ಬಳ್ಳಾರಿ

ಸ್ಟಾಕ್‌ಯಾರ್ಡ್ ಮರಳು ಮಾರಾಟಕ್ಕೆ ಲಾರಿಗಳ ಸಾಲು!

Published On :

ಹೂವಿನಹಡಗಲಿ: ಕೂಸಿಗೂ ಮುನ್ನವೆ ಕುಲಾಯಿ ಹೊಲಿಸಿದರಂತೆ ಎಂಬ ಮಾತಿನಂತೆ ತಾಲೂಕಿನ ಹರವಿ ಸರ್ಕಾರಿ ಮರಳು ಸ್ಟಾಕ್‌ಯಾರ್ಡ್‌ನಲ್ಲಿ ಸಂಗ್ರಹಿಸಲಾಗಿರುವ ಮರಳನ್ನು ಮಾರಾಟ ಮಾಡಲು ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ಮುಂದಾಗಿದೆ.
ತುಂಗಭದ್ರಾ ನದಿ ತೀರದ ಹರವಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ಜಪ್ತಿ ಮಾಡಿದ್ದ ರು. 1.87 ಕೋಟಿ ಮೌಲ್ಯದ 3,400 ಕ್ಯುಬಿಕ್ ಮೀಟರ್ ಮರಳು ಹರವಿ ಸ್ಟಾಕ್‌ಯಾರ್ಡ್‌ನಲ್ಲಿ ಲೋಕೋಪಯೋಗಿ ಇಲಾಖೆ ಸಂಗ್ರಹಿಸಿತ್ತು. ಆದರೆ ಈವರೆಗೂ ಸಂಗ್ರಹಿಸಿದ ಮರಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡದ ಕಾರಣ ಹಾಗೆ ಇತ್ತು. ಈಗ ಮರಳನ್ನು ಪಾಸ್ ವಿತರಿಸಿ ಮಾರಾಟ ಮಾಡುತ್ತೇವೆಂದು ಸುದ್ದಿ ಹರಡುತ್ತಿದಂತೆಯೇ 20ಕ್ಕೂ ಹೆಚ್ಚು ಲಾರಿಗಳು ಹೂವಿನಹಡಗಲಿಯ ಲೋಕೋಪಯೋಗಿ ಇಲಾಖೆ ಮುಂದೆ ಜಮಾಯಿಸುವ ಮೂಲಕ ಮರಳು ಸಾಗಾಟ ಮಾಡುವ ಲಾರಿ ಮಾಲೀಕರು ಮಂಗಳವಾರ ಅರ್ಜಿ ಸಲ್ಲಿಸುತ್ತಿದ್ದಾರೆ.
ಆದೇಶವೇ ಇಲ್ಲ: ಮರಳು ಮಾರಾಟಕ್ಕೆ ಪಾಸ್ ವಿತರಣೆ ಮಾಡಲು ಮಧ್ಯಾಹ್ನದವರೆಗೂ ಜಿಲ್ಲಾಧಿಕಾರಿ ಆದೇಶ ನೀಡಿರಲಿಲ್ಲ. ಇದಕ್ಕೂ ಮುನ್ನವೆ ಲಾರಿ ಮಾಲೀಕರು ಇಲಾಖೆ ಕೇಚರಿ ಎದುರು ಲಾರಿಗಳನ್ನು ನಿಲ್ಲಿಸಿದ್ದಾರೆ. 2 ತಿಂಗಳಿನಿಂದ ತುಂಗಭದ್ರಾ ನದಿ ಸಂಪೂರ್ಣ ತುಂಬಿ ಹರಿಯುತ್ತಿದೆ. ಇದರಿಂದ ಯಾವ ಭಾಗಗಳಲ್ಲಿಯೂ ಮರಳು ಎತ್ತಲು ಅವಕಾಶ ಇಲ್ಲ. ಹೀಗಾಗಿ ರಾಜ್ಯದಲ್ಲಿ ಮರಳಿಗೆ ಬಾರಿ ಬೇಡಿಕೆ ಇದ್ದು ಬಂಗಾರದ ಬೆಲೆ ಬಂದಿದೆ.
ಲಕ್ಷ ಲಕ್ಷ ಸಂಗ್ರಹ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಸಿರಗುಪ್ಪ, ಹಗರಿ ವ್ಯಾಪ್ತಿಯ ಮರಳು ಮಾರಾಟಕ್ಕೆ ಪಾಸ್ ವಿತರಣೆಗೆ ಕ್ರಮ ತೆಗೆದುಕೊಂಡಿದ್ದ ಜಿಲ್ಲಾಡಳಿತ, ಹೂವಿನಹಡಗಲಿ ತಾಲೂಕು ಹೊರತುಪಡಿಸಿತ್ತು. ಜಿಲ್ಲಾಡಳಿತದ ಈ ಕ್ರಮದಿಂದ ನಿರೀಕ್ಷೆ ಮಾಡಿದ್ದ ಆದಾಯ ಬರಲಿಲ್ಲ. 2011-12ನೇ ಸಾಲಿನಲ್ಲಿ ಹಗರಿಬೊಮ್ಮನಹಳ್ಳಿಯ 3,273 ಕ್ಯುಬಿಕ್ ಮೀಟರ್ ಮರಳನಿಂದ ರು. 8.83 ಲಕ್ಷ, ಹೂವಿನಹಡಗಲಿಯ 5,469 ಕ್ಯು.ಮೀ. ಮರಳನಿಂದ ರು. 14.76 ಲಕ್ಷ, 2012-13ನೇ ಸಾಲಿನಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ 5,7264 ಕ್ಯು.ಮೀ. ಮರಳನಿಂದ ರು. 2.13 ಕೋಟಿ, ಹೂವಿನಹಡಗಲಿಯ 11,726 ಕ್ಯು.ಮೀ. ಮರಳನ್ನು ರು. 31.66 ಲಕ್ಷ, 2013-14ನೇ ಸಾಲಿನಲ್ಲಿ ಹಗರಿಬೊಮ್ಮನಹಳ್ಳಿಯಲ್ಲಿ 3,781 ಕ್ಯು.ಮೀ. ಮರಳಿನಿಂದ ರು. 16.82 ಲಕ್ಷ ಸಂಗ್ರಹವಾಗಿತ್ತು. ಆದರೆ ಹೂವಿನಹಡಗಲಿ ತಾಲೂಕಿನಲ್ಲಿ ಆದಾಯ ಸಂಗ್ರಹವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ನದಿ ತೀರದಲ್ಲಿ ಮರಳು ಲೂಟಿಯಾಗಿ ಸರ್ಕಾರಕ್ಕೆ ರಾಜಸ್ವ ಇಲ್ಲದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.