ ಕ್ಯಾಮೆರಾ ಅಳವಡಿಸಿದರೆ  ಅಕ್ರಮ ತಡೆಯಲು ಸಾಧ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.