ಬಳ್ಳಾರಿ

ಗ್ರಾಮಗಳಲ್ಲಿ ಸಂಸ್ಕೃತಿ ಜೀವಂತ: ಮಂಜುನಾಥ

Published On :

ಕೂಡ್ಲಿಗಿ: ಗ್ರಾಮೀಣ ಪ್ರದೇಶದಲ್ಲಿಯ ಜನತೆಯಲ್ಲಿ ಜಾನಪದ ಸಾಂಸ್ಕೃತಿಕ ಸೊಗಡು ಇನ್ನು ಜೀವಂತವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಅರ್. ಮಂಜುನಾಥ ಅಭಿಪ್ರಾಯಿಸಿದರು.
ಅವರು ತಾಲೂಕಿನ ಕಾಟ್ರಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿಯ ಎರಡನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಯ ಜನರಿಗೆ ಹಬ್ಬ ಹರಿದಿನಗಳೆಂದರೆ ಸಂಭ್ರಮ, ಸಂತೋಷ. ಎಲ್ಲರೂ ಒಂದೆಡೆ ಬೆರೆತು ಜಾನಪದ ಪ್ರಕಾರಗಳ ವೈವಿಧ್ಯಮಯ ಕಲೆಗಳನ್ನು ಪ್ರದರ್ಶಿಸುವ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದರು.
ಇಂದು ಆಧುನಿಕ ಭರಾಟೆಯಲ್ಲಿ ಯುವ ಜನಾಂಗ ದೇಶಿ ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ದುರ್ದೈವದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವಕ ಸಂಘದ ಸದಸ್ಯರು, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಎಸ್. ವೆಂಕಟೇಶ್, ಬಿ.ವಿ. ವೀರಭದ್ರ, ಬಿ. ಬಸಟೆಪ್ಪ, ಜಿಲಾನ್, ಎನ್. ವೆಂಕಟೇಶ್, ಎಂ. ಮಂಜುನಾಥ, ಸಿದ್ದಲಿಂಗಮೂರ್ತಿ, ಪ್ರಕಾಶ, ಜಿ. ಮೂಗಣ್ಣ, ಸಣ್ಣಯಲ್ಲಪ್ಪ, ಪಿ. ರುದ್ರಮುನಿ, ಚ. ಶರಣಪ್ಪ ಕೊಟ್ರೇಶ್, ಆಚಾರಿ, ಪ್ರಹ್ಲಾದ್, ಮಹಾಂತೇಶ್, ಫಕ್ಕೀರಪ್ಪ ನಾಗರಾಜ, ಮೌನೇಶ್, ಮಲ್ಲಿಕಾರ್ಜುನ, ಅಶೋಕ ಇದ್ದರು. ಕೆ.ಎಂ. ಶರಣೇಶ ಸ್ವಾಗತಿಸಿದರು. ರಾಧಾ, ಎಂ. ರೇಖಾ ನಿರೂಪಿಸಿದರು. ಎಂ. ನೀಲಮ್ಮ ಪ್ರಾರ್ಥಿಸಿದರು. ಎಸ್. ವೆಂಕಟೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.