ಗಟ್ಟಿ ಮನೋಧರ್ಮ ಬೆಳೆಸಿಕೊಳ್ಳಿ: ವಿಶಾಲಾಕ್ಷಿ
ಹಗರಿಬೊಮ್ಮನಹಳ್ಳಿ: ತಾಳ್ಮೆ, ಸಹನೆ ಬದಿಗೆ ಸರಿಸಿ, ನಿಮ್ಮ ಮೇಲೆ ನಡೆಯುವ ಎಲ್ಲ ರೀತಿಯ ಹಲ್ಲೆ, ಅತ್ಯಾಚಾರ, ದೌರ್ಜನ್ಯಗಳ ವಿರುದ್ಧ ಮೆಟ್ಟಿ ನಿಲ್ಲುವ ಗಟ್ಟಿ ಮನೋಧರ್ಮವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ಬಾಪೂಜಿ ಹೇಳಿದರು.
ಪಟ್ಟಣದ ಯುವಕರ ಸಂಘದ ಕಚೇರಿಯಲ್ಲಿ ಜೇಸಿ ಸಂಸ್ಥೆ ಕಾರ್ಯಕರ್ತರಿಗಾಗಿ ಉಚಿತ ಕಾನೂನು ನೆರವು ಸಮಿತಿ, ವಕೀಲರ ಸಂಘ ಆಯೋಜಿಸಿದ್ದ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನಿನಡಿ ಮಹಿಳೆಯರ ಸಬಲೀಕರಣಕ್ಕಾಗಿ ವಿಫುಲ ಅವಕಾಶಗಳಿವೆ. ಕಾನೂನು ನೆರವು ಪಡೆದು ನಿರಂತರವಾಗಿ ನಡೆಯುವ ಅತಿಕ್ರಮಣಗಳಿಗೆ ತಡೆ ಹಾಕಬಹುದು ಎಂಬ ಅರಿವನ್ನು ಮಹಿಳೆಯರಲ್ಲಿ ಮೂಡಿಸುವ ಕೆಲಸವನ್ನು ಮಾಡುವಂತೆ ಕಾರ್ಯಕ್ರಮದಲ್ಲಿ ಮನವಿ ಮಾಡಿದರು.
ವಕೀಲರ ಸಂಘದ ಕಾರ್ಯದರ್ಶಿ ಎಚ್. ಸತ್ಯನಾರಾಯಣ, ಜಿ. ಗಂಗಾಧರ ಹಾಗೂ ಗುರುಬಸವರಾಜ್ ಅವರು ಮೋಟರ್ ಕಾಯ್ದೆ, ವಿವಾಹ ಕಾಯ್ದೆ, ಜನನ ಮತ್ತು ಮರಣ ದಾಖಲಾತಿಗಳನ್ನು ಪಡೆಯುವ ಬಗ್ಗೆ ಹಾಗೂ ಕಾನೂನು ಮೂಲಕ ಆಸ್ತಿ ವಿಭಾಗದಲ್ಲಿ ಮತ್ತು ಸಣ್ಣಪುಟ್ಟ ವ್ಯಾಜ್ಯಗಳನ್ನು ಪರಿಹಾರಿಸಿಕೊಳ್ಳುವ ಕುರಿತು ಉಚಿತ ಕಾನೂನಿನಡಿ ಯಾವ ರೀತಿ ನೆರವು ಪಡೆಯಬಹುದೆಂದು ತಿಳಿಸಿದರು. ಜೇಸಿ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ತೋಟನಗೌಡ್ರು, ಉಪ್ಪಾರ ಅಶೋಕ ಸೇರಿದಂತೆ ಹಲವರು ಇದ್ದರು. ಸಕ್ರಹಳ್ಳಿ ಕೊಟ್ರೇಶ್ ಸ್ವಾಗತಿಸಿದರು. ಅಶೋಕ್ ವಂದಿಸಿದರು. ವಕೀಲ ಸುಭಾಷ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

