ಪಂಪ್ಸೆಟ್ ಕಿತ್ತ ಅಧಿಕಾರಿಗಳು: ರೈತರ ಆಕ್ರೋಶ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 3
ತುಂಗಭದ್ರಾ ಕೆಳ ಮಟ್ಟದ ಕಾಲುವೆಯ ಪಕ್ಕದ ನ್ಯಾಯಯುತವಾದ ರೈತರ ಪಂಪ್ಸೆಟ್ಗಳನ್ನು ಕೀಳುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಕೂಡಲೇ ಅಧಿಕಾರಿಗಳು ಪಂಪ್ಸೆಟ್ಗಳನ್ನು ಕೀಳಬಾರದು ಎಂದು ಆಗ್ರಹಿಸಿ ಗುರುವಾರ ಸಂಜೆ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ ಮಾಲೀಪಾಟೀಲ್, ಜಿಲ್ಲಾ ಕಾರ್ಯಾಧ್ಯಕ್ಷ ದರೂರು ಪುರುಷೋತ್ತಮಗೌಡ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ, ಎಸಿ ಕಚೇರಿಗೆ ತೆರಳಿ ಮನವಿಪತ್ರ ಸಲ್ಲಿಸಿ, ಚರ್ಚಿಸಿದರು.
ಬಲದಂಡೆ ಕೆಳಮಟ್ಟದ ಕಾಲುವೆಯ ಆರಂಭದಿಂದ ಆಂಧ್ರಪ್ರದೇಶದ ಗಡಿಭಾಗದವರೆಗೂ ಕಾಲುವೆಯ ಬಸಿನೀರು ವ್ಯರ್ಥವಾಗಿ ಹಳ್ಳಕ್ಕೆ ಹೋಗುತ್ತಿರುವುರದಿಂದ ಬಡ ರೈತರು ಜಮೀನುಗಳಿಗೆ ಉಪಯೋಗವಾಗಲು ಪಂಪ್ಸೆಟ್ಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಅನಧಿಕೃತವಾಗಿ ಅಳವಡಿಸಿರುವ ಪೆಂಪ್ಸೆಟ್ಗಳನ್ನು ಅಧಿಕಾರಿಗಳು ತೆರವುಗೊಳಿಸುವ ಭರಾಟೆಯಲ್ಲಿ ಎಲ್ಲಾ ರೈತರ ಪಂಪ್ಸೆಟ್ಗಳನ್ನು ಕೀಳುವುದರೊಂದಿಗೆ ಬೆಳೆದು ನಿಂತ ಬೆಳೆಗಳನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಇಂತಹ ತುರ್ತು ನಿರ್ಧಾರಕ್ಕೆ ತುಂಗಭದ್ರಾ ಬೋರ್ಡ್, ಕಾಲುವೆ, ಜೆಸ್ಕಾಂ ಅಧಿಕಾರಿಗಳು ಒಳಗಾಗದೆ ರೈತರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಅನುಕೂಲ ಮಾಡಿಕೊಡಿ: 1970ರಲ್ಲಿ ತುಂಗಭದ್ರಾ ಜಲಾಶಯಕ್ಕೆ ಸೆಂಟ್ರಲ್ ವಾಟರ್ ಕಮಿಷನ್ ಬೋರ್ಡ್ನವರ ಸಲಹೆ ಮೇರೆಗ ಜವಳಿ ರಿಪೋರ್ಟ್ ತಯಾರಿಸಲಾಗಿದೆ. ಅಂದು ಎಲ್ಎಲ್ ಕಾಲುವೆ ವ್ಯಾಪ್ತಿಯಲ್ಲಿ ಕೇವಲ 7 ಲಕ್ಷ ಜನಸಂಖ್ಯೆ ಇದ್ದು, ಇಂದು 20 ಲಕ್ಷ ಜನಸಂಖ್ಯೆ ಇದೆ. ಅದಕ್ಕಾಗಿ 1800 ಕ್ಯುಸೆಕ್ ನೀರಿಗೆ ಸೀಮಿತವಾದ ಕಾಲುವೆಯನ್ನು 2500 ಕ್ಯುಸೆಕ್ ಪ್ರಮಾಣಕ್ಕೆ ಕಾಲುವೆಯನ್ನು ವಿಸ್ತರಿಸಬೇಕು, ಮಳೆಗಾಲದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ನದಿ ಮೂಲಕ ಹರಿದು ಹೋಗುವುದರಿಂದ ಕಾವಲುವೆ ವಿಸ್ತರಿಸಬೇಕು, ಕಾಲುವೆಗೆ ಹರಿಸಿದರೆ ಆಂಧ್ರ ಮತ್ತು ಕರ್ನಾಟಕ ರೈತರಿಗೆ ನೀರಿನ ಅನುಕೂಲವಾಗುವ ಜತೆಗೆ ಸದ್ಬಳಕೆಗೆ ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು.
ಉಳಿವಿಗಾಗಿ ಯತ್ನಿಸಿ: ಕೂಡಲೇ ಆಂಧ್ರಪ್ರದೇಶ ಹಾಗೂ ಕರ್ನಾಟಕದ ನೀರಾವರಿ ಸಚಿವರು. ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ಆಂಧ್ರಪ್ರದೇಶದ ಅನಂತಪುರ, ಕರ್ನೂಲು, ಕಡಪ ಜಿಲ್ಲೆಗಳ ಎಲ್ಲಾ ನೀರಾವರಿ ಅಧಿಕಾರಿಗಳನ್ನು, ಎಲ್ಲಾ ಜನಪ್ರತಿನಿಧಿಗಳು ಹಾಗೂ ರೈತರು ಮುಖಾಮುಖಿಯಾಗಿ ಚರ್ಚೆ ನಡೆಸಿ, ತುಂಗಭದ್ರಾ ಜಲಾಶಯದ ಉಳಿವಿಗಾಗಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನಾ ಮೆರವಣಿಗೆ ನಗರದ ಮಯೂರ್ ಹೋಟೆಲ್ನಿಂದ ಜಿಲ್ಲಾಧಿಕಾರಿ ಕಚೇರಿವರಿಗೆ ನಡೆಯಿತು. ಈ ಸಂದರ್ಭದಲ್ಲಿ ರೈತ ಮುಖಂಡ ದರೂರು ಶಾಂತನಗೌಡ, ಮುದ್ದನಗೌಡ, ಭೀರಪ್ಪ, ಕರಿಬಸಪ್ಪ, ಈರಣ್ಣ, ಎರ್ರೆಪ್ಪ, ಮಲ್ಲಿಕಾರ್ಜುನ, ಕನ್ನಡಪರ ಹೋರಾಟಗಾರ ಕುಂದಾಪುರ ನಾಗರಾಜ್, ದೇವಸಮುದ್ರ, ಓರ್ವಾಯಿ, ಡಿ. ಕಗ್ಗಲ್, ಶಾನವಾಸಪುರ, ದರೂರು, ಬೈಲೂರು ವಿವಿಧ ಗ್ರಾಮಗಳ ನೂರಾರು ರೈತರು ಇದ್ದರು.
ಅನಧಿಕೃತವಾಗಿ ಅಳವಡಿಸಿರುವ ಪಂಪ್ಸೆಟ್ಗಳನ್ನು ತೆರವುಗೊಳಿಸುವ ಭರಾಟೆಯಲ್ಲಿ ಅಧಿಕಾರಿಗಳು ಎಲ್ಲಾ ರೈತರ ಪಂಪ್ಸೆಟ್ಗಳನ್ನು ಕೀಳುವುದರೊಂದಿಗೆ ಬೆಳೆದು ನಿಂತ ಬೆಳೆಗಳನ್ನು ಹಾಳು ಮಾಡಿದ್ದಾರೆ.
- ರೈತರ ಆರೋಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

