ಬಳ್ಳಾರಿ

ಅಂಗವಿಕಲರಿಗೆ ಸಾಧನ, ಸಲಕರಣೆ ಒದಗಿಸಿ: ಉಸ್ಮಾನ್ ಬಾಷಾ

Published On :

ಹಗರಿಬೊಮ್ಮನಹಳ್ಳಿ: ಶಾಸಕರ ಪ್ರದೇಶಾಭಿವೃದ್ಧಿಯಲ್ಲಿ ಪ್ರತಿವರ್ಷ ರು. 10 ಲಕ್ಷದಲ್ಲಿ ಅಂಗವಿಕಲರಿಗೆ ಸಾಧನ, ಸಲಕರಣೆಗಳ ಸೌಲಭ್ಯ ಕಲ್ಪಿಸಲು ಬಳಸುವಂತೆ ಸರ್ಕಾರದ ಆದೇಶವಿದ್ದು, ಆ ಪ್ರಕಾರ ತಾಲೂಕಿನಲ್ಲಿರುವ ಅಂಗವಿಕಲರಿಗೆ ತಮ್ಮ ಅನುದಾನದಲ್ಲಿ ಸಾಧನ, ಸಲಕರಣೆಗಳ ಸೌಲಭ್ಯವನ್ನು ಕಲ್ಪಿಸುವಂತೆ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಮುಖಂಡ ಎಚ್. ಉಸ್ಮಾನ್ ಬಾಷಾ ಅವರು ಸ್ಥಳೀಯ ಶಾಸಕರನ್ನು ಆಗ್ರಹಿಸಿದ್ದಾರೆ.
ಪಟ್ಟಣದ ಶ್ರೀಹಗರಿ ಆಂಜನೇಯಸ್ವಾಮಿ ಬಯಲು ರಂಗಮಂದಿರದಲ್ಲಿ ಅಂಗವಿಕಲರ ಒಕ್ಕೂಟ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿ, ಸಾಧನ, ಸಲಕರಣೆಗಳನ್ನು ಪಡೆದು ಕೊಳ್ಳಲು ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ. ಆದರೆ ನಮ್ಮ ತಾಲೂಕಿನಲ್ಲಿ ವೈದ್ಯಕೀಯ ತಪಾಸಣೆ ವ್ಯವಸ್ಥೆ ಇಲ್ಲ.
ಹೀಗಾಗಿ ಬಹುತೇಕ ಅಂಗವಿಕಲರು ಸರ್ಕಾರದ ಸೌಲಭ್ಯದಿಂದ ವಂಚಿರಾಗುವಂತಾಗಿದ್ದು, ಕೂಡಲೆ ವೈದ್ಯಕೀಯ ತಪಾಸಣೆ ಹಾಗೂ ಸಾಧನ, ಸಲಕರಣೆಗಳ ವಿತರಣಾ ಶಿಬಿರಗಳನ್ನು ಆಯೋಜಿಸಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಕಾರ್ಯದರ್ಶಿ ಪಿ. ಚಾಂದಬೀ ಮಾತನಾಡಿ, ಕನಿಷ್ಠ ಮೂರು ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದುಕೊರತೆ ಸಭೆ ನಡೆಯಬೇಕು. ಅಲ್ಲದೆ ಸರ್ಕಾರದ ಆದೇಶದ ಪ್ರಕಾರ ಪ್ರತಿ ತಿಂಗಳು ತಹಸೀಲ್ದಾರ್ ಮತ್ತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಕುಂದುಕೊರತೆ ಸಭೆಗಳು ನಡೆಯಬೇಕು ಆದರೆ, ನಮ್ಮ ತಾಲೂಕಿನಲ್ಲಿ ಈ ಸಭೆಗಳು ಕಾಲ, ಕಾಲಕ್ಕೆ ನಡೆಯುತ್ತಿಲ್ಲ, ಆದ್ದರಿಂದ ಕೂಡಲೆ ಪ್ರತಿತಿಂಗಳು ಸಭೆ ನಡೆಸಬೇಕೆಂದು ಕಾರ್ಯಕ್ರಮದ ಮೂಲಕ ತಾಲೂಕು ಆಡಳಿತಕ್ಕೆ ಒತ್ತಾಯಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಅಂಗವಿಕಲರು ಮತ್ತು ಪಾಲಕರು ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಮಹೇಶ್ವರಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಒಕ್ಕೂಟದ ತಾಲೂಕು ಅಧ್ಯಕ್ಷ ಜವಳಿಕೊಟ್ರೇಶಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಇಜಾಜ್ ಬೇಗ್, ಕ್ಷೇತ್ರ ಸಂಪನ್ಮೂಲ ಸಂಯೋಜಕ ತೇನ್‌ಸಿಂಗ್ ನಾಯ್ಕ, ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಗುರುಬಸವರಾಜ, ಅಸ್ಸಿಸಿ ಆಸ್ಪತ್ರೆಯ ಸಿಸ್ಟರ್ ಐಡಾ, ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಎನ್. ಕುಮಾರ, ಬಳ್ಳಾರಿ ತಾಲೂಕು ಅಧ್ಯಕ್ಷ ಎಂ. ನಾಗರಾಜ ಸೇರಿದಂತೆ ಇತರರು ಭಾಗವಹಿಸಿದ್ದರು. ಎನ್. ನಾಗರತ್ನ ಸ್ವಾಗತಿಸಿ, ಕೆ. ಹುಲುಗಪ್ಪ ವಂದಿಸಿದರು.
--
ಸಹ ಸಂಚಾಲಕರಾಗಿ ಬಿ.ಡಿ. ಚಿದಾನಂದ ನೇಮಕ
ಬಳ್ಳಾರಿ: ಬಿಜೆಪಿ ಬಳ್ಳಾರಿ ಜಿಲ್ಲಾ ಕಾನೂನು ಘಟಕದ ಸಹ ಸಂಚಾಲಕರಾಗಿ ನ್ಯಾಯವಾದಿ ಬಿ.ಡಿ. ಚಿದಾನಂದ ಅವರನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಕಾನೂನು ಘಟಕದ ಸಂಚಾಲಕ ಎಂ. ವಿನೋದ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಬಿಜೆಪಿಯನ್ನು ಸಂಘಟನೆಯ ದೃಷ್ಟಿಯಿಂದ, ಕಾನೂನು ಘಟಕದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುವ ಮೂಲಕ ಪಕ್ಷದ ಏಳ್ಗೆಗೆ ಶ್ರಮಿಸಬೇಕು. ಬಿಜೆಪಿಗೆ ಶ್ರೇಷ್ಠ ಭಾರತ ನಿರ್ಮಾಣ ಕಲ್ಪನೆ ಇದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ನೇಮಕಾತಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.