ಉತ್ತಮ ಗುರಿ ಸಾಧನೆಗೆ ಮುಂದಾಗಿ: ಭೀಮಾನಾಯ್ಕ
ಹೊಸಪೇಟೆ: ಯುವಕರು ದೇಶದ ಭವಿಷ್ಯದ ನಾಯಕರಾಗಿದ್ದು, ಉತ್ತಮ ಗುರಿ ಸಾಧನೆಗಾಗಿ ಯುವಕರು ಮುಂದಾಗಬೇಕೆಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಸಂಜೆ ನಡೆದ ತಾಲೂಕು ಮಟ್ಟದ ಯುವಜನ ಮೇಳ- 2014ನ್ನು ಉದ್ಘಾಟಿಸಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಹೆಚ್ಚಾಗಿ ಗುಟ್ಕಾ ಹಾಗೂ ಮದ್ಯಪಾನ ಸೇವನೆಯಲ್ಲಿ ತೊಡಗಿಕೊಂಡು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಯುವಕರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಯುಜನೋತ್ಸವದಂತಹ ಕಾರ್ಯಕ್ರಮದ ವೇದಿಕೆಗಳು ಸಹಕಾರಿಯಾಗಿವೆ. ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕೇವಲ ಇಂತಹ ವೇದಿಕೆಗಳಿಗೆ ಸೀಮಿತವಾಗದೆ, ಪ್ರತಿ ಊರಿನಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವಂತಾಗಬೇಕು. ಪ್ರತಿ ಹಬ್ಬ- ಹರಿದಿನಗಳಲ್ಲಿ ಹಾಗೂ ಜಾತ್ರಾ ಮಹೋತ್ಸವ ದಿನದಂದು ತಮ್ಮೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಂಸ್ಕೃತಿ ನಿರ್ಮಿಸಬೇಕಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಂತಹವರು ಇತರೆ ದುಶ್ಚಟಗಳಿಗೆ ದಾಸರಾಗದೆ, ಉತ್ತಮ ಸಂಸ್ಕಾರ ಹೊಂದಿರುತ್ತಾರೆ ಎಂದರು. ಸ್ಥಳೀಯ ಗ್ರಾಪಂ ಅಧ್ಯಕ್ಷ ಎಸ್. ಸುಬಾನ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಯು. ಸೋಮಪ್ಪ, ರಂಗಕರ್ಮಿ ಮಾ.ಬ. ಸೋಮಣ್ಣ, ಹಿರಿಯ ರಂಗ ಕಲಾವಿದೆ ಡಾ.ಕೆ. ನಾಗರತ್ನಮ್ಮ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಪೂಜಾರ್, ಮುಖಂಡ ಎಚ್. ಪಾಂಡುರಂಗಶೆಟ್ಟಿ, ಬಾಣದ ಯಮನೂರ, ಅಂಜಿನಪ್ಪ, ವೆಂಕಟೇಶ್, ಭಾರತಿ ಬಾಯಿ, ಬೆಂಜಮನ್ ರತ್ನಾಕರ್, ಮಾತಾ ಮಂಜಮ್ಮ ಜೋಗತಿ, ಪೂಜಾರ್ ಬಸಪ್ಪ ಭಾಗವಹಿಸಿದ್ದರು. ಮಾ.ಬ. ನರಸಪ್ಪಾಚಾರ್ಯ ಪ್ರಾರ್ಥಿಸಿದರು. ಮಧುಸೂದನ್ ಸ್ವಾಗತಿಸಿದರು. ರಾಜು ಬಾವಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಂ.ಎಸ್. ಮೃತ್ಯುಂಜಯ ವಂದಿಸಿದರು. ಜಿ.ಎಂ. ಕೊಟ್ರೇಶ್ ನಿರೂಪಿಸಿದರು. ನಂತರ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

