ಕಾರ್ಮಿಕರ ಮೇಲಿನ ತಾರತಮ್ಯ ನಿವಾರಣೆಗೆ ಒತ್ತಾಯ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 23
ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ತಾರತಮ್ಯ ನಿಲ್ಲಿಸುವಂತೆ ಒತ್ತಾಯಿಸಿ ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿಯ ಪದಾಧಿಕಾರಿಗಳು ಹಾಗೂ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಯೂನಿಟ್ನ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿ ಕಾರ್ಖಾನೆಯ ಆಡಳಿತ ಮಂಡಳಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಪಿ. ವೆಂಕಟೇಶ್ ಮಾತನಾಡಿ, ನಗರದಲ್ಲಿರುವ ಪಿಡಿಎಲ್ ಕಾರ್ಖಾನೆಯಲ್ಲಿ 5-10 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರಿಗೆ ಸಮವಸ್ತ್ರಗಳು ಹಾಗೂ ಶೂ ಸೇರಿದಂತೆ ಇತರೆ ರಕ್ಷಣಾ ವಸ್ತುಗಳನ್ನು ನೀಡುತ್ತಿಲ್ಲ. ನ್ಯಾಯಯುತ ಬೇಡಿಕೆಗಳನ್ನು ಕೇಳಿದರೆ ಕಾರ್ಖಾನೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ. ತಕ್ಷಣವೇ ಬೇಡಿಕೆಗಳನ್ನು ಈಡೇರಿಸಲು ಕಾರ್ಖಾನೆಯ ಆಡಳಿತ ಮಂಡಳಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಹಬ್ಬಗಳಿಗೆ ಹಾಗೂ ಕಂಪನಿ ರಜೆಗಳಿಗೆ ಸಿಗುವ ರಜೆಗಳನ್ನು ಎಲ್ಲಾ ಗುತ್ತಿಗೆಯ ಕಾರ್ಮಿಕರಿಗೆ ಸಂಬಳ ಸಹಿತ ರಜೆಯನ್ನು ನೀಡಬೇಕು. ಪ್ರತಿ ತಿಂಗಳು ಕಾರ್ಮಿಕರಿಗೆ ಸಿಗುವ ವೇತನ ಚೀಟಿಯಲ್ಲಿ ಪಿ.ಎಫ್. ನಂಬರ್ ಮತ್ತು ಇ.ಎಸ್.ಐ. ನಂಬರ್ನ್ನು ವೇತನ ಚೀಟಿಯಲ್ಲಿ ಮುದ್ರಿಸಿ ಕೊಡಬೇಕು. ಪ್ರತಿ ತಿಂಗಳು ಇ.ಎಸ್.ಐ. ಹಣವನ್ನು ಸಕಾಲಕ್ಕೆ ಪಾವತಿಸಬೇಕು. ಗುತ್ತಿಗೆ ಕಾರ್ಮಿಕರು ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಕಾರ್ಖಾನೆಗಳಲ್ಲಿ ಯಾವುದೇ ತಾಂತ್ರಿಕ ದೋಷದಿಂದ ಕೆಲಸ ಸ್ಥಗಿತವಾದರೆ ಆ ದಿನದ ಹಾಜರಿಯನ್ನು ತಪ್ಪದೇ ಹಾಕಬೇಕು. ಐಎಂಎಲ್ನಲ್ಲಿ ಮತ್ತು ವಾಶಿಂಗ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮಾಡಬೇಕು. ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡಬೇಕು. ಗುತ್ತಿಗೆ ಕಾರ್ಮಿಕರಿಗೆ ಅವಶ್ಯವಿರುವ ಸಮವಸ್ತ್ರ ಹಾಗೂ ಶೂಗಳನ್ನು ಉಚಿತವಾಗಿ ನೀಡಬೇಕು. ಕಾರ್ಮಿಕರಿಗೆ ಚಿಕಿತ್ಸೆ ನೀಡುವ ವೈದ್ಯರು ಸಕಾಲದಲ್ಲಿ ಲಭ್ಯರಿದ್ದು, ಎಲ್ಲಾ ಔಷಧಿಗಳು ಅಲ್ಲಿಯೇ ಸಿಗುವಂತೆ ನೋಡಿಕೊಳ್ಳಬೇಕು. ಚೀಟಿಯನ್ನು ಕೊಟ್ಟು ಹೊರಗಿನಿಂದ ಔಷಧಿಯನ್ನು ತರಿಸಬಾರದು ಎಂದು ಒತ್ತಾಯಿಸಿದರು. ಕರುನಾಡು ಕಲಿಗಳ ಕ್ರಿಯಾಶೀಲ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ. ದಾದಾಖಲಂದರ್, ಎಸ್. ವಿರೂಪಾಕ್ಷಿ, ಆಶೋಕ್ ಕಲಾಲ್, ಬಿ. ಪಂಪಾಪತಿ ನಾಯಕ, ಸಿ. ಮರಿಸ್ವಾಮಿ, ಬಿ. ರಜಾಕ್, ರಾಮು, ಮಂಜುನಾಥ, ಕಾರ್ಮಿಕರಾದ ಬಿ.ಟಿ. ಬಸವರಾಜ್, ಯು. ಪರಶುರಾಮ್, ಬಿ. ಸಂತೋಷ್ಕುಮಾರ್, ಎಚ್.ಎಂ. ವಿಶ್ವನಾಥಯ್ಯ, ಯು. ಚಂದ್ರಶೇಖರ್, ಕೆ. ರಾಮಂಜಿನಿ, ಸಿ. ಅಶೋಕ್, ಎಸ್. ಕುಮಾರ್, ಎನ್. ರಾಜು, ಮಾರುತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

