ಬಳ್ಳಾರಿ

ಅಧ್ಯಾತ್ಮದತ್ತ ಒಲವು ಬದುಕಿಗೆ ಸ್ಫೂರ್ತಿ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 5
ಅಧ್ಯಾತ್ಮದತ್ತ ಮನಸ್ಸನ್ನು ಕೇಂದ್ರೀಕರಿಸುವ ಶಕ್ತಿ ಭಕ್ತಿಗೀತೆಗಳಿಗಿದ್ದು, ಜಂಜಾಟದ ಇಂದಿನ ಬದುಕಿನಲ್ಲಿ ದೇವರು, ಆಧ್ಯಾತ್ಮ, ಭಕ್ತಿ ಎಂಬುದು ಸ್ಫೂರ್ತಿ, ಸಂಭ್ರಮ ನೀಡುತ್ತದೆ ಎಂದು ಕೊಟ್ಟೂರು ಚಾನುಕೋಟಿ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.
ಅವರು ಭಾನುವಾರ ಮೊರಬ ಗ್ರಾಮದಲ್ಲಿ ಕೂಡ್ಲಿಗಿಯ ಗಂಗಾಮಾತೆ ಆಡಿಯೋ ಹೊರತಂದ ಮೊರಬ ಗ್ರಾಮದ ವೀರಭದ್ರಶ್ವರ ಸ್ವಾಮಿ ಕುರಿತಾದ ಮೊರಬದ ಸಿರಿವರ ಸಿಡಿ ಬಿಡುಗಡೆ ಹಾಗೂ ಬಳ್ಳಾರಿಯ ಸಿ.ಎಂ. ವೀರೇಂದ್ರ ಕುಮಾರ್ ಪ್ರಾಕಾಶನದ ವೀರಭದ್ರೇಶ್ವರ ಸ್ತುತಿ ಮತ್ತು ಸಂಕಲ್ಪ ವಚನಗಳ ಕೈಪಿಡಿ ಬಿಡುಗಡೆ ಕಾರ್ಯಕ್ರಮದದಲ್ಲಿ ಮಾತನಾಡಿದರು.
ದೈವಭಕ್ತಿ, ಆಧ್ಯಾತ್ಮ ಚಿಂತನೆ ಜನತೆಗೆ ಶಾಂತಿ, ನೆಮ್ಮದಿ ನೀಡುವುದಲ್ಲದೆ, ಅಧರ್ಮಕ್ಕೆ ಆಸ್ಪದ ನೀಡದ ಮನಸ್ಥಿತಿ ನಿರ್ಮಾಣವಾಗುತ್ತದೆ. ಪ್ರಸಿದ್ಧ ಪುರಾಣಗಳಿಂದ ತಿಳಿದು ಬರುವ ಸಂಗತಿಯೆಂದರೆ ವೀರಭದ್ರೇಶ್ವರ ಸ್ವಾಮಿ ಜಗತ್ತಿನಲ್ಲಿ ಅನೀತಿ, ಅಧರ್ಮಗಳನ್ನು ಸಂಹರಿಸುವಲ್ಲಿ ಯಶಸ್ವಿಯಾಗಿ, ಲೋಕ ಕಲ್ಯಾಣಕ್ಕೆ ಮುಡಿಪಾಗಿದ್ದವರು ಎಂದು ತಿಳಿಯುತ್ತದೆ. ಇಂಥ ದೇವರ ಉತ್ಸವ, ಜಾತ್ರೆಗಳು ದೈವೀಭಕ್ತಿಯ ಜತೆ ಮಾನವೀಯ ಸಂಬಂಧಗಳನ್ನು ಒಂದೆಡೆ ಬೆಸೆಯಲು ಸಾರ್ಥಕವಾಗುತ್ತವೆ ಎಂದರು.
ಕೊಟ್ಟೂರೇಶ್ವರ, ಉಜ್ಜಿನಿ ಮರುಳಸಿದ್ದೇಶ್ವರ, ಗಾಣಗಟ್ಟೆ ಮಾಯಮ್ಮದೇವಿ, ಕೂಲಹಳ್ಳಿ ಕೋಲಶಾಂತೇಶ್ವರ, ಕಾನಮಡುಗು ಶರಣಬಸವೇಶ್ವರ ಸೇರಿದಂತೆ ಅನೇಕ ಅಧ್ಮಾತ್ಮ ನೆಲೆಗಳ ಪ್ರಸಿದ್ಧ ದೇವರ ಕುರಿತ ಭಕ್ತಿಗೀತೆಗಳ  ಧ್ವನಿಸುರುಳಿ ಹೊರತರುವಲ್ಲಿ ಸಾಹಿತಿಗಳ ಹೆಜ್ಜೆ ಗುರುತುಗಳು ಎದ್ದು ಕಾಣುತ್ತಿವೆ ಎಂದು ಮೆಚ್ಚುಗೆ ಸೂಚಿಸಿದರು.
ಬಳ್ಳಾರಿಯ ವಿಮ್ಸ್ ಪ್ರಾಧ್ಯಾಪಕ ಸಿ.ಎಂ. ವೀರೇಂದ್ರಕುಮಾರ್ ಮಾತನಾಡಿದರು. ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಎ. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಎಸ್. ಹಿರೇಮಠ, ಬಣವಿಕಲ್ಲು ಎರ್ರಿಸ್ವಾಮಿ, ಸಿಡಿಗೆ ಸಾಹಿತ್ಯ ರಚಿಸಿದ ಭೀಮಣ್ಣ ಗಜಾಪುರ, ಕೆ.ಎಂ. ವೀರೇಶ್, ಬಿ.ಎಂ. ಚನ್ನವೀರಸ್ವಾಮಿ, ಜಿಪಂ ಸದಸ್ಯೆ ಮೀನಾಕ್ಷಮ್ಮ, ಮಾಜಿ ಸದಸ್ಯ ಎಂ. ಶಿವಣ್ಣ, ತಾಪಂ ಮಾಜಿ ಅಧ್ಯಕ್ಷೆ ಪ್ರಮೀಳಾ ಚಿದಾನಂದಗೌಡ, ಬಣಕಾರ ವೀರಭದ್ರಪ್ಪ, ಎ. ಕೊಟ್ರೇಶ್, ಕೆ. ಮಂಜುನಾಥ, ಪೂಜಾರಿ ವೀರಣ್ಣ, ಜಗದೀಶ್‌ಗೌಡ, ಅಜ್ಜಯ್ಯ, ಕರಿಬಸಜ್ಜಯ್ಯ, ಕೆ.ಎಂ. ವೀರಯ್ಯ, ಕೆ.ಎಂ. ಶರಣಯ್ಯ, ಮೂಲಿಮನಿ ಈರಣ್ಣ, ಹಂಚಿನಮನಿ ಈರಣ್ಣ, ಎಂ.ಎಂ. ವೀರಭದ್ರಸ್ವಾಮಿ, ಸೋಮಶೇಖರ ಆರಾಧ್ಯ, ಕೊಟ್ರೇಶ್ ಅಯ್ಯನಹಳ್ಳಿ, ಬಿ. ನಾಗರಾಜ, ಬಾರಿಕರ ಮಂಜುನಾಥ, ಡಿ. ಮಲ್ಲಾಪುರ ಕುಮಾರಸ್ವಾಮಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.