ಏಕಲ್ ವಿದ್ಯಾಲಯದ ಬಾಲಕರಿಗೆ ಪ್ರತಿಭಾನ್ವೇಷಣ ಸ್ಪರ್ಧೆ
ಗಂಗಾವತಿ: ಗ್ರಾಮೀಣ ಭಾಗದ ಹಿಂದುಳಿದ ಬಾಲಕರಿಗೆ ಸಂಸ್ಕಾರ ನೀಡುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಏಕಲ್ ವಿದ್ಯಾಲಯ ಅಭಿಯಾನ ಜಿಲ್ಲೆಯ ವಿವಿಧ ಏಕಲ ವಿದ್ಯಾಲಯದ ಬಾಲಕರಿಗೆ ವಿವಿಧ ವೇಷಭೂಷಣ ಸೇರಿದಂತೆ ಪ್ರತಿಭಾನ್ವೇಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ನಗರದ ಹೊಸಳ್ಳಿ ರಸ್ತೆಯ ವಿವೇಕ ಭಾರತಿ ಶಾಲೆಯಲ್ಲಿ 2013-14ನೇ ಸಾಲಿನ ಅಂಚಲ ಸಂಗಮ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಗಂಗಾವತಿ ಅಂಚಲ ವ್ಯಾಪ್ತಿಗೆ ಬರುವ ಎಲ್ಲ ಏಕಲ್ ಶಾಲೆಯ ಸುಮಾರು 120 ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಆಕರ್ಷಿತರಾಗಿದ್ದರು. ಗ್ರಾಮೀಣ ಪ್ರದೇಶದ ಕಟ್ಟಕಡೆಯ ಮಕ್ಕಳು ಉತ್ತಮ ಸಂಸ್ಕಾರ ಹೊಂದಿ, ಈ ದೇಶದ ಪ್ರಮುಖ ವಾಹಿನಿಗೆ ಬರುವುದು ಮತ್ತು ಉತ್ತಮ ನಾಗರಿಕನಾಗಿ ಜೀವನ ನಿರ್ವಹಿಸುವಂತಹ ಕೌಶಲ್ಯ ಬೆಳೆಸುವುದು ಈ ಏಕಲ್ ವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದೆ. 120ಕ್ಕೂ ಅಧಿಕ ಮಕ್ಕಳಿಗೆ ಪ್ರಾರ್ಥನೆ, ಹನುಮಾನ ಚಾಲೀಸ್, ದೇಶಭಕ್ತಿಗೀತೆ, ಯೋಗಾಸನ, ಸೂರ್ಯನಮಸ್ಕಾರ, ಭಾಷಣ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಏಕಲ್ ವಿದ್ಯಾಲಯದ ಅಧ್ಯಕ್ಷ ನಾಗರಾಜ ಶೆಟ್ಟಿ ಡಿ., ಸಂಚಾಲಕ ದುರ್ಗಾದಾಸ ಭಂಡಾರಕರ್, ಸಂಸ್ಕಾರ ಭಾರತಿ ಸಂಸ್ಥೆಯ ರಾಜ್ಯ ಸಂಚಾಲಕ ಚಕ್ರವರ್ತಿ ತಿರುಮುಗನ್, ಡಿ.ಜಿ. ಮಠದ, ಸುಮತಿ ದುರ್ಗಾದಾಸ್, ದೊಡ್ಡಬಸಮ್ಮ ಮತ್ತಿತರು ಉಪಸ್ಥಿತರಿದ್ದರು.
--
ಬಾಕ್ಸಿಂಗ್: ಹರಿಯಾಣ ಬಾಲಕಿಯರು ಮೇಲುಗೈ
ಬಳ್ಳಾರಿ: ಪೈಕಾ ಕ್ರೀಡಾಕೂಟದ ಬಾಕ್ಸಿಂಗ್‌ನ ಬಾಲಕಿಯರ ಫೈನಲ್ ಪಂದ್ಯದ ವಿವಿಧ ವಿಭಾಗಗಳಲ್ಲಿ 7 ಪದಕಗಳನ್ನು ತನ್ನದಾಗಿಸಿಕೊಂಡು ಹರಿಯಾಣ ತಂಡ ಮೇಲುಗೈ ಸಾಧಿಸಿದೆ. 46 ಕೆಜಿ ವಿಭಾಗದಲ್ಲಿ ಹರಿಯಾಣದ ಜ್ಯೋತಿ ಪಂಜಾಬಿನ ಇಂದರ್‌ಜಿತ್ ಕೌರ್ ಅವರನ್ನು ಮಣಿಸಿದ್ದಾರೆ. 48 ಕೆಜಿ ವಿಭಾಗದಲ್ಲಿ ಹರಿಯಾಣದ ದರ್ಶನಾಗೆ ಹಿ.ಪ್ರದೇಶದ ಕರಿಷ್ಮಾ ವಿರುದ್ಧ ಜಯ, 50 ಕೆಜಿ ವಿಭಾಗದಲ್ಲಿ ಉತ್ತರಾಖಂಡದ ದೀಪಿಕಾಗೆ ಹರಿಯಾಣದ ಅಂಜು ವಿರುದ್ಧ ಮೇಲುಗೈ, 52 ಕೆಜಿ ವಿಭಾಗದಲ್ಲಿ ಹರಿಯಾಣದ ಸೋನು ತ.ನಾಡಿನ ಗಾಯತ್ರಿ ಮಣಿಸಿದರು. 54 ಕೆಜಿ ವಿಭಾಗದಲ್ಲಿ ಹರಿಯಾಣದ ಬಿಂದುಗೆ ಉತ್ತರಾಖಂಡದ ಹೇಮಾಧಾಮಿ ವಿರುದ್ಧ ಗೆಲುವು, 57 ಕೆಜಿ ವಿಭಾಗದಲ್ಲಿ ಹರಿಯಾಣದ ಭಾರತಿ ಉತ್ತರಾಖಂಡದ ಕವಿತಾ ವಿರುದ್ಧ ಗೆದ್ದಿದ್ದಾರೆ. 63 ಕೆಜಿ ವಿಭಾಗದಲ್ಲಿ ಹರಿಯಾಣದ ರೀನುಗೆ ಪಂಜಾಬಿನ ನರಿಂದರ್ ಕೌರ್ ವಿರುದ್ಧ ಜಯ, 66 ಕೆಜಿ ವಿಭಾಗದಲ್ಲಿ ಪಂಜಾಬಿನ ಕಿರಣ್‌ವೀರ್ ಕೌರ್‌ಗೆ ಆಂಧ್ರದ ಅಖಿಲಾ ರೆಡ್ಡಿ ವಿರುದ್ಧ ಜಯ, 70 ಕೆಜಿ ವಿಭಾಗದಲ್ಲಿ ಪಂಜಾಬಿನ ಶ್ರೀಜಾ ಠಾಕೂರ್ ಆಂಧ್ರದ ಲೋಹಿತಾರನ್ನು ಸೋಲಿಸಿದ್ದಾರೆ. 75 ಕೆಜಿ ವಿಭಾಗದಲ್ಲಿ ಆಂಧ್ರದ ನಿಹಾರಿಕಾಗೆ ಪಂಜಾಬಿನ ರೂಪಿಂದರ್ ಕೌರ್ ವಿರುದ್ಧ ಗೆಲುವು, 80 ಕೆಜಿ ವಿಭಾಗದಲ್ಲಿ ಹರಿಯಾಣದ ಪ್ರೀತಿಗೆ ಉತ್ತರಾಖಂಡದ ಕಲ್ಪನಾ ವಿರುದ್ಧ ಜಯ, 80 ಕೆಜಿ ವಿಭಾಗದಲ್ಲಿ ಆಂಧ್ರದ ನಾಗನಿಕಾಗೆ ಹರಿಯಾಣದ ಸಾಕ್ಷಿ ವಿರುದ್ಧ ಗೆಲುವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

