ಬಳ್ಳಾರಿ

ಆರ್ಥಿಕ ಅಭಿವೃದ್ಧಿಗೆ ಮುಂದಾಗಿ: ದಳವಾಯಿ

Published On :

ಕೂಡ್ಲಿಗಿ: ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಲೇಖಕ  ಡಾ. ವೆಂಕಟಗಿರಿ ದಳವಾಯಿ ಸ್ವ ಸಹಾಯ ಸಂಘಗಳ ಮಹಿಳೆಯರಿಗೆ ಕಿವಿಮಾತು ಹೇಳಿದರು.
ಅವರು ತಾಲೂಕಿನ ಗುಂಡಿನಹೊಳೆ ಗ್ರಾಮದಲ್ಲಿ ಜಲಾನಯನ ಇಲಾಖೆ ಮತ್ತು ಸುರಭಿ ಸಂಸ್ಥೆ ಸಹಯೋಗದಲ್ಲಿ ನಡೆದ 2ನೇ ಹಂತದ ಸಮಗ್ರ ಜಲಾನಯನ ನಿರ್ವಹಣೆ ಯೋಜನೆಯಡಿ ಸ್ವ ಸಹಾಯ ಗುಂಪುಗಳಿಗೆ ಸುತ್ತು ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದ ಅನೇಕ ಯೋಜನೆಗಳು ಮಹಿಳೆಯರ ಅಭ್ಯುದಯಕ್ಕೆ ಮೀಸಲಿವೆ. ಅವುಗಳಿಂದ ಉತ್ತಮ ತರಬೇತಿ ಹೊಂದಿ ಮೂಲಕ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಯೋಜನೆಗಳು ಜನತೆಗೆ ತಲುಪುವಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ಪಾತ್ರ ಮಹತ್ವದ್ದಾಗಿದೆ. ವಿವಿಧ ಇಲಾಖೆಗಳಲ್ಲಿ ಟೈಲರಿಂಗ್, ಗುಡಿ ಕೈಗಾರಿಕೆ ನಿರತರಿಗೆ ಸಬ್ಸಿಡಿ ಸಾಲ ಸೌಲಭ್ಯ ಸಿಗುತ್ತದೆ. ಈ ಮೂಲಕ ಪ್ರತಿಯೊಬ್ಬರೂ ಸ್ವಾವಲಂಬಿ ಜೀವನ ನಡೆಸಲು ಉತ್ತಮ ಆಯ್ಕೆಯಾಗುತ್ತದೆ ಎಂದರು.
ಸುರಭಿ ಸಂಸ್ಥೆ ಅಧ್ಯಕ್ಷ ಜಿ. ಉಮೇಶ್ ಮಾತನಾಡಿ, ಜಲಾನಯನ ಇಲಾಖೆಯಡಿ ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತರಬೇತಿ ಹೊಂದಿದ ಪ್ರತಿಯೊಂದು ಸ್ವ ಸಹಾಯ ಗುಂಪುಗಳು ಸುತ್ತುನಿಧಿ ಹಣ ಬಳಸಿಕೊಂಡು ಉನ್ನತಿ ಹೊಂದುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಸದಸ್ಯೆ ಮೀನಾಕ್ಷಮ್ಮ, ಕೆ.ಎಂ. ಶಶಿಧರ   ತಾಪಂ ಅಧ್ಯಕ್ಷೆ ವಿ. ಮಂಗಳಮ್ಮ, ಉಪಾಧ್ಯಕ್ಷ ಎಚ್. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬೆಣ್ಣೆ ಕೊಟ್ರೇಶ್, ಸದಸ್ಯೆ ಪ್ರಮೀಳಾ, ಎಪಿಎಂಸಿ ನಿರ್ದೇಶಕ ಕಾಮಶೆಟ್ಟಿ ನಾಗರಾಜ, ಜಲಾನಯನ ತಾಲೂಕು ಅಧಿಕಾರಿ ಕೆ. ವಾಮದೇವ್, ಶ್ರೀರಾಮುಲು, ಪಪಂ ಸದಸ್ಯ ಶ್ರೀಧರ್ ಸೇರಿದಂತೆ ಇತರರಿದ್ದರು. ಇದೇ ವೇಳೆ ಚೌಡಾಪುರ ಮತ್ತು ಬಡೆಲಡುಕು ಗ್ರಾಪಂ ವ್ಯಾಪ್ತಿಯ ತರಬೇತಿ ಹೊಂದಿದ 12 ಮಹಿಳಾ ಸ್ವ ಸಹಾಯ ಸಂಘಗಳಿಗೆ ತಲಾ ರು. 50 ಸಾವಿರ ಸುತ್ತುನಿಧಿ ಚೆಕ್ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.