ಪುಸ್ತಕ ಪ್ರೇಮಿಗಳಿಗೆ ನಿರಾಸೆ ಉತ್ಸವ
ಉತ್ಸವದಲ್ಲಿ 60ಕ್ಕೂ ಹೆಚ್ಚು ಪುಸ್ತಕ ಪ್ರದರ್ಶನ, ಮಾರಾಟ ಕೇಂದ್ರ ತೆರೆದರೂ ಬಂದಿದ್ದ ಮಾರಾಟಗಾರರು ಬೆರಳೆಣಿಕೆ. ಅವರೂ ಕೆಲವೇ ಪುಸ್ತಕ ತಂದು ಪುಸ್ತಕಪ್ರಿಯರಿಗೆ ನಿರಾಸೆ ತಂದರು.ಮಡಿಕೇರಿಯಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ. 7, 8, 9ರಂದು ನಡೆಯಿತು. ಇದಾದ ಮರುದಿನವೇ ಜ. 10, 11, 12ರಂದು ಹಂಪಿ ಉತ್ಸವ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪುಸ್ತಕ ಪ್ರದರ್ಶನ, ಮಾರಾಟಗಾರರು ಹಂಪಿ ಉತ್ಸವದಲ್ಲಿ ಅಷ್ಟು ಭಾಗವಹಿಸಿಲ್ಲ.
ಉತ್ಸವದ ಎರಡನೇ ದಿನ ಪುಸ್ತಕ ಪ್ರೇಮಿಗಳು ಖರೀದಿಸಲು ಪುಸ್ತಕಗಳನ್ನು ಹುಡುಕಾಡುತ್ತಿದ್ದರು. ಈ ಸಲದ ಉತ್ಸವದಲ್ಲಿ ನಾಮಕೆವಾಸ್ತೆ ಎಂಬಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ, ಶಿಲ್ಪಕಲಾ ಅಕಾಡೆಮಿ, ಸಂಗೀತ ನೃತ್ಯ ಅಕಾಡಮಿ, ನಾಟಕ ಅಕಾಡೆಮಿ ಸೇರಿದಂತೆ ಕೆಲವೇ ಕೆಲವು ಪುಸ್ತಕ ಪ್ರಕಾಶಕರು ಭಾಗವಹಿಸಿದ್ದರು. ಮೊದಲ ದಿನ ಪುಸ್ತಕ ಪ್ರದರ್ಶನಕ್ಕೆ ಒಬ್ಬರಿಗೆ ರು. 20 ಪ್ರವೇಶ ಶುಲ್ಕವನ್ನು ನಿಗದಿ ಮಾಡಿದ್ದರಿಂದ ಅಷ್ಟೊಂದು ಜನರು ಭೇಟಿ ನೀಡಿರಲಿಲ್ಲ. ಆದರೆ ಶನಿವಾರ ಎಲ್ಲರಿಗೂ ಪ್ರವೇಶ ಉಚಿತ ಮಾಡಿದ್ದರಿಂದ, ಶನಿವಾರ ಶಾಲೆ-ಕಾಲೇಜಿಗಳಿಗೆ ಅರ್ಧ ರಜೆಯಾಗಿದ್ದರಿಂದ ಮಧ್ಯಾಹ್ನದಿಂದ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು, ಜನತೆ ಸಂಜೆ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ಪುಸ್ತಕ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಈ ವರ್ಷದ ಉತ್ಸವದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಪುಸ್ತಕ ಮಾರಾಟ ಮಾಡಿದರೂ ರು. 50 ಸಾವಿರ ಮೌಲ್ಯದ ಪುಸ್ತಕ ಮಾರಾಟವಾಗುತ್ತಿಲ್ಲ. ವೈವಿಧ್ಯಮಯ ಶೀರ್ಷಿಕೆಯ ಪುಸ್ತಕಗಳು ಬಂದಿದ್ದರೂ ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗದಿಂದ 482 ಶೀರ್ಷಿಕೆ ಪುಸ್ತಕಗಳನ್ನು ಮಾರಾಟಕ್ಕೆ ವ್ಯವಸ್ಥೆಗೊಳಿಸಲಾಗಿದೆ. ವಿಜಯನಗರ, ಹಂಪಿ, ಸಮಾಜವಾದ, ದೇವಾಲಯ ಕೋಶಗಳು ಮುಂತಾದ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿವೆ. ಶೇ. 50ರಷ್ಟು ರಿಯಾಯಿತಿ ದರದಲ್ಲಿ ಮಾರಲಾಗತ್ತಿದೆ.
ಹಂಪಿ ವಿವಿ ರು. 1 ಕೋಟಿ ಮೌಲ್ಯ ಪುಸ್ತಕ:
ಉತ್ಸವದಲ್ಲಿ ದಿನಕ್ಕೆ ರು. 1 ಲಕ್ಷ ಮೌಲ್ಯದ ಪುಸ್ತಕಗಳು ಮಾರಾಟವಾಗಬೇಕಾಗಿತ್ತು. ಈ ವರ್ಷ ಅಷ್ಟು ಪುಸ್ತಕಗಳು ಮಾರಾಟವಾಗುತ್ತಿಲ್ಲ. ಹಂಪಿ ವಿಶ್ವವಿದ್ಯಾಯದ ಪ್ರಸಾರಂಗದಿಂದ ರು. 1 ಕೋಟಿ ಮೌಲ್ಯದ ಪುಸ್ತಕಗಳನ್ನು ಮಾರಾಟಕ್ಕೆ ತಂದಿದೆ ಎಂದು ಪ್ರಸಾರಂಗದ ರವೀಂದ್ರ ತಿಳಿಸಿದ್ದಾರೆ. ವಿವಿಯ ದೃಶ್ಯಕಲಾ ವಿಭಾಗದ ಚಿತ್ರಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಪ್ರಥಮ ಬಾರಿಗೆ ವ್ಯವಸ್ಥೆ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

