ಹಂಪಸಾಗರ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಹಗರಿಬೊಮ್ಮನಹಳ್ಳಿ: ಸರ್ಕಾರದ ವಸತಿ, ಶೌಚಾಲಯ ಯೋಜನೆ ಜಾರಿಯಲ್ಲಿ ಕೇಲ ಗ್ರಾಮ ಪಂಚಾಯಿತಿ ಸದಸ್ಯರು ನೇರವಾಗಿ ಅವ್ಯವಹಾರದಲ್ಲಿ ಭಾಗಿಯಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇಡೀ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಅಗ್ರಹಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ತಾಲೂಕಿನ ಹಂಪಸಾಗರದ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಮುಂಜಾನೆಯಿಂದಲೇ ಪಂಚಾಯಿತಿ ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ಗದ್ದಲ ಮನೆ ಮಾಡಿತ್ತು. ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಒಪ್ಪಿಸುವುದಾಗಿ ತಾಪಂ ಕಚೇರಿಯಿಂದ ನಿಯುಕ್ತಿಗೊಂಡಿದ್ದ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಬೀಗ ತೆರವುಗೊಳಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ದೈನಂದಿನ ಕಾರ್ಯಚಟುವಟಿಕೆಗಳು ತೀರಾ ಅಸ್ತವ್ಯಸ್ತಗೊಂಡಿದ್ದವು.
ಅವ್ಯವಹಾರ ಮುಗಿಲು ಮುಟ್ಟಿದೆ: ಕರವೇ ತಾಲೂಕಾಧ್ಯಕ್ಷ ಎನ್.ಎಂ. ಗೌಸ್ ಮಾತನಾಡಿ, ಜನರಿಂದ ಚುನಾಯಿತರಾದ ಹಲವು ಗ್ರಾಪಂ ಸದಸ್ಯರ ಅವ್ಯವಹಾರ ಇಲ್ಲಿ ಮುಗಿಲು ಮುಟ್ಟಿದೆ. ಬಸವ, ಇಂದಿರಾ ಅವಾಸ ಯೋಜನೆಯಲ್ಲಿ ಮಂಜೂರಾದ ಮನೆಗಳನ್ನು ರು. 10 ಸಾವಿರದಂತೆ ರೇಟ್ ಫಿಕ್ಸ್ ಮಾಡಿ ಮಾರಾಟ ಮಾಡಿದ್ದಾರೆ. ಅಲ್ಲದೆ ಒಬ್ಬರ ಹೆಸರಿನಲ್ಲಿ ನಾಲೈದು ಶೌಚಾಲಯಗಳಿಗೆ ಪಂಚಾಯಿತಿಯಿಂದ ಬಿಲ್ ಎತ್ತಲಾಗಿದೆ. ಹಂಪಾಸಾಗರ ಗ್ರಾಪಂನಲ್ಲಿ ನಡೆದಿರುವ ಅಷ್ಟೂ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಅತಿಕ್ರಮಣ: ಗ್ರಾಪಂಗೆ ಸೇರಿದ ಜಾಗೆ, ಆಸ್ತಿಯನ್ನು ಹಲವರು ಅತಿಕ್ರಮಿಸಿದ್ದಾರೆ. ಅಲ್ಲದೆ ವಸತಿ ರಹಿತರಿಗೆ ಸರ್ಕಾರ ನೀಡಿರುವ ಸ್ಥಳವನ್ನು ಸಹ ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕೆಲ ಸದಸ್ಯರು ನೇರವಾಗಿ ಸರ್ಕಾರಿ ಜಾಗೆಗಳನ್ನು ತಮ್ಮ ಹೆಸರಿನಲ್ಲಿ ಖಾತ ಬದಲಾವಣೆ ಮಾಡಿಸಿಕೊಂಡಿದ್ದಾರೆ. ನ್ಯಾಯಸಮ್ಮತ ತನಿಖೆ ನಡೆದರೆ ಹಂಪಾಸಾಗರ ಗ್ರಾಪಂ ಸದಸ್ಯರು ಮಾಡಿರುವ ಎಲ್ಲ ಭಾನಗಡಿ ಹೂರಣ ಹೊರಬಿಳ್ಳಲಿದೆ ಎಂದರು. ಕರವೇ ಕಾರ್ಯದರ್ಶಿ ಬಿಎಂಎಸ್ ಮಂಜು ನಾಥ, ಪ್ರಹ್ಲಾದ್, ಹಂಪಸಾಗರ ಗ್ರಾಮ ಘಟಕದ ಅಧ್ಯಕ್ಷ ಬಾಲರಾಜ, ಏಣಿಗಿ ಘಟಕದ ಅಧ್ಯಕ್ಷ ರಮೇಶ, ಬೆಣಕಲ್ ಘಟಕದ ಅಧ್ಯಕ್ಷ ಮಾಬುಸಾಬ್, ವರಲಹಳ್ಳಿ ಘಟಕದ ಅಧ್ಯಕ್ಷ ನಾಗರಾಜ, ಮಾಲ್ವಿ ಘಟಕದ ಅಧ್ಯಕ್ಷ ರೆಡ್ಡಿ ಬಸವರಾಜ, ಬಸವರಾಜ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

