ಅಂಗವಿಕಲರ ಹಕ್ಕು: ಜಾಗ್ರತರಾಗಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 22
ವಿಕಲಚೇತನರ ಕಾಯಿದೆಗಳು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ವಿಕಲಚೇತನರು ತಮ್ಮ ಹಕ್ಕುಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಲು ಜಾಗ್ರತರಾಗಬೇಕಿದೆ ಎಂದು ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಚಿದಾನಂದ ಎಂ. ಗದಗ ಹೇಳಿದರು.
ನಗರದ ಜೇಸೀಸ್ ಶಾಲೆಯ ಆವರಣದಲ್ಲಿ ಭಾನುವಾರ ಹೊಸಪೇಟೆ ತಾಲೂಕು ಗ್ರಾಮೀಣ ಹಾಗೂ ನಗರ ಘಟಕದ ವಿಕಲಚೇತನರ ಸಂಘಗಳು ಹಾಗೂ ಜೆಸಿಐ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 'ಬದಲಾಗುತ್ತಿರುವ ಸಮಾಜ ಕಾಯಿದೆ-1995' ಕುರಿತು ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರು ತಮ್ಮ ಹಕ್ಕುಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಂಡು ಜಾಗೃತರಾಗಬೇಕಾಗಿದೆ. ವಿಕಲಚೇತನರಿಗಾಗಿ ಸರ್ಕಾರ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಜೆಸಿಐ ಅಧ್ಯಕ್ಷ ಕೆ.ಸಿ. ಮನು ಮಾತನಾಡಿ, ಭಾರತವನ್ನು ವಿಶ್ವ ಆರೋಗ್ಯ ಸಂಸ್ಥೆ ಪೊಲೀಯೋಮುಕ್ತ ದೇಶ ಎಂದು ಘೋಷಿಸುವ ಹಂತದಲ್ಲಿದ್ದು, ವಿಕಲಚೇತನರು ಸರ್ವತೋಮುಖ ಅಭಿವೃದ್ಧಿಗೆ ಸಂಘಟಿತರಾಗಬೇಕಿದೆ ಎಂದರು.
ವಿಕಲಚೇತನರ ಸಂಘದ ನಗರ ಘಟಕದ ಅಧ್ಯಕ್ಷ ಜಿ. ಮುಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ಕೇಂದ್ರದ ವಿಶೇಷ ಶಿಕ್ಷಕಿ ರೇಖಾ ಸಜ್ಜನ, ವಕೀಲ ಜೆ.ಸಿ. ರವಿಕುಮಾರ್, ಸಂಪನ್ಮೂಲ ವ್ಯಕ್ತಿ ಜೆ.ಸಿ. ಶರಣಪ್ಪ, ವಿಕಲಚೇತನರ ಸಂಘಟನೆಯ ಮಹಿಳಾ ಘಟಕದ ಗಾಯತ್ರಿ, ತಾಯಮ್ಮ, ಮೊಹ್ಮದ್ ರಫೀಕ್, ಕೆ.ಜಿ. ವೆಂಕಟೇಶ್, ಜಿ. ಅಂಜಿನಿ, ಸಲಹಾ ಸಮಿತಿ ಮುಖಂಡ ಎನ್. ವೆಂಕಟೇಶ್ ಭಾಗವಹಿಸಿದ್ದರು. ಹುಲುಗಪ್ಪ ಸ್ವಾಗತಿಸಿದರು. ಎನ್. ವೆಂಕಟೇಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

