ವಿವಿಧ ಬೇಡಿಕೆ: ಅಂಚೆ ಸೇವಕರ ಪ್ರತಿಭಟನೆ
ಕೊಟ್ಟೂರು: ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮೀಣ ಅಂಚೆ ಸೇವಕರು ಫೆ. 18ರ ಮಂಗಳವಾರದಿಂದ ದೇಶಾದ್ಯಂತ ಅನಿರ್ದಿಷ್ಟ ಮುಷ್ಕರ ನಡೆಸಿರುವಂತೆಯೆ ಇಲ್ಲಿನ ಅಂಚೆ ಕಚೇರಿ ಅಂಚೆ ಸೇವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಶೇ. 50ರಷ್ಟು ತುಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು, 7ನೇ ವೇತನ ಸಮಿತಿಯ ಮಧ್ಯಂತರ ಪರಿಹಾರವನ್ನು ಘೋಷಿಸುವ ಸಂದರ್ಭದಲ್ಲಿ ಗ್ರಾಮೀಣ ಅಂಚೆ ಸೇವಕರನ್ನು ಪೌರ ನೌಕರರನ್ನಾಗಿ ಪರಿಗಣಿಸಬೇಕು, 7ನೇ ವೇತನ ಸಮಿತಿಯ ಶಿಫಾರಸನ್ನು ಕೂಡಲೆ ಜಾರಿಗೊಳಿಸಬೇಕು, ಅನುಕಂಪದ ಆಧಾರದ ಮೇಲೆ ನೌಕರಿ ಸೌಲಭ್ಯವನ್ನು ಗ್ರಾಮೀಣ ಅಂಚೆ ಸೇವಕರಿಗೆ ನೀಡಬೇಕು. ಪೋಸ್ಟ್ಮನ್ ಮತ್ತು ಎಂಟಿಎಸ್ಗಳ ಶೇ. 25ರಷ್ಟು ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಕೊಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಶೇ. 25ರಷ್ಟು ಜಿಡಿಎಸ್, ನೌಕರರನ್ನು ಆಯ್ಕೆ ಮಾಡಿಕೊಳ್ಳಬೇಕು. 2006ರಿಂದ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ, ಕಾಂಟಿಜಂಟಿ, ಪಾರ್ಟ್ ಟೈಮ್ ನೌಕರರಿಗೆ ಡಿಎ ನೀಡಬೇಕೆಂದು ಒತ್ತಾಯಿಸುವ ಆರು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಅಂಚೆ ಸೇವಕರ ಸಂಘದ ಹೊಸಪೇಟೆ ವಿಭಾಗದ ಕಾರ್ಯದರ್ಶಿ ವಿ. ಬನ್ನೇಶ್, ಅಂಚೆ ಪಾಲಕರಾದ ವಿ.ಎಂ. ವೀರಯ್ಯ, ನೌಕರರ ಸಂಘಧ ವಿಭಾಗದ ಕಾರ್ಯದರ್ಶಿ ವಿ. ತಿಂದಪ್ಪ, ಕೆ. ಕೊಟ್ರೇಶಪ್ಪ, ಸಹಾಯಕರಾದ ನಶೆಪುಡಿ ಮಲ್ಲಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

