ಬಳ್ಳಾರಿ

ಶಕ್ತಿದೇವತೆ ಪೂಜೆಯಿಂದ ಸಮಾಜಕ್ಕೆ ಒಳಿತು

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 14
ದೇವಿಯು ಸರ್ವಶಕ್ತಿ ಜಗದಾಂಬೆಯಾಗಿದ್ದಾಳೆ. ದುರ್ಗಾಷ್ಟಮಿಯ ದಿನದಲ್ಲಿ ಶಕ್ತಿ ದೇವಿಯ ಪೂಜೆ ನಡೆಸುವುದರಿಂದ ಸಮಾಜಕ್ಕೆ ಒಳಿತು ಉಂಟಾಗಲಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಮಠದ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ನಗರದ ಚಿತ್ರಕೇರಿಯ ತಾಯಮ್ಮ ದೇವಿಯ ಮೂರ್ತಿ ಹಾಗೂ ಕಳಸ ಪ್ರತಿಷ್ಠಾಪನೆ ಅಂಗವಾಗಿ ದೇವಿಗೆ ಹೂವು ಧಾನ್ಯ ಸಮರ್ಪಿಸಿ ಅವರು ಮಾತನಾಡಿದರು.
ಕೇರಿಗಳಲ್ಲಿ ದೈವಶಕ್ತಿಗಳಿಗೆ ಅನೇಕ ವರ್ಷಗಳಿಂದಲೂ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಇದನ್ನು ಪ್ರತಿಯೊಬ್ಬರೂ ಉಳಿಸಿಕೊಂಡು ಹೋಗುವ ಮೂಲಕ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.
ಸ್ಥಳೀಯ ಮುಖಂಡರಾದ ಬಂಡೆ ರಂಗಪ್ಪ, ಗೋಸಲ ಭರಮಪ್ಪ, ಜಿ.ಕೆ. ಹನುಮಂತಪ್ಪ, ಸಿಂಧಗೇರಿ ದೇವೇಂದ್ರ, ಕಿಚಡಿ ಲಕ್ಷ್ಮಣ, ಗುಜ್ಜಲ ಹನುಮಂತಪ್ಪ, ಕಣವಿ ಜಂಬಪ್ಪ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ. ಎಸ್. ಜಂಬಯ್ಯ ನಾಯಕ ಸೇರಿದಂತೆ ಸಮಾಜದ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.   ದೇವಿಯ ಮೂರ್ತಿ ಹಾಗೂ ಕಳಸ ಪ್ರತಿಷ್ಠಾಪನೆಯು ಅತ್ಯಂತ ಶ್ರದ್ಧಾಭಕ್ತಿಯಿಂದ ಮತ್ತು ಸಡಗರ ಸಂಭ್ರಮದೊಂದಿಗೆ ನಡೆಯಿತು.
ನಗರದಲ್ಲಿ ದೇವಿಯ ಮೆರವಣಿಗೆಯು ಚಿತ್ರಕೇರಿಯ ತಾಯಮ್ಮದೇವಿಯ ದೇವಸ್ಥಾನ ತಲುಪಿತು. ಮೆರವಣಿಗೆಯಲ್ಲಿ ಆನೆ, ಕಳಸ ಹೊತ್ತ ಮಹಿಳೆಯರು, ಡೊಳ್ಳು, ಹಲಗೆ ವಾದ್ಯವೃಂದ ಸೇರಿದಂತೆ ಇತರೆ ಜನಪದ ಕಲಾತಂಡಗಳು ಭಾಗವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.