ಬಳ್ಳಾರಿ

ಬಳ್ಳಾರಿ ಕಾರಾಗೃಹದಲ್ಲಿ ವಾಲ್ಮೀಕಿ ಜಯಂತಿ

Published On :

ಬಳ್ಳಾರಿ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ಆಚರಿಸಲಾಯಿತು. ಕೇಂದ್ರ ಕಾರಾಗೃಹದ ಪ್ರಭಾರಿ ಅಧೀಕ್ಷಕ ಡಾ. ರಂಗನಾಥ್ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದರು.
ಅನಂತರ ಮಾತನಾಡಿ, ಪರಿವರ್ತನೆ ಎಂಬುದು ಆಂತರ್ಯದಲ್ಲಿ ಆಗಬೇಕಾದ ಪ್ರಕ್ರಿಯೆ. ಆ ದಿಸೆಯಲ್ಲಿ ಎಲ್ಲರೂ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆ ಕುರಿತು ಕಾರಾಗೃಹದ ಕೈದಿಗಳಿಂದ ಕಿರು ರೂಪಕ ಪ್ರದರ್ಶಿಸಲಾಯಿತು. ಕೈದಿ ಆರ್. ವಿಶ್ವಸಾಗರ್ ನಿರ್ದೇಶಿಸಿದ ರೂಪಕದಲ್ಲಿ ನಾರದರಾಗಿ ಬಿ.ವಿ. ವೆಂಕಟೇಶ್, ವಾಲ್ಮೀಕಿಯಾಗಿ ಕೆ.ಪಿ. ಕುಮಾರ್ ಮತ್ತು ಸಹಾಯಕ ಪಾತ್ರದಲ್ಲಿ ಶ್ರೀನಿವಾಸ್, ಮಲ್ಲಿಕಾರ್ಜುನ್, ಶರಣಯ್ಯ, ಗೋವಿಂದನಾಯ್ಕ, ಸ್ವೀಫನ್, ವಿನಯ್ ಕುಮಾರ್ ಇತರರು ನಡೆಸಿಕೊಟ್ಟರು.
ಈ ಸಂದರ್ಭ ಜೈಲರ್ ಶರಣಬಸಪ್ಪ, ಈರಣ್ಣ, ಮುಖ್ಯ ವಾರ್ಡರ್ ಉಪಸ್ಥಿತರಿದ್ದರು. ಸಜಾ ಬಂಧಿ ಬಸವರಾಜ್ ಪ್ರಾರ್ಥಿಸಿದರು. ವಿಚಾರಣಾಧೀನ ಬಂಧಿ ನೀಲಕಂಠ ಸ್ವಾಗತಿಸಿದರು. ಸಜಾಬಂಧಿ ಆರ್. ವಿಶ್ವಸಾಗರ್ ನಿರೂಪಿಸಿದರು. ಸಜಾ ಬಂಧಿ ಬಿ.ವಿ. ವೆಂಕಟೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.