ಆಂದ್ರ ಮೂಲದ ವ್ಯಕ್ತಿ ಅನುಮಾನಾಸ್ಪದ ಸಾವು
ಕೂಡ್ಲಿಗಿ: ಆಂಧ್ರಪ್ರದೇಶ ಮೂಲದ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯು ಆಂಧ್ರಪ್ರದೇಶದ ಮುರಡಿ ಗ್ರಾಮದ ಮಹಾಂತೇಶ್ (35) ಎಂದು ಹೊಸಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಮೃತ ಮಹಾಂತೇಶ 15 ವರ್ಷಗಳ ಹಿಂದೆ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಪ್ರಮೀಳಾ ಎಂಬ ಮಹಿಳೆಯನ್ನು ಮದುವೆಯಾಗಿದ್ದ. ಅನಂತರ ಕಳೆದ 10 ವರ್ಷಗಳ ಹಿಂದೆ ಕೂಡ್ಲಿಗಿ ತಾಲೂಕಿನ ಭೀಮಸಮುದ್ರ ಗ್ರಾಮದ ರೇಖಾಳನ್ನು 2ನೇ ಮದುವೆಯಾಗಿ ಹೊಸಪೇಟೆಯಲ್ಲಿ ವಾಸವಾಗಿದ್ದನು. ಕೆಲ ದಿನಗಳ ಹಿಂದೆ ಕೂಡ್ಲಿಗಿ ತಾಲೂಕಿನ ಶಿವಪುರ ಬಳಿ ತನ್ನ 2ನೇ ಪತ್ನಿ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಮಹಾಂತೇಶ್ ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಮಹಾಂತೇಶ್ ಜೈಲಲ್ಲಿ ಇದ್ದ ಸಮಯದಲ್ಲಿ 2ನೇ ಪತ್ನಿ ಹೊಸಪೇಟೆಯ ಮನೆಯಲ್ಲಿದ್ದ ಎಲ್ಲ ಸಾಮಗ್ರಿ ಸಮೇತ ತನ್ನ ತವರು ಗ್ರಾಮ ಭೀಮಸಮುದ್ರಕ್ಕೆ ಬಂದಿದ್ದಾಳೆ. ಜೈಲಿನಿಂದ ಬಿಡುಗಡೆಯಾದ ಮಹಾಂತೇಶ್ ಹೊಸಪೇಟೆಯ ತನ್ನ ಮನೆಗೆ ಆಗಮಿಸಿದ್ದಾನೆ. ಅದರೆ ತನ್ನ ಹೆಂಡತಿ ಮನೆ ಖಾಲಿ ಮಾಡಿದ್ದಾಳೆ ಎಂದು ತಿಳಿದು ಭಾನುವಾರ ಭೀಮಸಮುದ್ರಕ್ಕೆ ಬಂದಿದ್ದಾನೆ. ಇಲ್ಲಿ ರೇಖಾ ಮತ್ತು ಅವರ ಮನೆಯವರೊಂದಿಗೆ ಜಗಳವಾಗಿದೆ. ನಂತರ ಸೋಮವಾರ ಮುಂಜಾನೆ ಮಹಾಂತೇಶ್ ಗ್ರಾಮದ ಹೊರವಲಯದಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಶವವಾಗಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೊಸಹಳ್ಳಿ ಪೊಲೀಸರು ಮಹಾಂತೇಶನ 1ನೇ ಪತ್ನಿ ಪ್ರಮೀಳಾ ನೀಡಿದ ದೂರಿನಂತೆ ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

