ಬಳ್ಳಾರಿ

ನಾಳೆ ಸಮಾವೇಶ: ಬಿಜೆಪಿಯಿಂದ ಬೈಕ್‌ರ್ಯಾಲಿ

Published On :

ಬಳ್ಳಾರಿ: ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನ. 17ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲಿರುವ ಬೃಹತ್ ಬಹಿರಂಗ ಸಭೆಯ ಹಿನ್ನೆಲೆಯಲ್ಲಿ ಬಳ್ಳಾರಿಯ ಗ್ರಾಮೀಣ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಬಿಜೆಪಿ ಕಾರ್ಯಕರ್ತರು ಬೈಕ್‌ರ್ಯಾಲಿ ನಡೆಸಿದರು.
ನಗರದ ಕೌಲ್‌ಬಜಾರ್ ಪ್ರದೇಶದಲ್ಲಿನ ರೇಡಿಯೋ ಪಾರ್ಕ್ ಬಳಿ ಇರುವ ಬಿಜೆಪಿ ಗ್ರಾಮೀಣ ಕಚೇರಿ ಬಳಿ ಬಿಜೆಪಿ ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಂ. ಸಂಜಯ್ ಚಾಲನೆ ನೀಡಿದರು. ನಂತರ ಮಾತನಾಡಿ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಬೈಕ್‌ರ್ಯಾಲಿ, ಪಾದಯಾತ್ರೆ, ಮೆರವಣಿಗೆ ಹಮ್ಮಿಕೊಂಡಿದೆ. ಹೀಗಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲೂ ಬೈಕ್‌ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖಂಡರಾದ ಜಿ. ವಿರೂಪಾಕ್ಷಗೌಡ, ಡಿ. ವಿನೋದ್‌ಕುಮಾರ್, ಶಿವಾರೆಡ್ಡಿ, ಮುರಹರಿಗೌಡ, ಜಿ. ರಾಮಚಂದ್ರಯ್ಯ, ಕೆ. ಮುದ್ದನಗೌಡ, ಮಲ್ಲಿಕಾರ್ಜುನ್, ಅನಿಲ್ ನಾಯ್ಡು, ದತ್ತಾತ್ರೇಯ ರೆಡ್ಡಿ, ವೇಮಣ್ಣ ಹಾಗೂ ಮಹಿಳಾ ಮುಖಂಡರಾದ ಮಂಜಮ್ಮ ಮಲ್ಲೇಶ್, ಸುಮಾರೆಡ್ಡಿ, ಸುಗುಣಾ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ಮೋದಿ ರ್ಯಾಲಿಗೆ ಬೈಕ್ ರ್ಯಾಲಿ
ಸಿರುಗುಪ್ಪ: ನ.17ರಂದು ಬೆಂಗಳೂರಿನಲ್ಲಿ ನಡೆಯುವ ನರೇಂದ್ರ ಮೋದಿ ಬೃಹತ್ ರ್ಯಾಲಿಗೆ ಪ್ರಚಾರಕ್ಕಾಗಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯನ್ನು ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಎಂ.ಎಸ್. ಸೋಮಲಿಂಗಪ್ಪ ಉದ್ಘಾಟಿಸಿದರು.
ನಂತರ ಸೋಮಲಿಂಗಪ್ಪ ಮಾತನಾಡಿ, ಅಭಿವೃದ್ಧಿ ಪರ ಆಲೋಚನೆಯುಳ್ಳ ಸಮರ್ಥ ವ್ಯಕ್ತಿಯನ್ನು ಮುಂಬರುವ ಚುನಾವಣೆಯಲ್ಲಿ ಆರಿಸಿ ತರಬೇಕಾಗಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿಯನ್ನು ಬೆಂಬಲಿಸಬೇಕು ಮತ್ತು ನ. 17ರ ಬೃಹತ್ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರೆ ನೀಡಿದರು.   
ರ್ಯಾಲಿಯಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷ ಎನ್. ವೀರನಗೌಡ, ಉಪಾಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ,  ಮುಖಂಡರಾದ ದಿವಾಕರಗೌಡ, ಪಂಪನಗೌಡ, ಹುಲುಗಪ್ಪ, ಎ. ಶಿವಪ್ಪ, ಬಿ. ಈರಣ್ಣ, ಜಿ. ಸಿದ್ದಪ್ಪ, ಈ. ಮಾರೆಪ್ಪ, ಟಿ. ನಾಂಚಾರಯ್ಯ, ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ, ಮಹಾದೇವ, ವಿರೂಪಾಕ್ಷ, ಕೆ. ಕೃಷ್ಣ, ಮಹಮ್ಮದ್ ರಫೀಕ್, ಲಕ್ಷ್ಮಣ, ಆರ್. ರಾಮಪ್ಪ, ಆಶೋಕಜೈನ್, ದಮ್ಮೂರು ಮಂಜುನಾಥ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.