ಆಚರಣೆ ಮೂಲಕ ನಿಜವಾದ ವೀರಶೈವರಾಗಿ: ಶ್ರೀ
ಬಳ್ಳಾರಿ: ಹೆಸರಿಗೆ ಮಾತ್ರ ವೀರಶೈವನಾಗದೆ ಆಚರಣೆಯಿಂದ ನಿಜವಾದ ವೀರಶೈವರಾಗಬೇಕು ಎಂದು ಹಂಪಿ ಸಾವಿರದೇವರ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಕಣೇಕಲ್ ಬಸ್ ನಿಲ್ದಾಣ ಸಮೀಪದ ಕಲ್ಯಾಣಸ್ವಾಮಿ ಮಠದಲ್ಲಿ ನವರಾತ್ರಿ ಉತ್ಸವದಂಗವಾಗಿ ಏರ್ಪಡಿಸಿದ್ದ 9 ದಿನಗಳ ಶ್ರೀದೇವಿ ಮಹಾತ್ಮೆ ಪುರಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರಶೈವ ಎಂದು ಹೇಳಿಕೊಂಡು ಆಚರಣೆ ಬಿಟ್ಟು ಹೋಗುವುದು ಸರಿಯಲ್ಲ. ಪ್ರತಿಯೊಬ್ಬರೂ ಧರ್ಮದ ಆಚಾರದಂತೆ ನಡೆದುಕೊಂಡು ಹೋಗಬೇಕಾಗಿದೆ ಎಂದರು.
ಕಲ್ಯಾಣ ಸ್ವಾಮೀಜಿ ಮಾತನಾಡಿ, 9 ದಿನ ಏರ್ಪಡಿಸಿರುವ ಶ್ರೀದೇವಿ ಪುರಾಣವನ್ನು ಆಲಿಸುವ ಮೂಲಕ ಪ್ರತಿನಿತ್ಯ ಮನೆಯಲ್ಲಿ ಭಕ್ತರು ಮನೆಯಲ್ಲಿ ಪಠಿಸಿ ಪಾವನರಾಗಿ ಎಂದು ತಿಳಿಸಿದರು. ಉರವಕೊಂಡ ಗವಿಮಠದ ಚನ್ನಬಸವ ರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಗಿನದೋಣಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವಭೂಷಣ ಶರಣರು, ವೇ. ಶಿವರುದ್ರ ಶರಣರು ಹಾಗೂ ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಕಲ್ಲುಕಂಬ ಪಂಪಾಪತಿ, ಸಿದ್ದರಾಮನಗೌಡ ಮಸೀದಿಪುರ, ಅಸುಂಡಿ ನಾಗರಾಜ್, ನಗರ ಪಾಲಿಕೆ ಸದಸ್ಯ ಮಲ್ಲನಗೌಡ, ಬಳ್ಳಾರಿ ಜಿಲ್ಲಾ ಕರವೇ ಅಧ್ಯಕ್ಷ ಬಸವರಾಜಸ್ವಾಮಿ ಇವರಿಗೆ ಮಠದಿಂದ ಗೌರವಿಸಿ ಸನ್ಮಾನಿಸಲಾಯಿತು. ಮಠದ ಭಕ್ತರು ಭಾಗವಹಿಸಿದ್ದರು. ಎರ್ರಿಸ್ವಾಮಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

