ಬಳ್ಳಾರಿ

ಮಕ್ಕಳ ಆಳಕ್ಕೆ ಇಳಿದು ಪಾಠ ಮಾಡಿ: ಕುಂವೀ

Published On :

ಕೂಡ್ಲಿಗಿ: ಮಕ್ಕಳ ಮನೋಭಾವದ ಆಳಕ್ಕೆ ಇಳಿದು ಅವರ ವಯೋವುತಿಗೆ ತಕ್ಕಂತೆ ಪಾಠ ಮಾಡುವ ಕಲೆ ಶಿಕ್ಷಕರಲ್ಲಿದ್ದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯ ಎಂದು ಸಾಹಿತಿ ಕುಂ. ವೀರಭದ್ರಪ್ಪ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ, ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರು ಬೋಧನೆಗೆ ಒತ್ತುಕೊಡುವ ಮುನ್ನ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ಬೋಧನೆಗೆ ಮುಂದಾದರೆ ಸುಲಭವಾಗಿ ಅರ್ಥೈಸಿಕೊಳ್ಳುವುದಲ್ಲದೆ, ಕುತೂಹಲ ಹೆಚ್ಚಿಸಿಕೊಂಡು ಜ್ಞಾನಾರ್ಜನೆ ವೃದ್ಧಿಸಿಕೊಳ್ಳುವರು ಎಂದು ತಿಳಿಸಿದರು.
ಪೂರ್ವ ತಯಾರಿ ಇಲ್ಲದೆ ಶಿಕ್ಷಕರು ಪಾಠ ಬೋಧನೆಗೆ ಮುಂದಾಗುವುದು ಸರಿಯಾದ ಕ್ರಮವಲ್ಲ. ಈಗಿನ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿದೆ. ಅಂಥವರ ಪ್ರಶ್ನೆಗಳನ್ನು ನಿಭಾಯಿಸುವಷ್ಟು ತಯಾರಿ ಅವಶ್ಯ ಎಂದರು.
ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ ಮಾತನಾಡಿ, ತಂದೆ, ತಾಯಿಯಿಂದ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗುವುದು ಒಳ್ಳೆಯ ಬೆಳವಣಿಗೆ. ತಾಯಿಯ ಹಿತನುಡಿ ನೂರು ಜನ ಶಿಕ್ಷಕರ ಬೋಧನೆಗೆ ಸಮ. ಶಿಕ್ಷಕರ ವ್ಯಕ್ತಿತ್ವ ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವಂತಿರಲಿ ಎಂದರು.
ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾಪೀಠದ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಆಡಳಿತಾಧಿಕಾರಿ ಕೆ.ಎಂ. ರಶ್ಮಿ ರವೀಂದ್ರಕುಮಾರ್, ಡಿವೈಎಸ್ಪಿ ಪಿ.ಡಿ. ಗಜಕೋಶ, ಪಿ.ವಿ. ಕೊತ್ಲಪ್ಪ, ಸೋಮಶೇಖರ ಆರಾಧ್ಯಮಠ, ಜಾತಪ್ಪ, ಎಚ್.ಎಂ. ಗಂಗಾಧರಸ್ವಾಮಿ, ಓಬಳೇಶ್, ಗುಪ್ಪಾಲ್ ಕೊಟ್ರೇಶ್, ದೇವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.