ಬಳ್ಳಾರಿ

ಪಂ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ: ಇಂದು ಸಂಗೀತ ನಮನ

Published On :

ಹೊಸಪೇಟೆ: ಇಲ್ಲಿನ ಮಾನವತಾ ಸೇವಾ ಟ್ರಸ್ಟ್‌ನಿಂದ ಡಾ. ಪಂ. ಪುಟ್ಟರಾಜ ಗವಾಯಿಗಳವರ 3ನೇ ಪುಣ್ಯಸ್ಮರಣೆಯ ಅಂಗವಾಗಿ ಸಂಗೀತ ನಮನ ಕಾರ್ಯಕ್ರಮ ಚಿತ್ತವಾಡ್ಗಿಯ ಗುರು ಕಲ್ಮಠೇಶ್ವರ ದೇವಸ್ಥಾನ ಆವರಣದಲ್ಲಿ ಸೆ. 22ರ ಸಂಜೆ 5.30ಕ್ಕೆ ನಡೆಯಲಿದೆ.
ಸ್ಥಳೀಯ ಸಮಾಜ ಸೇವಕ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜವಳಿ ರುದ್ರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಹಾಯಕ ಆಯುಕ್ತ ಸುನೀಲ್‌ಕುಮಾರ್, ಬಳ್ಳಾರಿ ಗ್ರಾಮಾಂತರ ಡಿಎಸ್‌ಪಿ ಎನ್. ರುದ್ರಮುನಿ, ತಹಸೀಲ್ದಾರ್ ರಮೇಶ್ ಕೋನರಡ್ಡಿ, ಹನುಮನಹಳ್ಳಿಯ ಸಮಾಜ ಸೇವಕ ಹಾಗೂ ಎಂಪಿಎಂಸಿ ಮಾಜಿ ಅಧ್ಯಕ್ಷ ಕುರಿ ಶಿವಮೂರ್ತಿ, ಮಲ್ಲಿಗೆ ಹೆಲ್ತ್‌ಕೇರ್ ಸೆಂಟರ್‌ನ ಡಾ. ಪಿ.ಡಿ. ವಿನಾಯಕ, ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಯು. ರಾಘವೇಂದ್ರರಾವ್, ವಿಜಯನಗರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ನಗರಸಭಾ ಸದಸ್ಯ ಮಲ್ಲಿಕಾರ್ಜುನ, ಸ್ಥಳೀಯ ಮುಖಂಡ ಉಮೇಶ್‌ಪ್ಪ ಕಳ್ಳಿಮನಿ, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ನರಸಿಂಹ ಮೂರ್ತಿ ಅಪ್ಪಣ್ಣ, ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಅನಂತ ಪದ್ಮನಾಭ, ಸಮಾಜ ಸೇವಕ ಪಂತರ್ ಜಯಂತ್, ಜೆಡಿಎಸ್ ಮುಖಂಡ ಮುಂಡ್ರಿಗಿ ನಾಗರಾಜ್, ತಾರಾನಗರದ ಸಮಾಜ ಸೇವಕ ರಮೇಶ್ ಗಡಾದ್, ಚಿತ್ತವಾಡ್ಗಿಯ ಅಶ್ವಿನಿ ಶಾಲೆ ಮುಖ್ಯೋಪಾಧ್ಯಾಯ ವಿಜಯಕುಮಾರ್, ಮುಖಂಡರಾದ ಕಾಶೀನಾಥ ಕುಲಕರ್ಣಿ, ಬಸವರಾಜ ನಾಲತ್ತವಾಡ್, ಹಿರೇಮಠ್, ಎಸ್.ಎಂ. ರವಿಕಾಂತ್, ಸಂಗೀತ ಭಾರತಿ ಸಂಸ್ಥೆಯ ಅಧ್ಯಕ್ಷ ಎಚ್.ಪಿ. ಕಲ್ಲಂಭಟ್ ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸುವರು. ಇಟಗಿ ವಿರೂಪಾಕ್ಷಪ್ಪ, ದೊಡ್ಡಯ್ಯ ಕಲ್ಲೂರ, ಶರಣಬಸವ ವಠಾರ, ವಿಜಯಕುಮಾರ್, ಪುಷ್ಪಾವತಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಸಿಕೊಡುವರು. ವಾಸುದೇವ ಭಟ್ಟ, ಎಚ್.ಪಿ. ಕಲ್ಲಂಭಟ್, ಎ. ಕರುಣಾನಿಧಿ, ರಾಘವೇಂ ದ್ರ, ಜಿ.ಪಿ. ಮಾರುತಿರಾವ್, ಮಾವದೇವ, ಹಲೋ ಜೋಷಿ, ಟಿ. ರಾಜಾರಾವ್, ಪದ್ಮಜ ಶ್ಯಾಂ ಸುಂದರ್ ಸುಗಮ ಸಂಗೀತ ನಡೆಸಿಕೊಡುವರು ಎಂದು ಟ್ರಸ್ಟ್‌ನ ಅಧ್ಯಕ್ಷ ಯಲ್ಲಪ್ಪ ಭಂಡಾರ್‌ದಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.