ಬೇಡಿಕೆ ಈಡೇರಿಕೆಗೆ ದೇವದಾಸಿಯರ ಆಗ್ರಹ
ಕುರುಗೋಡು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿಯರ ವಿಮೋಚನಾ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದ ಗೌರವಾಧ್ಯಕ್ಷ ಎಚ್.ಎಂ. ವಿಶ್ವನಾಥಸ್ವಾಮಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ದೌರ್ಜನ್ಯದ ದೇವದಾಸಿ ಪದ್ಧತಿಗೆ ಮುಗ್ಧ ಹಸುಳೆಗಳು ಹಾಗೂ ಬಾಲಕಿಯರು ಬಲಿಯಾಗಿ ದಲಿತ ಕುಟುಂಬಗಳು ಬದುಕು ಸಾಗಿಸುತ್ತಿವೆ. ಇಂತಹ ಸಂದರ್ಭದಲ್ಲಿ ಇತ್ತೀಚಿಗೆ ಮಂಡಿಸಿದ 2014-15ನೇ ಸಾಲಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ದೇವದಾಸಿಯರ ಕುಟುಂಬಗಳಿಗೆ ಯಾವುದೆ ರೀತಿಯ ಹಣಕಾಸು ನೆರವು ನೀಡದೆ ಇರುವುದು ದಲಿತ ವಿರೋಧಿ ಬಜೆಟ್ ಆಗಿದೆ. ಆದ್ದರಿಂದ ಈ ಬಜೆಟ್ನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಎಂದರು. ನಿರಂತರವಾಗಿ ದೇವದಾಸಿಯರು ಸ್ವಾವಲಂಬನೆ ಬದುಕು ಸಾಗಿಸಲು ತಿಂಗಳಿಗೆ ರು. 1500 ಸಹಾಯಧನ ಹಾಗೂ ಪ್ರತಿ ಕುಟುಂಬಕ್ಕೆ 2 ಎಕರೆ ಭೂಮಿ ಕೊಡಬೇಕು. ದೇವದಾಸಿಯರ 45 ವರ್ಷ ವಯಸ್ಸಿನ ಮಿತಿಯನ್ನು ಕೈ ಬಿಡಬೇಕು. ಎಲ್ಲ ಸರ್ವೇ ಮಾಡಿದ ಪಟ್ಟಿಯಲ್ಲಿರುವ ಎಲ್ಲ ದೇವದಾಸಿಯರಿಗೆ ಪೆನ್ಷನ್ ನೀಡಬೇಕು. ಬಾಕಿ ಇರುವ 8 ತಿಂಗಳ ಸಹಾಯಧನ ಕೂಡಲೆ ಬಿಡುಗಡೆ ಮಾಡಿ ದೇವದಾಸಿ ಪುನರ್ವಸತಿ ಇಲಾಖೆಯನ್ನು ಬಲಪಡಿಸಬೇಕು. ಎಲ್ಲ ದೇವದಾಸಿರಿಗೆ ಯಾವುದೆ ತಾರತಮ್ಯವಿಲ್ಲದೆ ಮನೆ, ಸಾಲ ಸೌಲಭ್ಯ, ಅಂತ್ಯೋದಯ ಕಾರ್ಡ್ ಕೊಡಬೇಕು ಎಂದು ಆಗ್ರಹಿಸಿದರು. ದೇವದಾಸಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಹಾಗೂ ಸರ್ಕಾರದ ಸೇವಾ ವಲಯದ ಉದ್ಯೋಗದಲ್ಲಿ ತೊಡಗಿಕೊಳ್ಳಲು ಬೇಕಾದ ತರಬೇತಿಯನ್ನು ಎಲ್ಲ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ಪ್ರತಿವರ್ಷ ಮಾಸಿಕ ರು. 500 ಸಹಾಯಧನ ನೀಡಬೇಕು. ದಲಿತ ವೃದ್ಧಾಶ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬೇಕು. ದೇವದಾಸಿ ಅಭಿವೃದ್ಧಿ ನಿಗಮದಲ್ಲಿ ಕಾರ್ಯನಿರ್ವಹಿಸುವ ಪ್ರಾಜೆಕ್ಟ್ ಅಧಿಕಾರಿ ಮುಕ್ಕಣ್ಣನನ್ನು ಕೂಡಲೇ ವರ್ಗಾವಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತ ಮನವಿಪತ್ರವನ್ನು ಪಟ್ಟಣದ ವಿಶೇಷ ತಹಸೀಲ್ದಾರ್ ಟಿ. ಸುರೇಶ್ಬಾಬು ಮೂಲಕ ಸಿಎಂಗೆ ಸಲ್ಲಿಸಿದರು.
ಅಧ್ಯಕ್ಷೆ ಎಚ್. ಸೋಮಕ್ಕ, ಉಪಾಧ್ಯಕ್ಷೆ ಎಚ್. ಮಾಳಮ್ಮ, ಕಾರ್ಯದರ್ಶಿ ಉಡಸಮ್ಮ, ಉಪಾಧ್ಯಕ್ಷೆ ಸಂಜಿವಮ್ಮ, ಹನುಮಕ್ಕ, ಬಾಬಮ್ಮ, ಜಂಟಿ ಕಾರ್ಯದರ್ಶಿ ಹೊನ್ನೂರಮ್ಮ, ಗೆಣಿಕೆಹಾಳು ಗಂಗಮ್ಮ, ಹನುಮಕ್ಕ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

