24ರಂದು ಸ್ಪರ್ಧೆ
ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ವ್ಯಾಯಾಮ ಶಾಲೆ ವತಿಯಿಂದ ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ನ. 24ರಂದು ಆಯೋಜಿಸಲಾಗಿದೆ. ಈ ಬಾರಿಯ ದೇಹದಾರ್ಢ್ಯ ಸ್ಪರ್ಧೆಯ ಜತೆಗೆ ದಂಡ್ಸ್ ಮತ್ತು ಬೈಠಕ್ಸ್ ಸ್ಪರ್ಧೆಯನ್ನೂ ಆಯೋಜಿಸಿರುವುದು ವಿಶೇಷ. ದಿ. ವ್ಯಾಸಾಪುರಮಠ ಕೇದಾರನಾಥಸ್ವಾಮಿ ಸ್ಮರಣಾರ್ಥ ಈ ಅಂತರ್ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಲಾಗಿದ್ದು, ಅಂದು ಸಂಜೆ 6ಕ್ಕೆ ಸ್ಪರ್ಧೆಯನ್ನು ಸಿಪಿಐ ಲಾಲ್ಯನಾಯ್ಕ ಉದ್ಘಾಟಿಸಲಿದ್ದಾರೆ. ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ದನ್ ಅಧ್ಯಕ್ಷತೆ ವಹಿಸಲಿದ್ದು, ಬಂಗಾರು ಹನುಮಂತು, ಪಿಎಸ್ಐ ಗುರುರಾಜ್ ಮೈಲಾರ, ವಕೀಲ ಗುರುಬಸವರಾಜ, ನಿರ್ದೇಶಕ ಪಂಚಾಕ್ಷರಿ, ಮಾರ್ಷಲ್ ಜಗದೀಶ್ ಜವಳಿ, ತಿಪ್ಪೇಸ್ವಾಮಿ, ಡಾ. ನಾಗರಾಜ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದೇಹದಾರ್ಢ್ಯ ಸ್ಪರ್ಧೆ ತೀರ್ಪುಗಾರರಾಗಿ ಎಚ್.ಜಿ.ಎಂ. ಗುರುಬಸವರಾಜ, ವಿ.ಎಂ. ಶಿವಪ್ರಕಾಶ, ಬಿ. ಗುರುರಾಜ, ಎನ್.ಡಿ. ಗೋವಿಂದರಾಜ್, ಬಿ.ನಾಗರಾಜ್ ಕಾರ್ಯನಿರ್ವಹಿಸಲಿದ್ದಾರೆ ಎಂಗದು ಕೊಟ್ಟೂರೇಶ್ವರ ವ್ಯಾಯಾಮ ಶಾಲೆ ಜಿಮ್ ಮಾಸ್ಟರ್ ವಿ.ಎಂ. ಸೋಮನಾಥ ತಿಳಿಸಿದ್ದಾರೆ.
ಸ್ಮಾರಕ ನಿರ್ವಹಣೆ: ಡಿಸಿ
ಬಳ್ಳಾರಿ: ನಗರದ ಪೊಲೀಸ್ ಅಧೀಕ್ಷಕರ ಕಚೇರಿ ಬಳಿ ಮೆ. ಜೆಎಸ್ಡಬ್ಲ್ಯು ವತಿಯಿಂದ ನಿರ್ಮಿಸಿರುವ ಅಮರ್ ಜವಾನ್ ಸ್ಮಾರಕಕ್ಕೆ ಸರ್ಕಾರದ ಅನುದಾನ ಬಳಸಿಲ್ಲ. ಈ ಸ್ಮಾರಕದ ನಿರ್ವಹಣೆಗಾಗಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಅಲ್ಲದೆ ಈ ಸ್ಮಾರಕದ ಬಳಿ ಸಾರ್ವಜನಿಕರ ಓಡಾಟ, ಮತ್ತಿತರ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಎಸ್ಪಿ ಅವರಲ್ಲಿ ಕೋರಿರುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

