ಸದಾಶಿವ ವರದಿ ಶಿಫಾರಸಿಗೆ ಒತ್ತಾಯ: ಬಾಬುಜಿ ವೇದಿಕೆ
ಬಳ್ಳಾರಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ನೀಡಿ, ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಡಾ. ಬಾಬು ಜಗಜೀವನ್ರಾಂ ಜನಜಾಗೃತಿ ವೇದಿಕೆ ಜಿಲ್ಲಾ ಶಾಖೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಎಸ್ಸಿ ಪಟ್ಟಿಗೆ ಸೇರಿದ ಸ್ಪರ್ಶ ಸಮುದಾಯಗಳಾದ ಬಂಜಾರ, ಭೋವಿ, ಕೊರಮ, ಕೊರಚ ಸೇರಿದಂತೆ ಅವುಗಳ ಉಪ ಜಾತಿಗಳವರನ್ನು ಎಸ್ಸಿ ಪಟ್ಟಿಯಿಂದ ಕೈಬಿಡಬೇಕು. ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಜನ್ಮದಿನವಾದ ಏ. 5ರಂದು ಸರ್ಕಾರಿ ರಜೆಯನ್ನಾಗಿ ಘೋಷಿಸಬೇಕು. ರಾಜ್ಯ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಗೆ ಡಾ. ಬಾಬು ಜಗಜೀವನರಾಂ ಹೆಸರಿಡಲು ಪ್ರಸಕ್ತ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ವೇದಿಕೆಯ ಜಿಲ್ಲಾಧ್ಯಕ್ಷ ಜೆ. ಸುಂಕಣ್ಣ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಪಂಪಾಪತಿ, ಪದಾಧಿಕಾರಿಗಳಾದ ರಾಮಚಂದ್ರಪ್ಪ, ಎಚ್.ಎಸ್. ಗಾದಿಲಿಂಗಪ್ಪ, ಎಚ್. ಕೆಂಚಪ್ಪ, ಶ್ರೀನಿವಾಸ, ಎಚ್. ಭೀಮಲಿಂಗಪ್ಪ, ಬಿ.ಎಸ್. ಗಂಗಾಧರ, ಆರ್. ಗೂಳಪ್ಪ, ಎಸ್. ಫಕ್ಕೀರಯ್ಯ, ಎಚ್. ಶಂಕ್ರಪ್ಪ, ಎಚ್. ಈರಣ್ಣ, ಎಚ್. ವೀರೇಶ್, ವೈ. ಅರುಣಾಚಲಂ, ಎಚ್. ಹುಲುಗಪ್ಪ, ಎಂ. ದೊಡ್ಡವೀರೇಶ್, ಜಗನ್ನಾಥ, ದುರುಗೇಶ್, ಸಾಸಲವಾಡು ಶಿವಣ್ಣ, ಎಚ್. ರಮೇಶ್, ವೈ. ಅಂಬರೀಷ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

