ಬಳ್ಳಾರಿ

ರಾಷ್ಟ್ರನಾಯಕರ ತತ್ವಾದರ್ಶ ಅಳವಡಿಸಿಕೊಳ್ಳಿ

Published On :

ಹೊಸಪೇಟೆ: ದೇಶಕ್ಕಾಗಿ ಹೋರಾಡಿದ ರಾಷ್ಟ್ರನಾಯಕರ ಮತ್ತು ದೇಶದ ಹಿತಕ್ಕಾಗಿ ಚಿಂತಿಸಿದ ಸಾಧಕರ ಪುಸ್ತಕಗಳನ್ನು ಪ್ರತಿಯೊಬ್ಬರು ಓದಿ ಅವರ ತತ್ವಾದರ್ಶಗಳನ್ನು ನಿತ್ಯ ಜೀವನದಲ್ಲಿ ಅಳಡಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಿ ಬೆಳೆಯಬೇಕಿದೆ ಎಂದು ಅಶೋಕ್ ಜೀರೆ ಹೇಳಿದರು.
ನಗರದ ಥಿಯೋಸಾಫಿಕಲ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಆ್ಯನಿಬೆಸೆಂಟ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೈದರಾಬಾದ್ ರಾಯಲ ಸೀಮಾ ಫೆಡರೇಷನ್ ಮುಖಂಡ ಡಾ. ಎ.ಐ. ಬಸವರಾಜ ರೆಡ್ಡಿ ಉಪನ್ಯಾಸ ನೀಡಿ, ಡಾ. ಆ್ಯನಿಬೆಸೆಂಟರು ಸಕಲ ಮಾನವ ಕುಲಕ್ಕೆ ತನು ಮನ ಧನಗಳನ್ನು ಅರ್ಪಿಸುವ ಮೂಲಕ ಮಾನವೀಯತೆ ಮರೆದವರು. ವಿಶ್ವದ ಏಳಿಗೆಗಾಗಿ ತಮ್ಮ ಇಡೀ ಬದುಕನ್ನೆ ಮುಡುಪಾಗಿಟ್ಟಂಥಹ ಧೀಮಂತ ಮಹಿಳೆಯಾಗಿದ್ದರು. ಭಾರತದ ಮಾನಸ ಪುತ್ರಿಯಾಗಿ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುವಂತೆ ಅವರು ಪ್ರೇರೇಪಿಸಿದ್ದರು ಎಂದರು.
ಸ್ಥಳೀಯ ಮುಖಂಡ ವಿ. ಲಿಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆರ್. ಮೀನಾಕ್ಷಿದೇವಿ, ಭೂಪಾಳ ಪ್ರಹ್ಲಾದ್, ಭುಪಾಳ ಶ್ರೀಪಾದ್, ಡಾ. ಹನುಮಂತರಾವ್ ಇತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಎಂಜಿನಿಯರ್ ಕೆ.ಬಿ. ಸಂಜೀವ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಸಲ್ಮಾ ಮತ್ತು  ರಾಜೇಶ್ವರಿ ಪ್ರಾರ್ಥಿಸಿದರು.
ಕಾಲೇಜು ಪ್ರಾಚಾರ್ಯೆ ಪ್ರೊ. ಎಲ್. ಛಾಯಾ ಸ್ವಾಗತಿಸಿದರು. ಸಿ. ದಿನಮಣಿ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಪ್ರೊ.ಯು. ರಾಘವೇಂದ್ರ ರಾವ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.