ಮಾಹಿತಿ ಹಕ್ಕು ಕಾಯ್ದೆ ಮಹತ್ವದ್ದು: ಹನುಮಂತರಾವ್
ಕೊಪ್ಪಳ: ಭಾರತದಲ್ಲಿರುವ ಹಲವಾರು ಕಾನೂನುಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಮಹತ್ತರ ಕಾಯ್ದೆಯಾಗಿದೆ. ನಾಗರಿಕರಿಗೆ ಸರ್ಕಾರದ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯುವ ಹಕ್ಕು ಇರುತ್ತದೆ ಎಂದು ನ್ಯಾಯವಾದಿ ಹನುಮಂತರಾವ್ ಹೇಳಿದರು. ಅವರು ಇಲ್ಲಿನ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರೀಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ 2013-14ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಮಾಹಿತಿ ಹಕ್ಕು ಅಧಿನಿಯಮದ ಕುರಿತು ಮಾತನಾಡಿದರು.ಮಾಹಿತಿ ಹಕ್ಕು ಕಾಯ್ದೆ ಜಾರಿ ನಂತರ ಹಲವು ಅವ್ಯವಹಾರಗಳು ಬೆಳಕಿಗೆ ಬಂದಿವೆ. ಈ ಕಾಯ್ದೆಯನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಡಾ.ಜೆ.ಎಸ್. ಪಾಟೀಲ್ ಅಧ್ಯಕ್ಷತೆ ವಹಿಸಿ, ಮಾಹಿತಿ ಹಕ್ಕು ಕಾಯ್ದೆ ನಾಗರಿಕ ಕಾಯ್ದೆಗಳಲ್ಲಿಯೇ ಪರಿಣಾಮಕಾರಿ ಕಾಯ್ದೆಯಾಗಿದೆ ಎಂದರು. ಪ್ರೊ. ಶರಣಬಸಪ್ಪ ಉಪಸ್ಥಿತರಿದ್ಧರು.
ಮಕ್ಕಳ ಹಲ್ಲಿನತ್ತ ಗಮನ
ಅಗತ್ಯ: ಡಾ. ಪೂರ್ಣಿಮಾ
ಬಳ್ಳಾರಿ: ಮಕ್ಕಳು ಆರೋಗ್ಯವಂತರಾಗಬೇಕಾದರೆ ಹಲ್ಲಿನ ಕುರಿತು ಪೋಷಕರು ಹೆಚ್ಚಿನ ಗಮನ ಕೊಡಬೇಕು. ನಿತ್ಯ ಬೆಳಗ್ಗೆ, ರಾತ್ರಿ ಹಲ್ಲುಗಳ ಸ್ವಚ್ಛಗೊಳಿಸಬೇಕು ಎಂದು ದಂತವೈದ್ಯರಾದ ಡಾ. ಪೂರ್ಣಿಮಾ ತಿಳಿಸಿದ್ದಾರೆ. ಸ್ನೇಹಾ ಆಫಿಸರ್ಸ್ ಲೇಡಿಸ್ ಕ್ಲಬ್ನಿಂದ ನಗರದಲ್ಲಿ ಶುಕ್ರವಾರ ನಡೆದ ಕೊಳಗೇರಿ ನಿವಾಸಿ ಮಕ್ಕಳ ದಂತ ಉಚಿತ ತಪಾಸಣೆ ಶಿಬಿರದಲ್ಲಿ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಮಾತನಾಡಿ, ಪೇಸ್ಟ್ ಹಾಗೂ ಬ್ರಷ್ ಬಳಸಿ ಹಲ್ಲುಗಳನ್ನು ಸ್ವಚ್ಛಗೊಳಿಸಿ, ಕೀಟಾಣುಗಳಿಂದ ರಕ್ಷಿಸಿಕೊಳ್ಳಬೇಕು ಎಂದರು. ದಂತ ವೈದ್ಯಕೀಯ ಪ್ರಾಚಾರ್ಯ ಡಾ. ದಿವಾಕರ್, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) ನಿರ್ದೇಶಕ ಡಾ. ಲಕ್ಷ್ಮಿನಾರಾಯಣ ರೆಡ್ಡಿ, ಕ್ಲಬ್ ಅಧ್ಯಕ್ಷೆ ಮೈತ್ರಿ ಬಿಸ್ವಾಸ್ ಮತ್ತಿತರರಿದ್ದರು. ನಗರದ ಹಲವು ಕೊಳಗೇರಿ ಪ್ರದೇಶಗಳ 100ಕ್ಕೂ ಅಧಿಕ ಮಕ್ಕಳ ದಂತ ತಪಾಸಣೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

