ಇಂದು ಸಂದರ್ಶನ
ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉದ್ಯೋಗಿನಿ ಯೋಜನೆಯಡಿ ಫಲಾಭವಿಗಳನ್ನು ಗುರುತಿಸಲು ಸಂದರ್ಶನ ದಿನಾಂಕ ನಿಗದಿಪಡಿಸಿದೆ. ಸೆ. 10ರಂದು ಬಳ್ಳಾರಿ ನಗರ ಹಾಗೂ 11ರಂದು ಬಳ್ಳಾರಿ ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಫಲಾನುಭವಿಗಳು ನಿಗದಿತ ದಿನಾಂಕದಂದು ಬೆಳಗ್ಗೆ 10ಕ್ಕೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಪ್ರಕಟಣೆ ತಿಳಿಸಿದೆ.
23ರಂದು ಅದಾಲತ್
ಬಳ್ಳಾರಿ: ಭಾರತ ಸಂಚಾರ ನಿಗಮ ನಿಯಮಿತದಿಂದ ಸೆ. 23ರಂದು ಬೆಳಗ್ಗೆ 11 ಗಂಟೆಗೆ ಬಳ್ಳಾರಿ ನಗರದ ದೂರವಾಣಿ ಕಾರ್ಯಾಲಯದಲ್ಲಿ ಟೆಲಿಫೋನ್ ಅದಾಲತ್ ಹಮ್ಮಿಕೊಂಡಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಹಕರು ದೂರವಾಣಿ ಸೇವೆ ಕುರಿತ ಕುಂದು ಕೊರತೆ ಮತ್ತು ದೂರುಗಳನ್ನು ಸೆ. 20ರೊಳಗಾಗಿ ಟೆಲಿಫೋನ್ ಕೊರತೆ, ಸಲಹೆ ಅದಾಲತ್, ಬಳ್ಳಾರಿ ಎಂದು ಲಕೋಟೆ ಮೇಲೆ ಬರೆದು ಸಾರ್ವಜನಿಕ ಸಂಪರ್ಕ ಅಧಿಕಾರಿ, ದೂರವಾಣಿ ಮಹಾ ಪ್ರಬಂಧಕರ ಕಾರ್ಯಾಲಯ ಬಿಎಸ್ಎನ್ಎಲ್ ಬಳ್ಳಾರಿ ಇವರಿಗೆ ಸಲ್ಲಿಸಬಹುದಾಗಿದೆ. ಕೋರ್ಟ್ ಹಾಗೂ ಗ್ರಾಹಕರ ವೇದಿಕೆಯಲ್ಲಿ ಈಗಾಗಲೇ ಇರುವ ದೂರುಗಳನ್ನು ಅದಾಲತ್ನಲ್ಲಿ ಸ್ವೀಕರಿಸುವುದಿಲ್ಲ. ಗ್ರಾಹಕರು ತಮ್ಮ ದೂರಿನಲ್ಲಿ ಎಕ್ಸ್ಚೇಂಜ್ ಹೆಸರು, ದೂರವಾಣಿ ಸಂಖ್ಯೆ, ಬಿಲ್ ನಂಬರ್, ದಿನಾಂಕ ಹಾಗೂ ದೂರಿನ ವಿವರಗಳನ್ನು ಒದಗಿಸಿರಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಗ್ರ ವೀರಾಗ್ರಣಿ
ಹೂವಿನಹಡಗಲಿ: ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆಗೈದ ಪಟ್ಟಣದ ಜಿಬಿಆರ್ ಪಪೂ ಕಾಲೇಜಿಗೆ ಸಮಗ್ರ ಪ್ರಶಸ್ತಿ ಲಭಿಸಿದೆ. 2013ರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಜಿಬಿಆರ್ ಪಪೂ ಕಾಲೇಜು ಸೇರಿದಂತೆ ತಾಲೂಕಿನ 7 ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಬಾಲಕರ ವಿಭಾಗದ ಥ್ರೋಬಾಲ್ ಪ್ರಥಮ, ಕಬಡ್ಡಿ ಪ್ರಥಮ, ಖೋ ಖೋ ಪ್ರಥಮ, ಟೇಬಲ್ ಟೆನ್ನಿಸ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ವಾಲಿಬಾಲ್ನಲ್ಲಿ ದ್ವಿತೀಯ ಸ್ಥಾನವನ್ನು ಜಿಬಿಆರ್ ಕಾಲೇಜು ಪಡೆದಿದೆ. ಬಾಲಕರ 100 ಮೀ, 200 ಮೀ, 400 ಮೀ, 800 ಮೀ, 3000 ಮೀ, 4/100 ಮೀ ರಿಲೆಯಲ್ಲಿ ಪ್ರಥಮ, ಲಾಂಗ್ ಜಂಪ್ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕೀಯರ ವಿಭಾಗದ ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಪ್ರಥಮ, ಷಟಲ್ ಬ್ಯಾಡ್ಮಿಂಟನ್, ವಾಲಿಬಾಲ್, ಟಿನಿಕ್ವಾಯಿಟ್ ದ್ವಿತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಐಗೋಳ ಚಿದಾನಂದ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಆರ್. ಮರೇಗೌಡ, ಪಪೂ ಕಾಲೇಜು ಪ್ರಾಚಾರ್ಯ ಡಾ.ಎ.ಎಂ. ರಾಜಶೇಖರಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಎಂ. ಸೋಮಶೇಖರ್ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

