ಉರಿ ಬಿಸಿಲಿಗೆ ಹೈರಾಣಾದ ಭಾವಿ ಶಿಕ್ಷಕರು
ಹಗರಿಬೊಮ್ಮನಹಳ್ಳಿ: ಶಿಕ್ಷಕರ ಹುದ್ದೆ ನೇಮಕಾತಿಯ ಕನಸು ಕಾಣುತ್ತಿರುವ ಡಿಇಡಿ, ಬಿಇಡಿ ಕೋರ್ಸ್ ಮುಗಿಸಿರುವ ಭಾವಿ ಶಿಕ್ಷಕರನ್ನು ಸೋಮವಾರ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಉರಿ ಬಿಸಿಲು ಸಾಕಷ್ಟು ಹೈರಾಣು ಮಾಡಿತು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಪ್ರಸಕ್ತ ಸಾಲಿನಿಂದ ರಾಜ್ಯ ಸರ್ಕಾರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸುತ್ತಿದೆ. ಈ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿರುವ ಬಾವಿ ಶಿಕ್ಷಕರು ಪರೀಕ್ಷಾ ಶುಲ್ಕ ತುಂಬಲು ಸೋಮವಾರ ಪಟ್ಟಣದ ಮೈಸೂರು ಬ್ಯಾಂಕ್ (ಎಸ್ಬಿಎಂ)ಶಾಖೆಯ ವಿಶೇಷ ಕೌಂಟರ್ಗೆ ಬಂದಾಗ ಉದ್ದನೆಯ ಸರತಿ ಸಾಲಿತ್ತು ಅಲ್ಲದೇ ಬಿಸಿಲಿನ ತಾಪದಿಂದ ಶಿಕ್ಷಕರ ಹುದ್ದೆ ಸಹವಾಸವೇ ಬೇಡ ಎನ್ನುವಂತೆ ಮಾಡಿತು.
ಅವೈಜ್ಞಾನಿಕ ಕ್ರಮ: ಶಿಕ್ಷಕರ ಹುದ್ದೆಗಳ ನೇಮಕಾತಿ ಸಂಬಂಧ ಪ್ರಸಕ್ತ ಸಾಲಿನಿಂದ ಶಿಕ್ಷಕರ ಆರ್ಹತಾ ಪರೀಕ್ಷೆ (ಟಿಇಟಿ) ಕ್ರಮ ಜಾರಿಗೆ ತಂದಿರುವುದು ಅತ್ಯಂತ ಅವೈಜ್ಞಾನಿಕ ಕ್ರಮ. ಅದರಲ್ಲೂ ಸಾಮಾನ್ಯರು ಶೇ. 60 ಹಾಗೂ ಎಸ್ಸಿ, ಎಸ್ಟಿ, ಹಿಂ. ವರ್ಗ-1 ಇವರಿಗೆ ಶೇ. 55 ಅಂಕ ಗಳಿಕೆ ನಿಗದಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮುಖ್ಯವಾಗಿ ಈ ಕ್ರಮದಿಂದ ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಡಿಇಡಿ, ಬಿಇಡಿ ಕೋರ್ಸ್ ಪೂರ್ಣಗೊಳಿಸಿರುವ ನಿರುದ್ಯೋಗಿ ಶಿಕ್ಷಕ ಪದವೀಧರರಿಗೆ ಸಾಕಷ್ಟು ಅನ್ಯಾಯವಾಗಲಿದೆ. ಇಂದು ಸಾಕಷ್ಟು ಹೋರಾಟದ ನಂತರ ಕೇಂದ್ರ ಸರ್ಕಾರ 371ನೇ ಕಾಲಂ ಜಾರಿಗೊಳಿಸಿದೆ. ಆದರೆ, ರಾಜ್ಯ ಸರ್ಕಾರ ಈಗ ಶಿಕ್ಷಕರ ಹುದ್ದೆ ಭರ್ತಿ ಹೆಸರಿನಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ಎಂಬ ಕಂದಕ ಸೃಷ್ಟಿಸಿರುವುದು ಹೈ-ಕ ಪ್ರಾಂತ್ಯದ ನಿರುದ್ಯೋಗಿ ಶಿಕ್ಷಕ ಪದವೀಧರರನ್ನು ಉದ್ಯೋಗದಿಂದ ವಂಚಿಸುವಂತೆ ಮಾಡುವ ಬಹುದೊಡ್ಡ ಹುನ್ನಾರವಾಗಿದೆ.
ಕೂಡಲೆ ಹೈ-ಕ ಪ್ರಾಂತ್ಯದ ಅಭ್ಯರ್ಥಿಗಳಿಗೆ ಟಿಇಟಿ ಪರೀಕ್ಷೆಯ ಗರಿಷ್ಠ ಅಂಕ ಮೀತಿ ಸಡಿಲಿಕೆ ಮಾಡಿ, ಈ ಭಾಗದ ನಿರುದ್ಯೋಗಿಗಳಿಗೆ 371ನೇ ಜೆ ಕಲಂ ಸೌಲಭ್ಯ ನ್ಯಾಯಯುತವಾಗಿ ಸಿಗುವಂತೆ ಮಾಡಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ನಿರುದ್ಯೋಗಿ ಶಿಕ್ಷಕ ಪದವೀಧರರ ಸಂಘದ ಸಂಚಾಲಕ ಬಾರಿಕರ ಗಂಗಾಧರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

