ಕೊಟ್ಟೂರು-ಹರಿಹರ ರೈಲು ಮಾರ್ಗ ಪರಿಶೀಲನೆ
ಕೊಟ್ಟೂರು: ಕೊಟ್ಟೂರು-ಹರಿಹರ ರೈಲು ಮಾರ್ಗದ ಅಂತಿಮ ಪರಿಶೀಲನೆ ಕಾರ್ಯ ಕೈಗೊಳ್ಳಲು ರೇಲ್ವೆ ಇಲಾಖೆಯ ಉನ್ನತಾಧಿಕಾರಿಗಳ ಸಮಿತಿ (ಸಿಆರ್ಎಸ್) ತಂಡ ಫೆ. 20ರಂದು ಕೊಟ್ಟೂರಿಗೆ ಆಗಮಿಸಲಿದೆ. ಇಲ್ಲಿನ ರೇಲ್ವೆ ನಿಲ್ದಾಣಕ್ಕೆ ಆಗಮಿಸುವ ಈ ತಂಡದೊಂದಿಗೆ ಟ್ರ್ಯಾಲಿ ರೈಲು ಮತ್ತು ಸ್ಪೀಡ್ ರೈಲು ಸಹ ಆಗಮಿಸಲಿದೆ.
ಟ್ರ್ಯಾಲಿ ರೈಲು ಮೊದಲು ಹರಪ್ಪನಹಳ್ಳಿಯಿಂದ ಆಗಮಿಸಲಿದ್ದು, ಮಾರ್ಗದುದ್ದಕ್ಕೂ ನಿರ್ಮಿಸಲಾದ ಸೇತುವೆ, ಹಳಿಗಳ ಸಮತಟ್ಟುಗಳನ್ನು ಪರಿಶೀಲಿಸಲಿದೆ. ಅನಂತರ 120 ಕಿ.ಮೀ. ವೇಗ ಸಂಚರಿಸುವ ಸ್ಪೀಡ್ ರೈಲು ಪ್ರಯೋಗ ಕೂಡ ನಡೆಯಲಿದೆ. ಈ ರೈಲಿನೊಂದಿಗೆ 50 ಕ್ಕೂ ಹೆಚ್ಚು ರೇಲ್ವೆ ಉನ್ನತಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಆಗಮಿಸಲಿದ್ದಾರೆ. ಸ್ಪೀಡ್ ರೈಲು ಹರಪ್ಪನಹಳ್ಳಿಯಿಂದ ಕೊಟ್ಟೂರಿಗೆ ತನಗೆ ನಿಗದಿಗೊಳಿಸಲಾದ ವೇಗದೊಂದಿಗೆ ಸಂಚರಿಸಿ ಮಾರ್ಗದುದ್ದಕ್ಕೂ ಅಳವಡಿಸಿರುವ ಹಳಿ, ಇತರ ಸಾಮಗ್ರಿಗಳ ಸಾಮರ್ಥ್ಯವನ್ನು ಪರಿಶೀಲಿಸುತ್ತದೆ. ನಂತರವೇ ಕೊಟ್ಟೂರು-ಹರಿಹರ ರೈಲು ಮಾರ್ಗದ ಓಡಾಟದ ಖಚಿತ ನಿರ್ಧಾರವನ್ನು ಸಿಆರ್ಎಸ್ ತಂಡ ಪ್ರಕಟಿಸಲಿದೆ ಎಂದು “OÚ«ÚsÚ®ÚúڒOæQ ಬುಧವಾರ ಸಂಜೆ ಮಾಹಿತಿ ಲಭ್ಯವಾಗಿದೆ.
ಉದ್ಘಾಟನೆ: ಕೊಟ್ಟೂರು-ಹರಿಹರ ರೈಲು ಓಡಾಟದ ದಿನಾಂಕ ಘೋಷಣೆಯ ದಿನ ಸನಿಹವಾಗುತ್ತಿದ್ದಂತೆ ಪೂರ್ವಭಾವಿ ತಯಾರಿ ಭರದಿಂದ ಸಾಗಿದೆ. ಕೊಟ್ಟೂರು ರೈಲು ನಿಲ್ದಾಣಕ್ಕೆ ಅಗತ್ಯವಾಗಿ ಬೇಕಿರುವ ವಿದ್ಯುತ್ ಸಂಪರ್ಕ ಕಲ್ಪಿಸುವ 63 ಕೆವಿ ವಿದ್ಯುತ್ ಪರಿವರ್ತಕದ ಕಾರ್ಯ ಆರಂಭಗೊಳಿಸುವ ಸರಳ ಪೂಜಾ ಸಮಾರಂಭ ಬುಧವಾರ ಸಂಜೆ ಇಲ್ಲಿನ ರೈಲು ನಿಲ್ದಾಣದಲ್ಲಿ ನಡೆಯಿತು. ಕೊಟ್ಟೂರು ರೈಲು ನಿಲ್ದಾಣ, ರೇಲ್ವೆ ಸಿಬ್ಬಂದಿ ವಸತಿಗೃಹಗಳು, ಕಾರ್ಯಾಲಯ ಮತ್ತು ನೀರು ಸರಬರಾಜು ಮಾಡಲು ಪ್ರತ್ಯೇಕ ವಿದ್ಯುತ್ ಪರಿವರ್ತಕವನ್ನು ರು. 4 ಲಕ್ಷ ವೆಚ್ಚದಲ್ಲಿ ರೇಲ್ವೆ ಇಲಾಖೆ ಅಳವಡಿಸಿದೆ. ಈ ವಿದ್ಯುತ್ ಪರಿವರ್ತಕಕ್ಕೆ ಸಂಪರ್ಕವನ್ನು ಬುಧವಾರ ಕಲ್ಪಿಸಲಾಯಿತು. ರೇಲ್ವೆ ನಿಲ್ದಾಣಕ್ಕೆ 32 ಕೆ.ವಿ. ವಿದ್ಯುತ್ ಲೋಡ್ ಬೇಡಿಕೆ ಇರುವುದನ್ನು ಮನಗಂಡು ಜೆಸ್ಕಾಂ ಮತ್ತು ರೇಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ವಿದ್ಯುತ್ ವಿಭಾಗ ಇದಕ್ಕೆಂದೇ ಪ್ರತ್ಯೇಕ ವಿದ್ಯುತ್ ಸರಬರಾಜು ಕಲ್ಪಿಸಲು ಪರಿವರ್ತಕವನ್ನು ಅಳವಡಿಸಿದೆ.
ಬುಧವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ರೇಲ್ವೆ ಇಲಾಖೆಯ ವಿದ್ಯುತ್ ವಿಭಾಗದ ಎಇಇ ನಾಗರಾಜ್, ಎಇ ಶ್ರೀಧರ್, ಗುತ್ತಿಗೆದಾರ ಬಸವರಾಜ್, ಜೆಸ್ಕಾಂನ ಎಇಇ ಉಮಾಮಹೇಶ್ವರ, ಜೆಇ ಶರಣಪ್ಪ, ಕೊಟ್ಟೂರು ಕಾರ್ಯಾಲಯದ ಶಿವಪ್ಪ, ಕೊಟ್ರೇಶ್ ಪಾಲ್ಗೊಂಡು, ವಿದ್ಯುತ್ ಸಂಪರ್ಕಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

