ಬಳ್ಳಾರಿ

ಪೋಷಕರು ಸನ್ಮಾರ್ಗದಲ್ಲಿರಬೇಕು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 21
ಮಕ್ಕಳಲ್ಲಿ ಸದ್ಗುಣಗಳು ಬೆಳೆಯಬೇಕಾದರೆ ಮೊದಲು ಪೋಷಕರು ಸನ್ಮಾರ್ಗದಲ್ಲಿ ನಡೆದಿರಬೇಕು ಎಂದು ಕುಮಾರದೇವರು ತಿಳಿಸಿದರು.
ನಗರದ ಕೊಟ್ಟೂರು ಸ್ವಾಮಿ ಮಠದ ಕುಮಾರೇಶ್ವರ ಭವನದಲ್ಲಿ ಏರ್ಪಡಿಸಿರುವ ಶ್ರೀ ಹಾನಗಲ್ ಕುಮಾರೇಶ್ವರರ 146ನೇ ದಿನಾಚರಣೆಯಲ್ಲಿ ಎರಡನೇ ದಿನದ ಪ್ರವಚನದಲ್ಲಿ ಅವರು ಮಾತನಾಡಿದರು. ಪೋಷಕರಲ್ಲಿ ದುಶ್ಚಟಗಳಿದ್ದಲ್ಲಿ ಅವು ಅನುವಂಶೀಯವಾಗಿ ಮಕ್ಕಳಲ್ಲೂ ಕಾಣಿಸಿಕೊಳ್ಳುವ ಮೂಲಕ ಸದ್ಗುಣಗಳಿಗೆ ಬದಲು ದುರ್ಗುಣಗಳು ಬೆಳೆಯಲಿವೆ. ಹೀಗಾಗಿ ಮೊದಲು ಪೋಷಕರೇ ಸದ್ಗುಣಗಳನ್ನು ಬೆಳೆಸಿಕೊಂಡು, ಸನ್ಮಾರ್ಗದಲ್ಲಿ ನಡೆದಲ್ಲಿ ಮಕ್ಕಳಲ್ಲೂ ಉತ್ತಮ ನೈತಿಕ ಮೌಲ್ಯಗಳು ಬೆಳೆಯುತ್ತವೆ. ಈ ನಿಟ್ಟಿನಲ್ಲಿ ಆದರ್ಶಮಯ ದಾಂಪತ್ಯ ಜೀವನದಲ್ಲಿ ಜನಿಸಿರುವ ಹಾನಗಲ್ ಕುಮಾರೇಶ್ವರರೂ ಪುಣ್ಯಪುರುಷರಾದರು ಎಂದು ವಿವರಿಸಿದರು.
ವಿದ್ಯಾವಂತರನ್ನಾಗಿಸಬೇಕು ಎಂಬ ಇಚ್ಚೆಯಿಂದ ಮಕ್ಕಳನ್ನು ದೂರದೂರಿನಲ್ಲಿ ವ್ಯಾಸಂಗಕ್ಕೆಂದು ಬಿಡಬಾರದು. ಅವರು ತಂದೆ-ತಾಯಿ ನೆರಳಲ್ಲಿ ಬೆಳೆದಾಗ ಪ್ರೀತಿ-ವಾತ್ಸಲ್ಯದ ಬೆಲೆ ತಿಳಿಯುತ್ತದೆ. ಇಲ್ಲವಾದಲ್ಲಿ ಮಕ್ಕಳ ವ್ಯಾಸಂಗಕ್ಕೆಂದು ಪೋಷಕರು ವೆಚ್ಚ ಮಾಡುವ ಹಣವನ್ನು ಮುಂದೆ ಮುಪ್ಪಿನ ವಯಸ್ಸಿನಲ್ಲಿ ಪೋಷಕರನ್ನು ಮಕ್ಕಳು ವೃದ್ಧಾಶ್ರಮಗಳಿಗೆ ಬಿಟ್ಟು ನಿಮ್ಮಿಂದ ದೂರವಾಗುತ್ತಾರೆ. ಆದ್ದರಿಂದ ಮಕ್ಕಳನ್ನು ಹತ್ತಿರದಿಂದ ಹಾಗೂ ಮಠಗಳ ಆಶ್ರಯ, ಅದರ ಸಂಪರ್ಕದಲ್ಲಿ ಬೆಳೆದರೆ ಸದ್ಗುಣಿಗಳಾಗುತ್ತಾರೆ ಎಂದರು.
ಕೊಟ್ಟೂರು ಸ್ವಾಮಿ ಮಠದ ಶ್ರೀ ಸಂಗನಬಸವ  ಮಹಾಸ್ವಾಮಿ, ಹುಕ್ಕೇರಿಮಠದ ಶ್ರೀ ಸದಾಶಿವ  ಸ್ವಾಮೀಜಿ, ಅಕ್ಕಿ ಆಲೂರು ಮಠದ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಗುರುವಾರದ ಪ್ರವಚನ ಕಾರ್ಯಕ್ರಮದ ಪ್ರಸಾದ ಸೇವೆಯನ್ನು ಕೆ.ಟಿ. ಪರಮೇಶ್ವರಪ್ಪ ವಹಿಸಿದ್ದರು.
ಮಠದ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಮಿ ಸೇರಿದಂತೆ ಮಹಿಳೆಯರು, ಮಕ್ಕಳು, ಸಮಾಜದ ಗಣ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.