ಬಳ್ಳಾರಿ

ಅನುದಾನರಹಿತ ಶಾಲೆಗಳ ನಿರ್ಲಕ್ಷ್ಯ ಸಲ್ಲ: ಶಿವಶರಣ

Published On :

ಕೂಡ್ಲಿಗಿ: ಅನುದಾನರಹಿತ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಆಗುವ ಅನಾವಶ್ಯಕ ತೊಂದರೆಗಳಿಗೆ ಎಲ್ಲ ಆಡಳಿತ ಮಂಡಳಿ ಸದಸ್ಯರು ಒಗ್ಗೂಡಿ ಕಡಿವಾಣ ಹಾಕಬೇಕು ಎಂದು ತಾಲೂಕು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷ ಡಿ. ಶಿವಶರಣ ಹೇಳಿದರು.
ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಮಹತ್ವ, ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಇಂಥ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಭಾವನೆ ತೋರದೆ ಎಲ್ಲ ರೀತಿಯ ಸಹಕಾರ ನೀಡಬೇಕು. ಆ ಮೂಲಕ ಶಿಕ್ಷಣ ಸಂಸ್ಥೆಗಳ ಆರೋಗ್ಯಪೂರ್ಣ ಬೆಳವಣಿಗೆಗೆ ಪ್ರೋತ್ಸಾಹ ನೀಡುವತ್ತ ಇಲಾಖೆ ಮುಂದಾಗಲಿ ಎಂದರು.
ಜ್ಞಾನಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಜ್ಞಾನಮಂಟಪ ವಿದ್ಯಾಸಂಸ್ಥೆ ಅಧ್ಯಕ್ಷ ಜಿ. ಉಮೇಶ್, ಬಿ. ಪಂಪಾಪತಿ, ಎಚ್.ಎನ್. ಸಂತೋಷ್, ಜೆ. ಕುಮಾರ್‌ಸ್ವಾಮಿ, ನಿಂಬಳಗೆರೆ ಜಿ. ವೀರಣ್ಣ, ರಾಂಪುರ ವಿವೇಕಾನಂದ, ಎಂ.ಬಿ. ಅಯ್ಯನಹಳ್ಳಿ ಎಚ್. ಕರೇಗೌಡ, ಶ್ರೀಧರಶೆಟ್ಟಿ, ಟಿ. ರಮೇಶ್, ಎ.ಎಂ. ವಾಗೀಶ್‌ಮೂರ್ತಿ, ಎಚ್. ಸಂಗಯ್ಯ, ಚಿಕ್ಕಜೋಗಿಹಳ್ಳಿ ಕೆ.ಜಿ. ಶ್ರೀನಿವಾಸ, ಆರ್.ಎಂ. ಕೊಟ್ರೇಶ್, ಜೆ.ಎಸ್. ಪರಿಮಳಾ, ಗುಡೇಕೋಟೆ ಪಿ.ಬಿ. ಶೋಭಾರಾಣಿ, ಎಂ. ವಿಜಯಲಕ್ಷ್ಮೀ, ನಿರ್ಮಲಾ ಶಿವನಗುತ್ತಿ, ಕೆ.ಬಿ. ರತ್ನಮ್ಮ, ನಾಗರಾಜ ನಾಯ್ಕ, ಚಟ್ರಕಿ ಬಸವರಾಜ್, ಜಿಲ್ಲಾ ಒಕ್ಕೂಟ ಅಧ್ಯಕ್ಷ ಮರಿಸ್ವಾಮಿರೆಡ್ಡಿ, ಕಾರ್ಯದರ್ಶಿ ಬಸವರೆಡ್ಡಿ, ಸಂಡೂರು ತಾಲೂಕು ಅಧ್ಯಕ್ಷ ಕೆ. ಕುಮಾರಸ್ವಾಮಿ, ಕುರುಗೋಡು ಕೆ.ಎಂ. ಪಂಚಾಕ್ಷರಯ್ಯ, ಸಿರುಗುಪ್ಪ ಮೌಲಾಲಿ, ಕಾರ್ಯದರ್ಶಿ ಶ್ರೀನಿವಾಸ ಚಕ್ರವರ್ತಿ, ರವಿರೆಡ್ಡಿ, ರಾಮಮೋಹನ ಇತರರಿದ್ದರು.
ಪದಾಧಿಕಾರಿಗಳ ವಿವರ: ಕೂಡ್ಲಿಗಿ ತಾಲೂಕು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗೆ ಡಿ. ಶಿವಶರಣ (ಅಧ್ಯಕ್ಷ), ಪರಿಮಳಾ (ಉಪಾಧ್ಯಕ್ಷೆ), ಬಿ. ಪಂಪಾಪತಿ, ಎ.ಎಂ. ವಾಗೀಶ್‌ಮೂರ್ತಿ (ಕಾರ್ಯದರ್ಶಿಗಳು), ಎಚ್.ಎನ್. ಸಂತೋಷ, ಎಚ್. ಕರೇಗೌಡ (ಸಹಕಾರ್ಯದರ್ಶಿಗಳು), ಎಂ. ವಿಜಯಲಕ್ಷ್ಮೀ (ಖಜಾಂಚಿ), ಜಿ. ಚಂದ್ರಣ್ಣ, ಶೋಭಾರಾಣಿ, ವಿವೇಕಾನಂದ (ಸದಸ್ಯರು) ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ಮರಿಸ್ವಾಮಿರೆಡ್ಡಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.