ಹಂಪಿ ಉತ್ಸವದ ಲಾಂಛನ, ವೆಬ್ಸೈಟ್ ಬಿಡುಗಡೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 20
ಜನವರಿಯಲ್ಲಿ ನಡೆಯುವ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಹಂಪಿ ಉತ್ಸವದ ಲಾಂಛನ ಹಾಗೂ ವೆಬ್ಸೈಟ್ನ್ನು ಬಿಡುಗಡೆ ಮಾಡಲಾಗಿದ್ದು, ವೆಬ್ಸೈಟ್ನಲ್ಲಿ ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿ ಉತ್ಸವದ ಇತಿಹಾಸ ತಿಳಿಸಲಾಗಿದೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹಂಪಿ ಉತ್ಸವದ ಲಾಂಛನ ಹಾಗೂ ವೆಬ್ಸೈಟ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಜಯನಗರ ಅರಸರ ಕಾಲದಲ್ಲಿ ವರಹ ರಾಜ ಲಾಂಛನವಾಗಿತ್ತು. ಇದೀಗ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬು ವಿನ್ಯಾಸಗೊಳಿಸಿದ ಲಾಂಛನ ಬಿಡುಗಡೆ ಮಾಡಲಾಗಿದೆ. ಇನ್ನು ಉಪ ವಿಭಾಗಾಧಿಕಾರಿ ಅನಿರುದ್ಧ ಶ್ರಾವಣ್ ಅವರು ವೆಬ್ಸೈಟ್ನ್ನು ಆರಂಭಿಸಿದ್ದಾರೆ. (ಢಿಢಿಢಿ.ಛಟಠ್ಝ್ಡಡಡಿಛಢ.್ಛ್ಟಟ) ವೆಬ್ಸೈಟ್ನಲ್ಲಿ ಹಂಪಿ ಇತಿಹಾಸದ ಮಾಹಿತಿ ನೀಡಲಾಗಿದೆ. ವೆಬ್ಸೈಟ್ನಲ್ಲಿ ಈ ಬಾರಿ ಉತ್ಸವದಲ್ಲಿ ಯಾವ ಯಾವ ಕ್ರೀಡೆಗಳು ನಡೆಯುತ್ತಿವೆ, ಕ್ರಿಡಾಸಕ್ತರ ನೋಂದಣಿ, ಇತರ ವಿಷಯಗಳು ಇವೆ ಎಂದು ತಿಳಿಸಿದರು.
ಮೊದಲ ಬಾರಿಗೆ ಲಾಂಛನ: ಮೊದಲ ಬಾರಿಗೆ ಉತ್ಸವಕ್ಕೆ ಲಾಂಛನ ಬಳಸಿಕೊಳ್ಳಲಾಗುತ್ತಿದೆ. ಕೃಷ್ಣನು ಕಾಳಿಂಗ ಮರ್ದನ ಮಾಡುವ ಚಿತ್ರವನ್ನು ಲಾಂಛನ ಒಳಗೊಂಡಿದೆ. ಲಾಂಛದ ಸುತ್ತ ಹಳದಿ ಮತ್ತು ಕೆಂಪು ಬಣ್ಣ ಹೊಂದಿದೆ. ಉತ್ಸವದಲ್ಲಿ ಎರಡೇ ವೇದಿಕೆ ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ ಬೇಡಿಕೆ ಹಿನ್ನೆಲೆಯಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಶ್ರೀಕೃಷ್ಣದೇವರಾಯ ವೇದಿಕೆ, ಎಂ.ಪಿ. ಪ್ರಕಾಶ್ ವೇದಿಕೆ, ವಿದ್ಯಾರಣ್ಯ ವೇದಿಕೆ ನಿರ್ಮಿಸಲಾಗುತ್ತಿದೆ. ಡಿ. 8ರಂದು ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಹಂಪಿಗೆ ಆಗಮಿಸಲಿದ್ದು, ಅಲ್ಲಿ ವೇದಿಕೆಗಳ ಕುರಿತು ಚರ್ಚಿಸಿ, ಹೆಚ್ಚಿನ ವೇದಿಕೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದರು.
ಮೂರೇ ಬಾರಿ ಹೋಗಿದ್ದೇನೆ: ತಾವು ಜಿಂದಾಲ್ನಲ್ಲಿ ಹೆಚ್ಚಾಗಿ ಇರುತ್ತೇವೆ ಎಂಬುದು ಶುದ್ಧ ಸುಳ್ಳು ಮಾಹಿತಿ, 6 ತಿಂಗಳಲ್ಲಿ ಮೂರೇ ಬಾರಿ ಜಿಂದಾಲ್ಗೆ ಹೋಗಿದ್ದೇನೆ. ನಾನು ಯಾರ ಮೂಲಾಜಿನಲ್ಲಿ ಇಲ್ಲ. ಅನವಶ್ಯಕವಾಗಿ ತಾವು ಅಲ್ಲಿಗೆ ಹೋಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಡಿ. 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳ್ಳಾರಿಗೆ ಆಗಮಿಸಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ನಿರ್ಮಾಣ ಗೊಂಡಿರುವ ಕೆಲಸಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಂದರು.
ಕಾರ್ಮಿಕ ಕಲ್ಯಾಣ ನಿಧಿ ಬಳಕೆಯಲ್ಲಿ ಯಾವುದೇ ಲೋಪವಾಗಿಲ್ಲ. ನ. 21ರಂದು ಕಾರ್ಮಿಕ ಮುಖಂಡರ ಸಭೆಯನ್ನು ಬೆಂಗಳೂರಿನ ವಿಧಾನಸೌಧಯಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಅವರ ಸಲಹೆಯೊಂದಿಗೆ, ಕಾರ್ಮಿಕರ ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಕಲ್ಯಾಣ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಬೆಂಡಿಗೇರಿ ಶೋಭಾ, ಜಿಪಂ ಸಿಇಒ ಮಂಜುನಾಥ್ ನಾಯಕ್, ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಉಪ ವಿಭಾಗಾಧಿಕಾರಿ ಅನಿರುದ್ಧ ಶ್ರಾವಣ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

