ಬಳ್ಳಾರಿ

ಜಾರಕಿಹೊಳಿ ಪೌರಕಾರ್ಮಿಕ ದಿನಾಚರಣೆ ಜನಕ

Published On :

ಕೊಟ್ಟೂರು: ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಪೌರಕಾರ್ಮಿಕರ ದಿನಾಚರಣೆಯ ನಿಜವಾದ ಜನಕರಾಗಿದ್ದಾರೆ. ಸಚಿವರಾಗಿದ್ದ ಅವಧಿಯಲ್ಲಿ ಪೌರಕಾರ್ಮಿಕರಿಗೆ ರು. 2 ಸಾವಿರ ವಿಶೇಷ ಭತ್ಯೆ ನೀಡುವ ಯೋಜನೆ ಜಾರಿಗೊಳಿಸಿ ಇಡೀ ಸಮುದಾಯದ ಹಿತಕಾಪಾಡಿದವರು ಎಂದು ಪಪಂ ಮುಖ್ಯಾಧಿಕಾರಿ ಹನುಮಂತಮ್ಮ ಹೊಗಳಿಕೆ ವ್ಯಕ್ತಪಡಿಸಿದರು.
ಸೋಮವಾರ ಪಪಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರ ಹಲವಾರು ಬೇಡಿಕೆಗಳು ಈಡೇರಿದ್ದು ಬಾಲಚಂದ್ರ ಜಾರಕಿಹೊಳಿ ಸಚಿವರಾಗಿದ್ದ ಅವಧಿಯಲ್ಲೇ ಪೌರಕಾರ್ಮಿಕರ ದಿನಾಚರಣೆಗೆಂದೇ ಸೆಪ್ಟೆಂಬರ್ 23ರಂದು ದಿನಾಂಕವನ್ನು ನಿಗದಿಗೊಳಿಸಿ ಆ ದಿನವಿಡೀ ಕಾರ್ಮಿಕರಿಗೆ ರಜೆ ಮಂಜೂರು ಮಾಡುವ ಆದೇಶ ನೀಡಿದರು ಎಂದು ಹೇಳಿದ ಅವರು, ಇಂಥ ಮಹಾನೀಯರು ಪೌರಕಾರ್ಮಿಕರ ಕಲ್ಯಾಣಕ್ಕಾಗಿಯೇ ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದರು.
ಇವುಗಳ ಸದುಪಯೋಗಪಡಿಸುವಲ್ಲಿ ಮುಂದಾಗದೇ ಪೌರಕಾರ್ಮಿಕರು ಕುಡಿತದ ಚಟಕ್ಕೆ ಬಿದ್ದು ತಮ್ಮ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿಕೊಳ್ಳುತ್ತಿರುವುದು ದುರಂತ. ಇದು ಈಗಲಾದರೂ ನಿಲುಗಡೆಗೊಳ್ಳಲು ದಿನಾಚರಣೆಯ ಈ ಘಳಿಗೆಯಲ್ಲಿ ಪ್ರತಿ ಕಾರ್ಮಿಕ ದೃಢನಿಶ್ಚಯ ಮಾಡಬೇಕೆಂದರು. ಪಪಂ ಉಪಾಧ್ಯಕ್ಷ ಎಸ್. ಗುರುಶಾಂತಪ್ಪ ಮಾತನಾಡಿದರು. ಪಪಂ ಅಧ್ಯಕ್ಷೆ ಅನುಸೂಯಮ್ಮ ಸೆರಗಾರ್, ಸದಸ್ಯರಾದ ಸೋಡಾ ಗುರುಬಸವರಾಜ, ಕುರುಬರ ನಾಗಪ್ಪ, ಅನಿಲ್ ಹೊಸಮನಿ, ಸುಮ್ಮಕ್ಕ ದುರುಗಪ್ಪ, ಶೋಭಾ ಜಿ. ಸಿದ್ದಯ್ಯ ಅವರು ಅತ್ಯುತ್ತಮ ಪೌರಕಾರ್ಮಿಕ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ ಮತ್ತು ಗಂಗಮ್ಮನವರನ್ನು ಸನ್ಮಾನಿಸಿದರು. ಪಪಂ ವತಿಯಿಂದ ಪೌರಕಾರ್ಮಿಕರಿಗೆ ರೇನ್‌ಕೋಟ್, ಹ್ಯಾಂಡ್ ಬ್ಲೌಸ್, ಮಾಸ್ಕ್, ಶೂ ಮತ್ತಿತರ ಪರಿಕರಗಳನ್ನು ವಿತರಿಸಿದರು. ಕಿರಿಯ ಎಂಜಿನಿಯರ್ ಅರುಣಾ ಪಾಟೀಲ್, ಪೌರಕಾರ್ಮಿಕರ ಸಂಘದ ಸ್ಥಳೀಯ ಅಧ್ಯಕ್ಷ ರಾಜಭಕ್ಷಿ ವೇದಿಕೆಯಲ್ಲಿದ್ದರು. ಭಾಸ್ಕರ್ ಸ್ವಾಗತಿಸಿದರು. ಮಂಜುನಾಥ ದಳವಾಯಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.