ಮಾನವೀಯ ಮೌಲ್ಯಗಳು ನಾಟಕೀಯ: ವಿಷಾದ
ಕೂಡ್ಲಿಗಿ: ಸಮಾಜದಲ್ಲಿ ಇಂದು ಪರಸ್ಪರ ನಂಬಿಕೆ, ವಿಶ್ವಾಸ, ಮಾನವೀಯ ಮೌಲ್ಯಗಳು ನಾಟಕೀಯವಾಗುತ್ತಿರುವುದು ವಿಪರ್ಯಾಸ ಎಂದು ಯಡೆಯೂರು ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಅವರು ಪಟ್ಟಣದ ಜ್ಞಾನಭಾರತಿ ಬಿಇಡಿ ಕಾಲೇಜು ವತಿಯಿಂದ ಕಣ್ವಕುಪ್ಪೆ ಗವಿಮಠದಲ್ಲಿ ನಡೆದ 3 ದಿನಗಳ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಪಡೆಯುವ ಜತೆಗೆ ಸಂಸ್ಕಾರ, ಸಂಸ್ಕೃತಿ, ಗುರು, ಹಿರಿಯರನ್ನು ಗೌರವಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಉತ್ತಮ ನಾಗರಿಕರ ಲಕ್ಷಣ. ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಅಳವಡಿಕೊಳ್ಳುವ ಜತೆಗೆ ಸ್ನೇಹ, ಸೌಹಾರ್ದತೆ, ಸಹೋದರತೆ ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಚಿಂತಿಸುವ ಅಗತ್ಯವಿದೆ. ಮಾನವೀಯತೆ ಇಲ್ಲದ ಶಿಕ್ಷಣ ನಮ್ಮದಾಗಬಾರದು ಎಂದರು.
ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಆಚಾರ, ವಿಚಾರ, ಪರಂಪರೆ, ಆಧ್ಯಾತ್ಮಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಉತ್ತಮ ನಡತೆ. ಆರೋಗ್ಯವಂತ, ಜ್ಞಾನವಂತ ಯುವಪಡೆ ದೇಶದ ಆಸ್ತಿ ಎಂಬುದು ಮಹಾತ್ಮರ ಚಿಂತನೆಗಳಿಂದ ಕಂಡುಕೊಳ್ಳಬಹುದು ಎಂದು ಹೇಳಿದರು.
ಮಾತಾ ಪಿತೃ, ಗುರು, ಹಿರಿಯರು, ಸಾಧು, ಸಂತರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳುವುದು ಸಂಸ್ಕಾರವಂತ ಸಮಾಜದ ಲಕ್ಷಣ. ರಾಷ್ಟ್ರಭಕ್ತಿ, ಕಾಯಕನಿಷ್ಠೆ, ಪ್ರಾಮಾಣಿಕತೆ ಎಲ್ಲರಿಗೂ ಇರಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಗಳೂರು ಅಮರಭಾರತಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಟಿ. ತಿಪ್ಪೇಸ್ವಾಮಿ, ಪ್ರಾಚಾರ್ಯ ಎಚ್. ವೀರಭದ್ರಪ್ಪ, ಉಪನ್ಯಾಸಕ ಕೆ.ಎನ್. ಮಂಜುನಾಥ, ಜಿ. ನಾಗರಾಜ, ಕೆ.ಎಂ. ಅಜ್ಜಯ್ಯ, ಯು. ದೇವರಾಜ್, ಸುಮಾ ಹಿರೇಮಠ, ಹೂಡೇಂ ಕೃಷ್ಣಮೂರ್ತಿ, ಎನ್. ಬಸವರಾಜ್, ಜಿ. ಜಗದೀಶ್, ಭೀಮಸಮುದ್ರ ರಂಗನಾಥ, ಬಿ. ನಾಗರಾಜ, ಬಸವರಾಜಪ್ಪ, ಕೊಟ್ರೇಶಪ್ಪ, ನಾಗಲಿಂಗಪ್ಪ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

