ಕ್ರೀಡೆ ಅಭಿವೃದ್ಧಿಪಡಿಸಬೇಕು: ಸಿರಾಜ್ಶೇಕ್
ಹಗರಿಬೊಮ್ಮನಹಳ್ಳಿ: ಶಾಲಾ ಮಟ್ಟದಲ್ಲಿ ಕ್ರೀಡೆಯನು ಅಭಿವೃದ್ಧಿಪಡಿಸುವ ವ್ಯವಸ್ಥೆ ನಮ್ಮಲ್ಲಿ ಇನೂ ಬೆಳೆದಿಲ್ಲ. ಹೀಗಾಗಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಕ್ಕು ಆರು ದಶಕ ಕಳೆದರೂ ಒಲಿಂಪಿಕ್ಸ್ನಂತಹ ವಿಶ್ವಮಟ್ಟದ ಕ್ರೀಡೋತ್ಸವದಲ್ಲಿ ಭಾರತ ಪದಕದ ಬರ ಎದುರಿಸುವಂತಾಗಿದೆ ಎಂದು ಮಾಜಿ ಶಾಸಕ ಸಿರಾಜಶೇಖ್ ಅಭಿಪ್ರಾಯಪಟ್ಟರು. ಪಟ್ಟಣದ ರಾಮನಗರದಲ್ಲಿನ ಎಂ.ವೈ. ಘೋರ್ಪಡೆ ಶಾಲೆಯಲ್ಲಿ ವಿಭಾಗ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳನು ಸನ್ಮಾನಿಸಿ ಮಾತನಾಡಿದರು.
ಅಭಿನಂದನೆ: ಬಳ್ಳಾರಿ ನಗರದಲ್ಲಿ ಜರುಗಿದ 14 ವರ್ಷದೊಳಗಿನ ವಯೋವುತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ಟೇಬಲ್ಟೆನಿಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಹಾಂತೇಶ, ಪ್ರಜ್ವಲ ಅಂಗಡಿ, ಸಂಜಯ, ಜೀವನ್, ಪ್ರವೀಣ ಹಾಗೂ17 ವರ್ಷದೊಳಗಿನ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ರೋಷನ್, ಶಶಾಂಕ, ಸುಲೇಮಾನ್, ನಿತೀಶ್, ಶಾಹಿ, ಶೇಕ್ಷಾವಲಿ, ಸೊಹೇಬ್ ಅವರನು ಅಭಿನಂದಿಸಿದರು.
ಮುಖ್ಯೋಪಾಧ್ಯಾಯ ಸಿ.ಜೆ. ಸುರೇಂದ್ರ, ದೈಹಿಕ ಶಿಕ್ಷಣ ಶಿಕ್ಷಕ ಎಂ. ಸುಭಾಷ್ಚಂದ್ರ, ಕೆ.ಎಂ. ಶಿವಶಂಕರಯ್ಯ, ಎಚ್.ಎಂ. ಚಂದ್ರಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

