ಬಳ್ಳಾರಿ

ಅರ್ಜಿ ಆಹ್ವಾನ

Published On :

ಬಳ್ಳಾರಿ: ಬಿಜಾಪುರ ಸೈನಿಕ ಶಾಲೆಯ 6 ಮತ್ತು 9ನೇ ತರಗತಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಲಿಖಿತ ಮತ್ತು ಮೌಖಿಕ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪರೀಕ್ಷೆಯು 2014ರ ಜನವರಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು 6ನೇ ತರಗತಿ ಪ್ರವೇಶಕ್ಕಾಗಿ ವಿಜಾಪುರ, ಬೆಳಗಾವಿ, ಬೆಂಗಳೂರು, ಧಾರವಾಡ, ಗುಲ್ಬರ್ಗ ಪರೀಕ್ಷಾ ಕೇಂದ್ರ ಹಾಗೂ 9ನೇ ತರಗತಿಗಾಗಿ ಬಿಜಾಪುರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು.   ಒಂದಕ್ಕಿಂತ ಹೆಚ್ಚು ಸಲ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲ. 6ನೇ ತರಗತಿವರಿಗೆ 10-11 ವರ್ಷ ಹಾಗೂ 9ನೇ ತರಗತಿಯವರಿಗೆ 13-14 ವರ್ಷ ವಯೋವುತಿ ನಿಗದಿಗೊಳಿಸಲಾಗಿದೆ. ಅರ್ಜಿ, ವಿವರಣಾ ಪತ್ರ ಹಾಗೂ ಪ್ರಶ್ನೆ ಪತ್ರಿಕೆಗಳಿಗಾಗಿ ಪ್ರಾಚಾರ್ಯರು, ಸೈನಿಕ ಶಾಲೆ, ಬಿಜಾಪುರ ಇವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಡ್ರಾಫ್ಟ್ ಹಾಗೂ ಸ್ವ ವಿಳಾಸವುಳ್ಳ ರು. 40 ಅಂಚೆ ಚೀಟಿ ಅಂಟಿಸಿ ಲಕೋಟೆಯನ್ನು ಕಳುಹಿಸಬೇಕು. ಸಾಮಾನ್ಯ ವರ್ಗ ಹಾಗೂ ರಕ್ಷಣಾ ಪಡೆ ಸಿಬ್ಬಂದಿಯವರಿಗೆ ರು. 450, ಪರಿಶಿಷ್ಟ ಜಾತಿ, ಪಂಗಡದವರಿಗೆ ರು. 300 ಶುಲ್ಕ ನಿಗದಿಪಡಿಸಲಾಗಿದೆ. ಪ.ಜಾ, ಪ.ಪಂ.ದ ಅಭ್ಯರ್ಥಿಗಳು ಬ್ಯಾಂಕ್ ಡ್ರಾಫ್ಟ್ನೊಂದಿಗೆ ಜಾತಿ ಪ್ರಮಾಣ ಪತ್ರದ ಪ್ರತಿ ಲಗತ್ತಿಸಿರಬೇಕು. ಭರ್ತಿ ಮಾಡಿ ಅರ್ಜಿಯನ್ನು 2013ರ ಡಿಸೆಂಬರ್ 10ರೊಳಗಾಗಿ ಪ್ರಾಚಾರ್ಯರು, ಸೈನಿಕ ಶಾಲೆ, ಬಿಜಾಪುರ-586102 ಇವರಿಗೆ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಸಭೆಗೆ ಗೈರು: ಆಕ್ರೋಶ
ಹಗರಿಬೊಮ್ಮನಹಳ್ಳಿ: ಚುನಾಯಿತ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಇಲಾಖೆಗಳ ಮುಖ್ಯಸ್ಥರು ಗೈರಾಗಿದ್ದರಿಂದ ತಾಪಂ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಗೈರಾದ ಇಲಾಖೆಗಳ ಮುಖ್ಯಸ್ಥರ ಮೇಲೆ ಶಿಸ್ತುಕ್ರಮ ಜರುಗಿಸಲು ನಿರ್ಣಯ ಅಂಗೀಕರಿಸಲಾಯಿತು. ಇದಕ್ಕೂ ಮುನ್ನ ಒಂದು ಗಂಟೆ ತಡವಾಗಿ ಸಭೆಗೆ ಆಗಮಿಸಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ನಿತೀಶ್ ಪಾಟೀಲ್ ಕ್ಷಮೆ ಕೋರಿ, ಖಾಸಗಿ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ತಡವಾಗಿ ಆಗಮಿಸಿದ್ದಾಗಿ ತಿಳಿಸಿದರು. ತಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ,  ಜಿಪಂ ಸದಸ್ಯರು, ತಾಪಂ ಸದಸ್ಯರು, ಸಣ್ಣ ನೀರಾವರಿ ಇಲಾಖೆ, ಭೂಸೇನಾ ನಿಗಮ, ಲೋಕೋಪಯೋಗಿ ಇಲಾಖೆ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಗೆ ಗೈರಾಗಿದ್ದರು. ಸಭೆಗೆ ಗೈರಾದ ಅಧಿಕಾರಿ, ಜನಪ್ರತಿನಿಧಿಗಳ ಕ್ರಮವನ್ನು ಕನ್ನಡಪರ ಸಂಘಟನೆ ಕಾರ್ಯಕರ್ತರು ಖಂಡಿಸಿದರು. ತಹಸೀಲ್ದಾರ್ ಇಜಾಜ್ಬೇಗ್, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಸಿನಿಮಾ ಮಂಜಣ್ಣ, ಎಪಿಎಂಸಿ ಅಧ್ಯಕ್ಷ ಟಿ. ಬುಳ್ಳಪ್ಪ, ಜಿ.ಎಂ. ಶಿವಕುಮಾರ, ಅಕ್ಕಿ ತೋಟೇಶ, ಕೆ. ರೋಹಿತ್, ಕರವೇ ತಾಲೂಕಾಧ್ಯಕ್ಷ ಎನ್.ಎಂ. ಗೌಸ್, ಕಸಾಪ ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಕರವೇ ಕಾರ್ಯಕರ್ತರು, ಸಿಡಿಪಿಒ ಚಿನ್ನೂರು ಹಾಜರಿದ್ದರು.  ದ್ಯಾಮಪ್ಪ ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.