ಬಳ್ಳಾರಿಯಲ್ಲಿ ಸ್ವಾಮೀಜಿಗಳ ಜನಜಾಗೃತಿ ಯಾತ್ರೆ
ಬಳ್ಳಾರಿ: ಹಾನಗಲ್ಲ ಕುಮಾರ ಶಿವಯೋಗಿಗಳ 146ನೇ ಜಯಂತಿ ಅಂಗವಾಗಿ ಸ್ಥಳೀಯ ಬಸವೇಶ್ವರ ನಗರ, ನೆಹರು ಕಾಲೋನಿಯಲ್ಲಿ ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಿವಯೋಗ ಮಂದಿರದ ಸ್ವಾಮೀಜಿಗಳು ಜನಜಾಗೃತಿ ಪಾದಯಾತ್ರೆ ನಡೆಸಿದರು.
ಭಕ್ತರು ಸಕಲ ಮಂಗಳ ವಾದ್ಯಗಳೂಂದಿಗೆ ಹಾಗೂ ಮಹಿಳೆಯರು ಕಳಸದೊಂದಿಗೆ ಸ್ವಾಮೀಜಿಗಳನ್ನು ಸ್ವಾಗತಿಸಿದರು. ನಂತರ ವಿವಿಧೆಡೆ ಸಂಚರಿಸಿ, ಜನಜಾಗೃತಿ ಮೂಡಿಸಲಾಯಿತು. ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಎಸ್. ಗುರುಲಿಂಗನಗೌಡ, ಪಾಲಿಕೆ ಸದಸ್ಯ ಮಲ್ಲನಗೌಡ, ಜಿ.ಎಸ್. ಮಹಾಲಿಂಗಯ್ಯಸ್ವಾಮಿ, ಸಾಹುಕಾರ ಸತೀಶ್‌ಬಾಬು, ಜಾನೆಕುಂಟೆ ಬಸವರಾಜ, ಯಾಳ್ಪಿ ಪಂಪನಗೌಡ, ಅಸುಂಡಿ ನಾಗರಾಜ, ಬಿ.ಎಂ. ಉಮಾಪತಿ, ವೀರೇಶ ಶರ್ಮಾ, ಚೆನ್ನಬಸಯ್ಯಸ್ವಾಮಿ, ತಿಮ್ಮನಗೌಡ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

