ಸುವರ್ಣ ಮಹೋತ್ಸವ: ಪೂರ್ವಸಿದ್ಧತಾ ಸಭೆ
ಕುರುಗೋಡು: ಪಟ್ಟಣದ ಸರ್ಕಾರಿ ಪಪೂ ಕಾಲೇಜಿಗೆ 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವ ಅಚರಣೆ ಕುರಿತು ಕಾಲೇಜಿನಲ್ಲಿ ಪೂರ್ವಸಿದ್ಧ್ದತಾ ಸಭೆ ನಡೆಯಿತು.
ಕಾಲೇಜು ಉಪ ಪ್ರಾಚಾರ್ಯ ಎಚ್. ರವೀಂದ್ರ ಮಾತನಾಡಿ, ಕಾಲೇಜು 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಹಕರಿಸುವಂತೆ ತಿಳಿಸಿದರು. ಪುರಾತನ ಕಾಲದಿಂದಲೂ ಐತಿಹಾಸಿಕ, ಪೌರಾಣಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮಹತ್ವ ಪಡೆದಿರುವ ಕುರುಗೋಡು, ಪಟ್ಟಣದಲ್ಲಿ 1963ರಲ್ಲಿ ತಾಲೂಕು ಬೋರ್ಡ್ ಒಡೆತನದಲ್ಲಿ ಪ್ರಾರಂಭವಾಗಿದ್ದ ಶಾಲೆ ನಂತರದ ದಿನಗಳಲ್ಲಿ ಸರ್ಕಾರಿ ಪ್ರೌಢಶಾಲೆಯಾಗಿ ಪರಿವರ್ತನೆಗೊಂಡು ನಾಡಗೌಡ ಮರಿಬಸವನಗೌಡರ ಸ್ಮಾರಕ ಸರ್ಕಾರಿ ಪದವಿಪೂರ್ವ ಕಾಲೇಜು ಎಂದು ಕರೆಸಿಕೊಂಡಿದೆ ಎಂದು ಶಿಕ್ಷಣ ಸಂಯೋಜಕ ಕೆ. ಗಾದಿಲಿಂಗಪ್ಪ ಹೇಳಿದರು.
ಕೆ. ಬಸಪ್ಪ ಅವರು ನಾಡಗೌಡರ ಜಯದೇವಗೌಡ ಅವರನ್ನು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವುದು ಸೂಕ್ತ ಎಂದರು. ಇದಕ್ಕೆ ಎಲ್ಲರು ಧ್ವನಿಗೂಡಿಸಿ ಒಮ್ಮತ ಸೂಚಿಸುವ ಮೂಲಕ ಹಿರಿಯ ಮುಖಂಡ ನಾಡಗೌಡರ ಜಯದೇವಗೌಡರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಬಿಇಒ ಅಶೋಕ್ಕುಮಾರ ಶಿಂಧಿಗಿ, ಪ್ರಾಚಾರ್ಯ ವೇಣುಗೋಪಾಲ ರೆಡ್ಡಿ, ಸೋಮಶೇಖರ ಗೌಡ, ಸಿ. ಯುವರಾಜ, ಟಿ. ಮಲ್ಲಿಕಾರ್ಜುನ, ತೆಂಗಿನ ಮಲ್ಲೇಶಪ್ಪ, ಚಾನಳ ಆನಂದ, ತೆಂಗಿನ ಸುರೇಶಪ್ಪ, ಟಿ. ಸಿದ್ದಪ್ಪ, ಎನ್. ಶ್ರೀನಿವಾಸ, ಕುಮಾರ, ಮಹಮದ್ಖಾನ್, ಹುಸೇನಬಾಷಾ, ಅಲ್ಲಾಸಾಬ್, ಕೆ.ಎಂ. ಲೋಕೇಶ, ಬಸವರಾಜ, ಅಭಿ, ಮಬಾಷಾ, ಟಿ. ವಿನೋದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

