ಮಕ್ಕಳ ವಿಕಾಸಕ್ಕೆ ರಂಗ ಚಟುವಟಿಕೆ ಪೂರಕ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 25
ಮಕ್ಕಳ ಮನೋವಿಕಾಸಕ್ಕೆ ರಂಗ ಚಟುವಟಿಕೆ ಬಹಳ ಅನುಕೂಲವಾಗಿವೆ ಎಂದು ಮರಿಯಮ್ಮನಹಳ್ಳಿ ಖ್ಯಾತ ವೈದ್ಯ ಡಾ. ಬಿ. ಅಂಬಣ್ಣ ಹೇಳಿದರು.
ನಗರದಲ್ಲಿ ಭಾವೈಕ್ಯತಾ ವೇದಿಕೆಯ ಚಿಣ್ಣರಲೋಕ ಬಣ್ಣದಲೋಕ-2014 ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾವೈಕ್ಯತಾ ವೇದಿಕೆ ಮಕ್ಕಳ ಮನೋವಿಕಾಸಕ್ಕಾಗಿ ಪ್ರತಿವರ್ಷ ಬೇಸಿಗೆ ಶಿಬಿರ ನಡೆಸುತ್ತಿರುವುದು ಸಂತಸದ ವಿಷಯವಾಗಿದ್ದು, ಮಕ್ಕಳಿಗೆ ಕತೆ, ಕವಿತೆ, ಸಂಗೀತ ಜನಪದ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಲು ರಂಗ ಶಿಬಿರಗಳು ಅತ್ಯಂತ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಮಲಾಪುರ ಪಟ್ಟಣ ಪಂಚಾಯಿ ಮಾಜಿ ಅಧ್ಯಕ್ಷ ಹಾಗೂ ಪಕ್ಷಿಪ್ರೇಮಿ ಪಂಪಯ್ಯ ಸ್ವಾಮಿ ಮಾತನಾಡಿ, ಮಕ್ಕಳು ಟಿವಿ, ಮೊಬೈಲ್‌ನಲ್ಲಿ ಮುಳುಗಿ ಬಾಲ್ಯದ ಅನುಭವದಿಂದ ವಂಚಿತರಾಗುತ್ತಾರೆ. ಅವರನ್ನು ಅದರಿಂದ ಹೊರತಂದು, ರಂಗ ಚಟುವಟಿಕೆಯಲ್ಲಿ ತೊಡಗಿಸುವಂತೆ ಮಾಡುವುದು ನಿಜಕ್ಕೂ ಸಾಹಸದ ಕೆಲಸವಾಗಿದೆ. ಮಕ್ಕಳಿಗೆ ಪಕ್ಷಿ ಸಂಕುಲ, ಪ್ರಾಣಿ, ಮರಗಿಡಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡುವುದು ಕೂಡಾ ಪರಿಸರದ ಕೆಲಸವಾಗಿದೆ ಎಂದು ಹೇಳಿದರು. ಭಾವೈಕ್ಯತಾ ವೇದಿಕೆಯ ಸಂಚಾಲಕ ಪಿ. ಅಬ್ದುಲ್ ಶಿಬಿರದ ಬಗ್ಗೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕಲಾವಿದೆ ಪಿ. ಸಹನಾ ನಿರೂಪಿಸಿದರು. ಮಕ್ಕಳ ಬೇಸಿಗೆ ಶಿಬಿರ ಮೇ 10ರ ವರೆಗೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

