ಬಳ್ಳಾರಿ

ಹೊಸಪೇಟೆ: 20ರಂದು ಮಹಿಳಾ ಶಕ್ತಿ ಸಂಗಮ ಕಾರ್ಯಕ್ರಮ

Published On :

ಹೊಸಪೇಟೆ: ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಮತ್ತು ಮಹಿಳಾ ಜಾಗೃತಿಗಾಗಿ ಮಹಿಳಾ ಶಕ್ತಿ ಸಂಗಮ ಕಾರ್ಯಕ್ರಮ ನಗರದಲ್ಲಿ ಅ. 20ರಂದು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ವಿಜಯನಗರ ರಾಜವಂಶಜರಾದ ರಾಜಮಾತಾ ಚಂದ್ರಕಾಂತಾ ದೇವಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅ. 20ರಂದು ರಾಷ್ಟ್ರ ಸೇವಿಕಾ ಸಮಿತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3.30ಕ್ಕೆ ನಗರದಲ್ಲಿ ಶೋಭಾಯಾತ್ರೆ ನಡೆಯಲಿದ್ದು, ಸಂಜೆ 5 ಗಂಟೆಗೆ ನಗರದ ಟೌನ್‌ರೀಡಿಂಗ್ ರೂಂ ಆವರಣದಲ್ಲಿ ಬಹಿರಂಗಸಭೆ ನಡೆಯಲಿದೆ. ಸಂಜೆ ನಡೆಯಲಿರುವ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಪನ್ಯಾಸ ನೀಡುವರು. ರಾಜಮಾತಾ ಚಂದ್ರಕಾಂತಾ ದೇವಿ ಅಧ್ಯಕ್ಷತೆ ವಹಿಸುವರು. ಬಾಬುಲಾಲ್ ಜೈನ್, ಡಾ. ಪಿ.ವಿ. ಪ್ರೇಮಲತಾ ಭಾಗವಹಿಸುವರು ಎಂದರು.
ವಿಜಯಲಕ್ಷ್ಮೀ ಹಿರೇಮಠ್, ಉಷಾ ಗುರುರಾಜ್ ಮೈದೂರು, ಜಯಶ್ರೀ ದೇಸಾಯಿ, ಮಂಜುಳಾ, ಗೀತಾ ಜೋಷಿ, ವಿಶ್ವ ಹಿಂದೂ ಪರಿಷತ್‌ನ ಮುಖಂಡ ನರಸಿಂಹ ಮೂರ್ತಿ ಗೋಷ್ಠಿಯಲ್ಲಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.