ಬಳ್ಳಾರಿ

ಮೋದಿ ಪ್ರಧಾನಿಯಾಗಿಸಲು ಬಿಜೆಪಿ ಗೆಲ್ಲಿಸಿ

Published On :

ಕೊಟ್ಟೂರು: ಮೋದಿ ಪ್ರಧಾನಿಯಾಗುವುದನ್ನೇ ರಾಷ್ಟ್ರದ ಜನ ಎದುರು ನೋಡುತ್ತಿದ್ದಾರೆ. ಬಿಜೆಪಿಯನ್ನು ಈ ಕಾರಣಕ್ಕಾಗಿಯೇ ಗೆಲ್ಲಿಸಬೇಕೆಂದು ಮತದಾರರು ನಿಶ್ಚಯಿಸಿರುವುದು ನಮ್ಮನ್ನು ಉತ್ತೇಜನಗೊಳ್ಳುವಂತೆ ಮಾಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಪಟ್ಟಣಪಂಚಾಯಿತಿ ಸದಸ್ಯರಾದ ಸೋಡಾ ಗುರುಬಸವರಾಜ್, ಕವಿತಾ ಬಸವರಾಜ್ ಅವರನ್ನು ಬಿಜೆಪಿಗೆ ಶುಕ್ರವಾರ ಬರಮಾಡಿಕೊಂಡು ಮಾತನಾಡಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿಯುತವಾಗಿ ಸಂಘಟಿತಗೊಳ್ಳುತ್ತಿದೆ. ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಚುನಾಯಿತರಾಗಿರುವ 8ನೇ ವಾರ್ಡ್ ಸದಸ್ಯ ಸೋಡಾ ಗುರುಬಸವರಾಜ್ ಮತ್ತು 19ನೇ ವಾರ್ಡ್ ಸದಸ್ಯೆ ಕವಿತಾ ಬಸವರಾಜ್ ಬಿಜೆಪಿ ಸೇರಿರುವುದರಿಂದ ನಮ್ಮ ಶಕ್ತಿ ಇಮ್ಮಡಿಗೊಂಡಿದೆ. ಮುಂಬರುವ ದಿನಗಳಲ್ಲಿ ಪಟ್ಟಣ ಪಂಚಾಯಿತಿ ಆಡಳಿತದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಈ ಇಬ್ಬರು ಸದಸ್ಯರ ಸೇರ್ಪಡೆ ಸಹಕಾರಿಯಾಗಲಿದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ, ಸದಸ್ಯ ಪಿ. ಚನ್ನಬಸವನಗೌಡ, ಕಂಠಿ, ಪಿ. ಸುಧಾಕರಗೌಡ, ವೀರೇಶಗೌಡ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.