ಅಸಮರ್ಪಕ ಉಪಕರಣದ ಸರ್ವೇಯಿಂದ ದುಷ್ಪರಿಣಾಮ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 18
ಅಸಮರ್ಪಕ ಉಪಕರಣಗಳಿಂದ ಮಾಡಿದ ಸಮೀಕ್ಷೆಗೆ ಅಂದಾಜಿನ ಮೇಲೆ ಅಂಕಿ ಅಂಶಗಳು ದೊರೆಯಲಿದ್ದು, ಇವು ಮುಂದಾಗುವ ದುಷ್ಪರಿಣಾಮಗಳಿಗೆ ಮೂಲವಾಗುತ್ತವೆ ಎಂದು ಬೆಂಗಳೂರಿನ ಸರ್ ಎಂ.ವಿ. ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಂಸ್ಥೆಯ ಎಸ್. ಹೇಮಂತ ರೆಡ್ಡಿ ಅಭಿಪ್ರಾಯಪಟ್ಟರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ನಿಮಿತ್ತ ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಪ್ಲಿಕೇಷನ್ಸ್ ಆಫ್ ಅಡ್ವಾನ್ಸ್ಡ್ ಸರ್ವೇಯಿಂಗ್ ಇನ್ಸ್ಟ್ರುಮೆಂಟ್ಸ್ ಆ್ಯಂಡ್ ಸಾಫ್ಟ್ವೇರ್ ಇನ್ ಸಿವಿಲ್ ಎಂಜಿನಿಯರಿಂಗ್ ಮತ್ತು ಓಝೋನ್ ಡೇ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮರ್ಪಕ ಉಪಕರಣ ಬಳಸಿ: ದೊಡ್ಡ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವ ರಸ್ತೆ, ರೇಲ್ವೆ, ಸುರಂಗ, ಅಣೆಕಟ್ಟುಗಳ ನಿರ್ಮಾಣ ಕಾರ್ಯದಲ್ಲಿ ಈ ರೀತಿಯ ಅಂದಾಜಿನ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ, ಸಮರ್ಪಕ ಉಪಕರಣಗಳನ್ನು ಬಳಸಿ ಸರ್ವೇ ನಡೆಸಲು ಮುಂದಾಗಬೇಕು. ಒಂದು ವೇಳೆ ಆಗದೇ ಇದ್ದಲ್ಲಿ ಒಂದೆಡೆ ನಿರ್ಮಿಸುತ್ತಿದ್ದರೆ, ಮತ್ತೊಂದೆಡೆ ನಾಶವಾಗುತ್ತಾ ಸಾಗುತ್ತವೆ. ಆದ್ದರಿಂದ ನ್ಯೂನತೆಗಳಿರುವ ಉಪಕರಣಗಳನ್ನು ಬಳಸದೆ, ಸಮರ್ಪಕ ಉಪಕರಣಗಳನ್ನು ಬಳಸಬೇಕು ಎಂದರು.
ಉಪಕರಣ ಫಲಕಾರಿ: ಡಾ. ಮಹಾಬಲೇಶ್ವರಪ್ಪ ಮಾತನಾಡಿ, ಸರ್ವೇ ಕಾರ್ಯಕ್ಕೆ ಇಂದಿಗೂ ಇನ್ನೂ ಹಳೇ ಪದ್ಧತಿಗಳ ಉಪಕರಣಗಳನ್ನೇ ಬಳಕೆ ಮಾಡುತ್ತಿರುವುದರಿಂದ ಸಾಕಷ್ಟು ಸಮಯ ವೃಥಾ ಕಳೆದು ಹೋಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸ ಬಗೆಯ ಸರ್ವೇ ಉಪಕರಣಗಳು ಬಂದಿದ್ದು, ಇವುಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಕಡಿಮೆ ಅವಧಿಯಲ್ಲಿ ಸರಿಯಾದ ಮಾಪನಗಳು ದೊರೆಯಲಿವೆ. ರೇಲ್ವೆ ಸುರಂಗಗಳ ತಯಾರಿಕೆಯಲ್ಲಿ ಇಂತಹ ಉಪಕರಣಗಳು ಹೆಚ್ಚು ಫಲಕಾರಿಯಾಗಿವೆ ಎಂದು ತಿಳಿಸಿದರು.
ಪ್ರತಿದಿನ ಹೊರ ಹೊಮ್ಮುವ ಅಲ್ಟ್ರಾ ವೈಲೆಟ್ ಕಿರಣಗಳಿಂದ ಓಝೋನ್ ಮೇಲೆ ವಿಪರೀತ ದುಷ್ಪರಿಣಾಮ ಬೀರಲಿದ್ದು, ಇದರಿಂದ ಪ್ರತಿಯೊಬ್ಬರೂ ಜಾಗೃತಿಯಾಗಬೇಕಿದೆ. ಪರಿಸರ ಹಾಳು ಮಾಡದೇ, ಪ್ರಕೃತಿ ಸಂಪತ್ತನ್ನು ನಾಶಪಡಿಸದೆ, ಅಧಿಕ ಸಂಖ್ಯೆಯಲ್ಲಿ ಕಾಡುಗಳನ್ನು ಬೆಳೆಸಬೇಕು. ಇಲ್ಲದಿದ್ದಲ್ಲಿ ಭೂಮಿಯ ನಾಶಕ್ಕೆ ಮನುಷ್ಯರೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.
ಸಂಪನ್ಮೂಲ ವ್ಯಕ್ತಿ ಮಂಜಪ್ಪ ಓಝೋನ್ ದಿನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಬಸವರಾಜ, ಪ್ರಾಚಾರ್ಯ ಡಾ.ಟಿ. ಹನುಮಂತ ರೆಡ್ಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀವಿ ಸಂಘದ ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಸಹ ಕಾರ್ಯದರ್ಶಿ ಜೆ. ನೇಪಾಕ್ಷಪ್ಪ, ಖಜಾಂಚಿ ಸಂಗನಕಲ್ಲು ಹಿಮಂತರಾಜ್, ಪಾಲಾಕ್ಷಿ ರೆಡ್ಡಿ, ಗೋನಾಳ ವಿರೂಪಾಕ್ಷಗೌಡ, ಯಾಳ್ಪಿ ಪಂಪನಗೌಡ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ನಂದಿತಾ ಪ್ರಾರ್ಥಿಸಿದರು. ಉಪನ್ಯಾಸಕ ಟಿ.ಎಚ್. ಪಾಟೇಲ್ ಸ್ವಾಗತಿಸಿ, ನಿರೂಪಿಸಿದರು. ಪುಷ್ಪಲತಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

