ಬಳ್ಳಾರಿ

ಇಂದು ರಸಮಂಜರಿ

Published On :

ಹೊಸಪೇಟೆ: ಮಹರ್ಷಿ ವಾಲ್ಮೀಕಿ ಯುವಕರ ಸಂಘದಿಂದ ಕರ್ನಾಟಕ ರಾಜ್ಯೋತ್ಸವ, ಸಾಂಸ್ಕೃತಿಕ ಮತ್ತು ರಸಮಂಜರಿ ಕಾರ್ಯಕ್ರಮ ನಗರದ ಬಳ್ಳಾರಿ ರಸ್ತೆ ಸರ್ಕಲ್‌ನಲ್ಲಿ ನ. 30ರಂದು ಸಂಜೆ 5.30ಕ್ಕೆ ನಡೆಯಲಿದೆ. ಡಿವೈಎಸ್ಪಿ ಡಿ.ಡಿ. ಮಾಳಗಿ ಕಾರ್ಯಕ್ರಮ ಉದ್ಘಾಟಿಸುವರು. ಯುವಕರ ಸಂಘದ ಗೌರವಾಧ್ಯಕ್ಷ ಗುದ್ಲಿ ಪರಶುರಾಮ ಅಧ್ಯಕ್ಷತೆ ವಹಿಸುವರು. ರಾಣಿ ಸಂಯುಕ್ತ, ಎಸಿ ಪಿ. ಸುನೀಲ್‌ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ. ಜೋಷಿ, ನಗರಸಭಾ ಪೌರಾಯುಕ್ತ ಮಹಮ್ಮದ್ ಮುನೀರ್, ಬಿಇಒ ಪಿ. ಸುನಂದಾ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ, ಬಿ.ಎಸ್. ಜಂಬಯ್ಯ ನಾಯಕ, ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಕಿಚಿಡಿ ಶ್ರೀನಿವಾಸ, ವಿಜಯ ಭಾಸ್ಕರ್‌ರೆಡ್ಡಿ, ಪತ್ತಿಕೊಂಡ ಕಿಶೋರ್, ಜಂಬಾನಹಳ್ಳಿ ವಸಂತ, ನಗರಸಭಾ ಸದಸ್ಯೆ ಇದ್ಲಿ ಚನ್ನಮ್ಮ, ದೇವರಮನಿ ಶ್ರೀನಿವಾಸ, ಉಪನ್ಯಾಸಕ ಗುಜ್ಜಲ್ ಹುಲುಗಪ್ಪ, ತಾರಿಹಳ್ಳಿ ವೆಂಕಟೇಶ್, ಎಸ್.ಆರ್. ಬದ್ರಿ, ಓಂಕಾರ ರೆಡ್ಡಿ, ಇ.ವಿ. ಅಂಬನಗೌಡ ಭಾಗವಹಿಸುವರು.
ಇಂದು ಕವಿಗೋಷ್ಠಿ
ಹೊಸಪೇಟೆ: ಪ್ರಿಯದರ್ಶಿನಿ ಮಹಿಳಾ ಸಂಘ ಹಾಗೂ ವಿಜಯನಗರ ಬರಹಗಾರರ ವೇದಿಕೆ ಆಶ್ರಯದಲ್ಲಿ ರಾಜ್ಯೋತ್ಸವ ನಿಮಿತ್ತ ಶಾಲಾ ಮಕ್ಕಳಿಗಾಗಿ ಪ್ರತಿಭಾ ಕಾರಂಜಿ ಬಹುಮಾನ ವಿತರಣಾ ಸಮಾರಂಭ ಹಾಗೂ ಕವಿಗೋಷ್ಠಿ ನಗರದ ಭಾವೈಕ್ಯತಾ ವೇದಿಕೆ ಸಭಾಂಗಣದಲ್ಲಿ ನ. 30ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ನಗರಸಭಾ ಪೌರಾಯುಕ್ತ ಮಹಮ್ಮದ್ ಮುನೀರ್ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷೆ ಡಾ. ಸುಲೋಚನಾ ಅಧ್ಯಕ್ಷತೆ ವಹಿಸುವರು. ಬಿಇಒ ಪಿ. ಸುನಂದಾ, ಸಂದೀಪ್, ಪಿ. ಅಬ್ದುಲ್, ಜೈನುಲ್ಲಾ ಬಳ್ಳಾರಿ, ರಜಿಯಾ ಬೇಗಂ, ಮಲ್ಲಿಕಾರ್ಜುನ, ಮಧುಸೂದನ್, ಗಾಯಿತ್ರಿ, ಪ್ರೊ. ಯು. ರಾಘವೇಂದ್ರ ರಾವ್, ಕೆ.ಕೆ. ಮಾಕಾಳೆ, ಎಚ್.ಪಿ. ಕಲ್ಲಂಭಟ್, ಎಚ್.ಎಂ. ಚಂದ್ರಶೇಖರ್ ಶಾಸ್ತ್ರೀ ಭಾಗವಹಿಸುವರು.

ಪುಟ್ಟರಾಜ ಗವಾಯಿಗಳು ಅಂಧರ ಬಾಳಿನ ಆಶಾಕಿರಣ: ಶ್ರೀ
ಬಳ್ಳಾರಿ:  ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು ಅಂಧರ ಬಾಳಿನ ಆಶಾಕಿರಣವಾಗಿದ್ದರು ಎಂದು ಬಗ್ಗೇಶ್ವರ ತಾತಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಡಾ. ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ತಾಲೂಕಿನ ಹರಗಿನಡೋಣಿ ಗ್ರಾಮದ ಬಗ್ಗೇಶ್ವರ ಮಠದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಾವಿರಾರು ಅಂಧ ಮಕ್ಕಳಿಗೆ ದಾಸೋಹ ನೀಡುವ ಪುಟ್ಟರಾಜ ಗವಾಯಿಗಳ ಹೆಸರಿನಲ್ಲಿ ಗ್ರಾಮದಲ್ಲಿ ಸಂಘ ಪ್ರಾರಂಭಿಸಿರುವುದು ಹರ್ಷದಾಯಕ ಎಂದರು.
ಸೇವಾ ಸಂಘದ ಜಿಲ್ಲಾಧ್ಯಕ್ಷ ಬಂಡ್ರಾಳ್ ಎಂ. ಮೃತ್ಯುಂಜಯಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪುಟ್ಟರಾಜ ಗುರುಗಳ ಸ್ಮರಣೆ ಮಾಡಲಾಗುವುದು. ಅಂಧ, ಅಂಗವಿಕಲ ಮತ್ತು ಸಂಗೀತ ಆಸಕ್ತರಿದ್ದಲ್ಲಿ ಅವರಿಗೆ ಉಚಿತವಾಗಿ ಸಂಘದ ಮೂಲಕ ಗದುಗಿನ ಪುಣ್ಯಾಶ್ರಮಕ್ಕೆ ಸೇರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಎಚ್. ವಿರೂಪಾಕ್ಷಗೌಡ, ಆರ್. ಶಿವರಾಮರೆಡ್ಡಿ, ಯುವರಾಜಗೌಡ, ಎಚ್.ಎಂ.  ಅಮರೇಶ್ ಇದ್ದರು. ಬಳ್ಳಾರಿಯ ಎಂ. ನಾಗಭೂಷಣ, ಪೂರಿಯ, ಧನಶ್ರೀ ರಾಗ ಮತ್ತು ಬಸವಣ್ಣ, ಅಲ್ಲಂಪ್ರಭುದೇವರ ವಚನಗಳನ್ನು ಹಾಡಿದರು. ಎಚ್.ಎಂ. ರುದ್ರಮುನಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಸಂಗೀತ ಅಸಕ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.