ಬಳ್ಳಾರಿ

ಎಸ್‌ಡಿಎಂಸಿ ಸಮಿತಿಗೆ ಹೈಕೋರ್ಟ್ ತಡೆ

Published On :

ಕೊಟ್ಟೂರು: ಸಮೀಪದ ಕಂದಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಸಮಿತಿಗೆ ಅಧ್ಯಕ್ಷರಾಗಿ ನಿಂಬಳಗೇರಿ ಕೊಟ್ರಪ್ಪ ಮತ್ತು 8 ಸದಸ್ಯರನ್ನಾಗಿಸಿ ಕೂಡ್ಲಿಗಿ ಬಿಇಒ ಅನುಮೋದನೆ ನೀಡಿರುವುದಕ್ಕೆ ಧಾರವಾಡದ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕಂದಗಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರನ್ನಾಗಿ ಜೆ. ರಾಜಪ್ಪ ಎಂಬವರನ್ನು ಗ್ರಾಮದ ಫೋಷಕರ ಸಭೆ ಸರ್ವಾನುಮತದಿಂದ ಈ ಹಿಂದೆ ಆಯ್ಕೆ ಮಾಡಿತ್ತು.
ಇದನ್ನು ರದ್ದುಗೊಳಿಸಿ ನಿಂಬಳಗೇರಿ ಕೊಟ್ರಪ್ಪ ಅಧ್ಯಕ್ಷರಾಗಿ, ಸದಸ್ಯರನ್ನಾಗಿ ಎಸ್.ಪಿ. ವೆಂಕಟೇಶ ಶೆಟ್ಟಿ, ಜಿ. ರತ್ನಮ್ಮ, ದೇವರಕೊಳ್ಳದ ಮಂಜಣ್ಣ, ಬಾರಿಕರ ಚನ್ನಬಸಪ್ಪ, ಬಾರಿಕರ ಗೌರಮ್ಮ, ಎಂ. ಕೊಟ್ರಗೌಡ, ಎಚ್.ಕೆ. ಕೊಟ್ರಮ್ಮ, ದುರುಗಪ್ಪ ಎಂಬವರನ್ನು ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಶಿಫಾರಸು ಮಾಡಿ ನೂತನ ಸಮಿತಿ ರಚಿಸುವಂತೆ ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಪತ್ರ ರವಾನಿಸಿದ್ದರು.
ಶಾಸಕರ ಶಿಫಾರಸಿನಂತೆ ಬಿಇಒ, ನಿಂಬಳಗೇರಿ ಕೊಟ್ರಪ್ಪ ನೇತೃತ್ವದ ಎಸ್‌ಡಿಎಂಸಿ ಸಮಿತಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಈ ಹಿಂದೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಜೆ. ರಾಜಪ್ಪ ಜನವರಿ 18ರಂದು ಧಾರವಾಡದ  ಹೈಕೋರ್ಟ್ ಪೀಠದ ಮೊರೆ ಹೋಗಿ ತಡೆ ನೀಡುವಂತೆ ಕೋರಿದ್ದರು. ರಾಜಪ್ಪನವರ ಮನವಿ ಪುರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಶಾಸಕರ ಶಿಫಾರಸಿನ ಸಮಿತಿ ಆಯ್ಕೆಗೆ ತಡೆ ನೀಡಿ ಜನವರಿ 28ರಂದು ಆದೇಶ ಹೊರಡಿಸಿದ್ದಾರೆ ಎಂದು ಹೈಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್ ಕೆ. ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.