ರಾಗಗಳಿಗೆ ರೋಗ ನಿವಾರಿಸುವ ಶಕ್ತಿ: ಟಿ.ಎಚ್.ಎಂ. ಬಸವರಾಜ್
ಬಳ್ಳಾರಿ: ನಾದ ಮಂದಿರದಲ್ಲಿ ರಾಗಗಳಿಂದ ರೋಗಗಳನ್ನು ಗುಣಪಡಿಸುವ ವಿಶಿಷ್ಠ ಶಕ್ತಿ ದತ್ತಪೀಠದಲ್ಲಿದೆ ಎಂದು ಜಾನಪದ ಕಲಾವಿದ ಟಿ.ಎಚ್.ಎಂ. ಬಸವರಾಜ್ ಅಭಿಪ್ರಾಯಪಟ್ಟರು.
ತಾಲೂಕಿನ ಬಾಲಾಜಿ ಕ್ಯಾಂಪ್ನ ಗುರುದತ್ತಾತ್ರೇಯ ದೇವಸ್ಥಾನದಲ್ಲಿ ದಸರಾ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಆದಿಶಕ್ತಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಜೀವನದ ಮೌಲ್ಯಗಳು ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ದತ್ತಪೀಠದ ಜಗದ್ಗುರುಗಳು ಅನ್ನ ದಾಸೋಹ, ಜ್ಞಾನ ದಾಸೋಹ ಮಾಡುತ್ತ ಗಿಡ ಮೂಲಿಕೆಗಳಿಂದ ದೇವರನ್ನು ಪ್ರತಿಷ್ಠಾಪಿಸಿದರು. ಅದರಲ್ಲಿನ ಔಷಧ ಸಸ್ಯಗಳಿಂದ ಭಕ್ತರ ರೋಗಗಳನ್ನು ಗುಣಪಡಿಸುತ್ತಾರೆ ಎಂದರು.
ಕ್ರೋಧ ಬುದ್ಧಿಯನ್ನು, ಅಹಂಕಾರ ಜ್ಞಾನ, ಪ್ರಾಯಶ್ಚಿತ್ತ-ಪಾಪವನ್ನು, ಮೋಹ-ಮರ್ಯಾದೆಯನ್ನು, ಲಂಚ- ಗೌರವ, ಚಿಂತೆ- ಆಯುಶ್ಯವನ್ನು ತಿನ್ನುತ್ತವೆ. ಈ ಎಲ್ಲ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಲಹೆ ನೀಡಿದರು. ಡಾ. ಗುಡದೂರು ತಿಮ್ಮಪ್ಪ, ಅಮ್ಮಯ್ಯ ಚೌದರಿ, ರಾಮಮೂರ್ತಿ, ಲಕ್ಷ್ಮಿ, ರಾಯಲ್ ಬಾಬು ಇತರರಿದ್ದರು. ಹನುಮಂತರಾವ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ತಿಮ್ಮಪ್ಪ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

