ಬಳ್ಳಾರಿ

ಹಂಪಿ ಉತ್ಸವ 2014: ಗ್ರಾಮೀಣ ಕ್ರೀಡಾ ಸ್ಪರ್ಧೆ

Published On :

ಬಳ್ಳಾರಿ: ಹಂಪಿ ಉತ್ಸವ 2014ರ ಅಂಗವಾಗಿ ಜನವರಿ 10ರಿಂದ 12ರ ವರೆಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುವುದು. ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರನ್ನು ನಿಗದಿತ ದಿನಾಂಕದಂದು ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿಯಲ್ಲಿಯರುವ ಹಂಪಿ ಉತ್ಸವ ಶಾಖೆಯಲ್ಲಿ ನೋಂದಾಯಿಸಬೇಕೆಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಪಿ ಉತ್ಸವದಲ್ಲಿ ಈ ಬಾರಿ ಗ್ರಾಮೀಣ ಕ್ರೀಡೆ, ಔಟ್ ಬೌಚಿಡ್ ಕ್ರೀಡೆ, ಸಾಹಸ ಕ್ರೀಡೆ, ಎಕ್ಸ್-ಟ್ರೀಮ್ ಕ್ರೀಡೆಗಳಲ್ಲದೆ ಕಲಾವಿದರು ಕಂಡಂತೆ ಹಂಪಿ (ಹಂಪಿ ಬೈ ಆರ್ಟಿಸ್ಟ್), ಹಂಪಿಯ ಆಹಾರ ಪದ್ಧತಿ (ಹಂಪಿ ಬೈ ಫುಡ್)ಯಲ್ಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, 2014ರ ಜ. 10ರಿಂದ 12ರ ವರೆಗೆ ನಡೆಯಲಿರುವ ಸ್ಪರ್ಧೆಗಳ ವಿವರ, ಸ್ಪರ್ಧೆ ನಡೆಯುವ ದಿನಾಂಕ, ಸ್ಥಳ, ಮತ್ತಿತರ ವಿವರಗಳು ಇಂತಿವೆ.
ಗ್ರಾಮೀಣ ಕ್ರೀಡೆಗಳು: ಈ ಕ್ರೀಡೆಗಳನ್ನು ಕುಸ್ತಿ ಆಖಾಡದಲ್ಲಿ ಏರ್ಪಡಿಸಲಾಗಿದ್ದು, ಜ. 10ರಂದು ಮಲ್ಲಕಂಬ (ಕಂಬ (ಪುರುಷ), ಮಲ್ಲಕಂಬ (ಹಗ್ಗ(ಮಹಿಳೆ), ಕಬಡ್ಡಿ (ಪುರುಷ, ಮಹಿಳೆ), 11ರಂದು ಬಂಡಿಗಾಲಿ ಎತ್ತುವುದು, ಕಲ್ಲು ಗುಂಡೆತ್ತುವುದು, ಹಗ್ಗ ಜಗ್ಗಾಟ (ಪುರುಷ, ಮಹಿಳೆ), ಪುರುಷರಿಗಾಗಿ ಕುಸ್ತಿ (ಹಂಪಿ ಕೇಸರಿ) ಪಂದ್ಯ, ಮಹಿಳೆಯರಿಗಾಗಿ ಕುಸ್ತಿ (ಹಂಪಿ ಕಿಶೋರ) ಪಂದ್ಯ, 12ರಂದು ಪವರ್ ಲಿಫ್ಟಿಂಗ್ ಹಾಗೂ ದೇಹದಾರ್ಢ್ಯ ಸ್ಪರ್ಧೆ (ಮಿಸ್ಟರ್ ಹಂಪಿ)ಗಳು ನಡೆಯಲಿವೆ.
ಗ್ರಾಮೀಣ ಕ್ರೀಡೆಯ ಮಲ್ಲಕಂಬ, ಬಂಡಿ ಗಾಲಿ ಎತ್ತುವುದು, ಕಲ್ಲು ಗುಂಡೆತ್ತುವುದು, ಪವರ್ ಲಿಫ್ಟಿಂಗ್ ಸ್ಪರ್ಧೆಗಳು ನಿಗದಿತ ದಿನದಂದು ಬೆಳಗ್ಗೆ 9ರಿಂದ ಪ್ರಾರಂಭವಾಗಲಿದ್ದು, ಈ ಕ್ರೀಡೆಗಳಲ್ಲಿ ಭಾಗವಹಿಸುವವರು ಅಂದು ಬೆಳಗ್ಗೆ 8 ಗಂಟೆಗೆ ಹಾಜರಿರಬೇಕು. ಹಗ್ಗ ಜಗ್ಗಾಟ (ಪುರುಷ, ಮಹಿಳೆ) ಪಂದ್ಯವು ನಿಗದಿತ ದಿನದಂದು 12 ಗಂಟೆಗೆ ಪ್ರಾರಂಭವಾಗಲಿದ್ದು, ಆಸಕ್ತರು ಅಂದು ಬೆಳಗ್ಗೆ 11 ಗಂಟೆಯೊಳಗೆ ಹಾಜರಿರಬೇಕು. ಕಬಡ್ಡಿ (ಪುರುಷ, ಮಹಿಳೆ), ದೇಹದಾರ್ಢ್ಯ ಹಾಗೂ ಕುಸ್ತಿ ಪಂದ್ಯಗಳು ನಿಗದಿತ ದಿನಗಳಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು, ಈ ಕ್ರೀಡೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಬೆಳಗ್ಗೆ 11ಕ್ಕೆ ವರದಿ ಮಾಡಿಕೊಳ್ಳಬೇಕು.
ಗ್ರಾಮೀಣ ಕ್ರೀಡೆಗಳಲ್ಲಿ ಕ್ರೀಡಾವಾರು ಭಾಗವಹಿಸಲಿರುವ ಕನಿಷ್ಠ ಸ್ಪರ್ಧಾಳುಗಳ ಸಂಖ್ಯೆ, ನೋಂದಣಿ ಶುಲ್ಕ, ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿವರ ಇಂತಿದೆ. ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದವರಿಗೆ ಟ್ರೋಫಿ ನೀಡಲಾಗುವುದು. ಎಲ್ಲ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸುವ ಸ್ಪರ್ಧಾಳು (ನಿಗದಿಪಡಿಸಿರುವ ಕನಿಷ್ಠ ಸಂಖ್ಯೆಯ)ಗಳಿಗೆ  ಪ್ರಮಾಣ ಪತ್ರ ಹಾಗೂ ತಲಾ 2ರಂತೆ ಒಟ್ಟು 32 ಟ್ರೋಫಿಗಳನ್ನು ನೀಡಲಾಗುವುದು.
ಮಲ್ಲಕಂಬ ಸ್ಪರ್ಧೆಯಲ್ಲಿ ಕನಿಷ್ಠ ಸ್ಪರ್ಧಾಳುಗಳ ಸಂಖ್ಯೆ 100 ಮಂದಿ ಪುರುಷರು ಹಾಗೂ 100 ಮಂದಿ ಮಹಿಳೆಯರು ಭಾಗವಹಿಸಲಿದ್ದು, ಸ್ಪರ್ಧೆಯ ಪುರುಷ ಹಾಗೂ ಮಹಿಳಾ ವಿಜೇತರಿಗೆ ಪ್ರಥಮ ಬಹುಮಾನ ರು. 25 ಸಾವಿರ ಹಾಗೂ ದ್ವಿತೀಯ ಬಹುಮಾನ ರು. 15 ಸಾವಿರ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಾಳುಗಳು ರು. 50 ಶುಲ್ಕ ಪಾವತಿಸಬೇಕು.
ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿದ ಕನಿಷ್ಠ 200 ಪುರುಷರು ಹಾಗೂ 100 ಮಹಿಳೆಯರಿಗೆ ಪ್ರಮಾಣ ಪತ್ರ ನೀಡಲಾಗುವುದು. ಪ್ರತಿಯೊಬ್ಬರಿಗೂ ರು. 50 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಗೆದ್ದ ಪುರುಷ ತಂಡ ಹಾಗೂ ಮಹಿಳಾ ತಂಡಕ್ಕೆ ತಲಾ ರು. 50 ಸಾವಿರ ಪ್ರಥಮ ಹಾಗೂ ರು. 25 ಸಾವಿರ ದ್ವಿತೀಯ ಬಹುಮಾನ ನೀಡಲಾಗುವುದು.
ಬಂಡಿಗಾಲಿ ಎತ್ತುವುದು, ಕಲ್ಲು ಗುಂಡೆತ್ತುವುದು: ಈ ಸ್ಪರ್ಧೆಗಳಲ್ಲಿ ಕನಿಷ್ಠ 25 ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದು, ರು. 100 ಶುಲ್ಕವಿರುತ್ತದೆ. ವಿಜೇತರಿಗೆ ರು. 15 ಸಾವಿರ ಪ್ರಥಮ, ರು. 10 ಸಾವಿರ ದ್ವಿತೀಯ ಹಾಗೂ ರು. 5 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ಎರಡೂ ಸ್ಪರ್ಧೆ ವಿಜೇತರಿಗೆ ತಲಾ 25 ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.
ಪವರ್ ಲಿಫ್ಟಿಂಗ್: ಕನಿಷ್ಠ 25 ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ರು. 200 ಶುಲ್ಕವಿದ್ದು, ಪ್ರಥಮ ಸ್ಥಾನ ಗಳಿಸಿದವರಿಗೆ ರು. 20 ಸಾವಿರ, ದ್ವಿತೀಯ ರು. 15 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ರು. 7,500 ಬಹುಮಾನ ನೀಡಲಾಗುವುದು.
ಹಗ್ಗ ಜಗ್ಗಾಟ ಪುರುಷ ವಿಭಾಗದಲ್ಲಿ ಕನಿಷ್ಠ 100 ಹಾಗೂ ಮಹಿಳಾ ವಿಭಾಗದಲ್ಲಿ 50 ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು. ರು. 50ಗಳ ಶುಲ್ಕ ನಿಗದಿಪಡಿಸಲಾಗಿದೆ. ರು. 10 ಸಾವಿರ ಪ್ರಥಮ ಹಾಗೂ ರು. 5 ಸಾವಿರ ದ್ವಿತೀಯ ಬಹುಮಾನ ನೀಡಲಾಗುವುದು.
ಕುಸ್ತಿ ಪಂದ್ಯಗಳು ಪುರುಷರಿಗಾಗಿ 3 ವಿಭಾಗ (ಹಂಪಿ ಕೇಸರಿ) ಹಾಗೂ ಮಹಿಳೆಯರಿಗಾಗಿ (ಹಂಪಿ ಕಿಶೋರ) 3 ವಿಭಾಗದಲ್ಲಿ ನಡೆಯಲಿದ್ದು, ಎಲ್ಲ ವಿಭಾಗದಲ್ಲೂ ಕನಿಷ್ಠ ತಲಾ 25 ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.  ಪಂದ್ಯಾಳುಗಳು ರು. 200 ಶುಲ್ಕ ಪಾವತಿಸಬೇಕು. ಎಲ್ಲ ವಿಭಾಗದಲ್ಲೂ ಪ್ರಥಮ ರು. 25 ಸಾವಿರ ಹಾಗೂ ದ್ವಿತೀಯ ರು. 15,000 ಬಹುಮಾನ ನೀಡಲಾಗುವುದು.
ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕನಿಷ್ಠ 50 ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಿ ಪ್ರಥಮ ರು. 25,000, ದ್ವಿತೀಯ ರು. 15 ಸಾವಿರ ಹಾಗೂ ತೃತೀಯ ಬಹುಮಾನ ರು. 10 ಸಾವಿರ ನೀಡಲಾಗುವುದು.
ಹೊರಗಿನಿಂದ ಬರುವ ಸ್ಪರ್ಧಾಳುಗಳಿಗೆ ಸಾಮಾನ್ಯ ವಸತಿಯನ್ನು ಟೆಂಟ್‌ಗಳಲ್ಲಿ ಕಲ್ಪಿಸಲಾಗುವುದು. ಊಟಕ್ಕಾಗಿ ಪ್ರತ್ಯೇಕ ಹಣ ಪಾವತಿಸಬೇಕಾಗುತ್ತದೆ. ಬಾಡಿಗೆ ಆಧಾರದ ಮೇಲೆ ದಿನಕ್ಕೆ ರು. 200 ಪ್ರತಿ ಹಾಸಿಗೆ(ಬೆಡ್) ದೊರೆಯುತ್ತದೆ. ಪ್ರವಾಸಿಗರು ಮತ್ತು ಸ್ಪರ್ಧಾಳುಗಳಲ್ಲದವರಿಗೆ ಕೆಲವೆ ಕೆಲವು ಸಾಮಾನ್ಯ ಟೆಂಟ್ ವಸತಿ ಸೌಲಭ್ಯವಿರುತ್ತದೆ. ಊಟದ ವ್ಯವಸ್ಥೆ ಈ ವೆಚ್ಚದಲ್ಲಿ ಸೇರಿರುವುದಿಲ್ಲ. ಸ್ಪರ್ಧಾಳುಗಳು ಪ್ರತಿ ಕ್ರೀಡೆಗೆ ಪ್ರವೇಶ ಶುಲ್ಕ ಭರಿಸಬೇಕು. ಬಹುಮಾನಗಳನ್ನು ನುರಿತ ಸಮಿತಿ ತೀರ್ಮಾನದಂತೆ ನೀಡಲಾಗುವುದು. ಆಸಕ್ತ ಸ್ಪರ್ಧಾಳುಗಳು ತಮ್ಮ ನೋಂದಣಿಯನ್ನು ಸಹಾಯಕ ಆಯುಕ್ತರು, ಹೊಸಪೇಟೆ ಹಂಪಿ ಉತ್ಸವ ವಿಭಾಗ ಕಚೇರಿಯಲ್ಲಿ ಶುಲ್ಕ ಪಾವತಿಸಿ ನಿಗದಿತ ದಿನಾಂಕದಂದು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹಣ ಪಾವತಿಯನ್ನು ಹುಂಡಿ, ಡೆಪ್ಯುಟಿ ಕಮೀಷನರ್ ಬಳ್ಳಾರಿ ಇವರ ಹೆಸರಿನಲ್ಲಿ ಪಡೆಯತಕ್ಕದ್ದು.
ಹೆಚ್ಚಿನ ವಿವರಗಳಿಗಾಗಿ ಹಾಗೂ ಅರ್ಜಿ ನಮೂನೆ-ಷರತ್ತುಗಳನ್ನು ವೆಬ್‌ಸೈಟ್ ಢಿಢಿಢಿ.ಛಿಜಟಟಛ್ಠಣ.ಟ್ಝ್ಛಿ.್ಝಟಿ ಮತ್ತು  ಢಿಢಿಢಿ.ಛಟಠ್ಝ್ಡಡಿಡಛಢಛ.್ಛ್ಟಟ ರಲ್ಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.