ಅವ್ಯವಹಾರಕ್ಕೆ ಆಸ್ಪದವಿಲ್ಲ: ಶಾಸಕ ಭೀಮಾನಾಯ್ಕ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 4
ಕಳೆದ ಬಾರಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ವಸತಿ ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಹಣ ನೀಡಿದವರಿಗೆ ಸೌಲಭ್ಯಗಳು ದೊರಕಿವೆ. ಆದರೆ ಈ ಬಾರಿ ನನ್ನ ಅವಧಿಯಲ್ಲಿ ಯಾರಿಗೂ ಹಣ ನೀಡಬೇಡಿ, ಮಧ್ಯವರ್ತಿಗಳು ಹಣ ಕೇಳಿದರೆ ನನ್ನ ಗಮನಕ್ಕೆ ತನ್ನಿ ಎಂದು ಶಾಸಕ ಎಸ್. ಭೀಮಾನಾಯ್ಕ ತಿಳಿಸಿದರು.
ತಾಲೂಕಿನ ಕಂದಗಲ್ಲು ಗ್ರಾಮಕ್ಕೆ ಮೊದಲ ಬಾರಿಗೆ ಶನಿವಾರ ಭೇಟಿ ನೀಡಿ, ಜನತೆಯಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಕಳೆದ ಬಾರಿ ಅಧಿಕಾರದಲ್ಲಿದ್ದ ಶಾಸಕರು ವಸತಿ ಮತ್ತು ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಂದ ತಲಾ ಹದಿನೈದರಿಂದ ಇಪ್ಪತ್ತು ಸಾವಿರ ಲಂಚ ಪಡೆದು ಫಲಾನುಭವಿ ಆಯ್ಕೆ ಮಾಡಿದ್ದಾರೆಂಬ ಆರೋಪಗಳಿವೆ ಎಂದರು.
ನನ್ನ ಅವಧಿಯಲ್ಲಿ ಶಾಸಕರ ಹೆಸರು ಹೇಳಿ ಹಣ ಕೇಳಿದರೆ ಕೂಡಲೆ ತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದರು. ಈಗ ಕ್ಷೇತ್ರದ ಯಾವುದೆ ಹಳ್ಳಿಗೆ ಹೋದರೂ ಕಳೆದ ಸಾಲಿನ ವಸತಿ ನಿರ್ಮಾಣದ ಹಣ ಬಂದಿಲ್ಲ ಎನ್ನುವ ಆರೋಪಗಳು ಜನತೆಯಿಂದ ಕೇಳಿಬರುತ್ತಿವೆ. ಎಲ್ಲ ಬಡ ಫಲಾನುಭವಿಗಳಿಗೆ ಹಣ ಮುಂಜೂರು ಮಾಡಲು ಈಗಾಗಲೆ ವಸತಿ ಸಚಿವರಲ್ಲಿ ಮಾತನಾಡಿದ್ದೇನೆ. ಹಣ ಕೊಡಿಸಲು ಬದ್ಧ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪರುಸಪ್ಪ ಮಾತನಾಡಿದರು. ಗ್ರಾಪಂ ಸದಸ್ಯರಾದ ಎಂ.ಎಸ್. ಚಂದ್ರಗೌಡ, ಬಾರಿಕರ ಮೂಗಮ್ಮ, ಮಾಜಿ ಸದಸ್ಯ ತಳವಾರ ನಾಗಣ್ಣ ಸೇರಿದಂತೆ 45ಕ್ಕೂ ಹೆಚ್ಚು ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್ ಸೇರ್ಪಡೆಗೊಂಡರು. ಮುಖಂಡರಾದ ಎಚ್. ನೀಲಕಂಠಪ್ಪ, ಕಡ್ಲಿ ವೀರೇಶ್, ಗೂಳಿ ಮಲ್ಲಿಕಾರ್ಜುನ, ಉತ್ತಂಗಿ ಚನ್ನಬಸಪ್ಪ, ಪಪಂ ಸದಸ್ಯ ಡಿಶ್ ಮಂಜುನಾಥ, ಅನಿಲ್ಕುಮಾರ್, ವಕೀಲ ಶಿವಾನಂದ, ಚಂದ್ರಪ್ಪ ಮೆಂಡಿ, ಬೂದಿ ಶಿವಕುಮಾರ್, ಎಚ್. ಫಕ್ಕೀರಪ್ಪ, ಗೋವಿಂದರಾವ್, ಮರುಳಸಿದ್ದಪ್ಪ, ಬತ್ತನಹಳ್ಳಿ ಯಂಕಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

